ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಷಲ್ ಪಟೇಲ್ ಈ ಆವೃತ್ತಿಯ ಶ್ರೇಷ್ಠ ಬೌಲರ್ ಎಂದು ಹೊಗಳಿದ ಗೌತಮ್ ಗಂಭೀರ್

IPL 2021: Gautam Gambhir praises Harshal Patel said he is bowler of the season

ಈ ಬಾರಿ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಈಗಾಗಲೇ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಈಗ ಆರ್‌ಸಿಬಿ ಟಾಪ್ 2 ಸ್ಥಾನಗಳ ಮೇಲೆ ದೃಷ್ಟಿನೆಟ್ಟಿದ್ದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಆರ್‌ಸಿಬಿ ಈ ಬಾರಿಯ ಆವೃತ್ತಿಯಲ್ಲಿ ಈ ಮಟ್ಟಕ್ಕೆ ಅದ್ಭುತ ಪ್ರದರ್ಶನ ನೀಡಲು ತಂಡದ ಸರ್ವಾಂಗೀಣ ಪ್ರದರ್ಶನ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ವೇಗಿ ಹರ್ಷಲ್ ಪಟೇಲ್ ನೀಡಿದ ಅಮೋಘ ಪ್ರದರ್ಶನ ತಂಡಕ್ಕೆ ಮತ್ತಷ್ಟು ಹೆಚ್ಚಿನ ಶಕ್ತಿ ನೀಡಿದೆ.

ಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟುಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟು

ಇನ್ನು ಹರ್ಷಲ್ ಪಟೇಲ್ ಈ ಬಾರಿಯ ಐಪಿಎಲ್‌ನಲ್ಲಿ ನೀಡುತ್ತಿರುವ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿಶೇಷವಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹರ್ಷಲ್ ಪಟೇಲ್ ಈ ಆವೃತ್ತಿಯ ಶ್ರೇಷ್ಠ ಬೌಲರ್ ಎಂದು ಗೌತಮ್ ಗಂಭೀರ್ ಬಣ್ಣಿಸಿದ್ದಾರೆ. ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆಗೆ ಮಾತನಾಡಿದ ಗಂಭೀರ್ ಹರ್ಷಲ್ ಈ ಬಾರಿಯ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದ ಕಾರಣಕ್ಕೆ ಹರ್ಷಲ್ ಪಟೇಲ್ ಅವರನ್ನು 'ಪರ್ಪಲ್ ಪಟೇಲ್" ಎಂದಿದ್ದಾರೆ ಗೌತಮ್ ಗಂಭೀರ್.

MI vs RR ಪಂದ್ಯದ ಬಳಿಕ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆMI vs RR ಪಂದ್ಯದ ಬಳಿಕ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆ

"ಹರ್ಷಲ್ ಪಟೇಲ್ ಈ ಆವೃತ್ತಿಯ ಐಪಿಎಲ್‌ನ ಶ್ರೇಷ್ಠ ಬೌಲರ್ ಎನಿಸಿದ್ದಾರೆ. ಆತ ತನ್ನ ತಂಡಕ್ಕಾಗಿ ಕಠಿಣ ಓವರ್‌ಗಳನ್ನು ಎಸೆದಿದ್ದಾರೆ. ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ವಿರುದ್ಧ ಡೆತ್‌ ಓವರ್‌ನಲ್ಲಿ ಸತತವಾಗಿ ಬೌಲಿಂಗ್ ಮಾಡಿದ್ದಾರೆ. ಒಂದು ಪಂದ್ಯದಲ್ಲಿ ಐದು ವಿಕೆಟ್, ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್ ಪಡೆದಿದ್ದಾರೆ. ಈ ಸಾಧನೆಗಳೇ ಅವರು ಎಷ್ಟು ಯಶಸ್ವಿ ಬೌಲರ್ ಎಂಬುದನ್ನು ಹೇಳುತ್ತದೆ" ಎಂದಿದ್ದಾರೆ ಗೌತಮ್ ಗಂಭೀರ್.

"ಬೌಲಿಂಗ್‌ನಲ್ಲಿ ಪವರ್‌ಪ್ಲೇ ಸಂದರ್ಭದಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ಆರ್‌ಸಿಬಿ ಎದುರಾಳಿಗೆ ತಿರುಗೇಟು ನೀಡಲು ಯಶಸ್ವಿಯಾಗುತ್ತಿದೆ. ಈ ಎಲ್ಲದರ ಶ್ರೇಯಸ್ಸು ಕೂಡ ಹರ್ಷಲ್ ಪಟೇಲ್ ಹಾಗೂ ಯುಜ್ವೇಂದ್ರ ಚಾಹಲ್‌ಗೆ ಸಲ್ಲಬೇಕು" ಎಂದಿದ್ದಾರೆ ಗೌತಮ್ ಗಂಭೀರ್.

ಐಪಿಎಲ್‌ನ ಈ ಪ್ರಮುಖ ನಿಯಮವನ್ನು ಬದಲಾಯಿಸಲು ಒತ್ತಾಯಿಸಿದ ಆಕಾಶ ಚೋಪ್ರಐಪಿಎಲ್‌ನ ಈ ಪ್ರಮುಖ ನಿಯಮವನ್ನು ಬದಲಾಯಿಸಲು ಒತ್ತಾಯಿಸಿದ ಆಕಾಶ ಚೋಪ್ರ

ಇನ್ನು ಆರ್‌ಸಿಬಿ ಪರವಾಗಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿ ಸುಸ್ಥಿತಿಗೆ ತಂದು ನಿಲ್ಲಿಸುತ್ತಿದ್ದಾರೆ. ಆದರೆ ಪಂದ್ಯವನ್ನು ಆರ್‌ಸಿಬಿಗೆ ಗೆಲ್ಲಿಸಿಕೊಡುತ್ತಿರುವುದು ಬೌಲರ್‌ಗಳು. ಬ್ಯಾಟ್ಸ್‌ಮನ್‌ಗಳು ಕೂಡ ಗೆಲ್ಲಿಸಲು ಸಾಧ್ಯವಾದರೆ ಇಲ್ಲಿಂದ ಮೂರ್ನಾಲ್ಕು ಪಂದ್ಯಗಳನ್ನು ಆರ್‌ಸಿಬಿ ಗೆಲ್ಲಲು ಸಾಧ್ಯವಿದೆ" ಎಂದಿದ್ದಾರೆ ಗೌತಮ್ ಗಂಭೀರ್.

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

ಐಪಿಎಲ್‌ನ ಇತಿಹಾಸದುದ್ದಕ್ಕೂ ಆರ್‌ಸಿಬಿ ಅತ್ಯಂತ ಸ್ಪೋಟಕ ಆಟಗಾರರನ್ನು ಹೊಂದಿದ ಹಿನ್ನಲೆಯಿದೆ. ಹಾಗಿದ್ದರೂ ಆರ್‌ಸಿಬಿ ಈವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಆರ್‌ಸಿಬಿ ಬೌಲಿಂಗ್ ವಿಭಾಗ ಡೆತ್ ಓವರ್‌ನಲ್ಲಿ ವಿಫಲವಾಗುತ್ತಾ ಬಂದಿರುವುದು. ಆದರೆ ಈ ಬಾರಿ ಹರ್ಷಲ್ ಪಟೇಲ್ ಡೆತ್ ಓವರ್‌ನಲ್ಲಿ ಅಮೋಘವಾದ ಪ್ರದರ್ಶನ ನೀಡುವ ಮೂಲಕ ಆ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ ಎಂದು ಹೊಗಳಿದ್ದಾರೆ ಗಂಭೀರ್.

ಪಂತ್ ಮತ್ತು ಧೋನಿಯಲ್ಲಿ ಉತ್ತಮ ನಾಯಕನಾರು ಎಂಬ ಪ್ರಶ್ನೆಗೆ ವಿವಾದಾತ್ಮಕ ಉತ್ತರ ನೀಡಿದ ಸೆಹ್ವಾಗ್ಪಂತ್ ಮತ್ತು ಧೋನಿಯಲ್ಲಿ ಉತ್ತಮ ನಾಯಕನಾರು ಎಂಬ ಪ್ರಶ್ನೆಗೆ ವಿವಾದಾತ್ಮಕ ಉತ್ತರ ನೀಡಿದ ಸೆಹ್ವಾಗ್

RCB ನಿನ್ನೆ ಸೋಲಲು Padikkal ಮುಖ್ಯ ಕಾರಣವೇ | Oneindia Kannada

"ಕಳೆದ ಹಲವು ವರ್ಷಗಳಿಂದ ಆರ್‌ಸಿಬಿಯ ಮುಖ್ಯ ಸಮಸ್ಯೆಯೆಂದರೆ ಅವರ ಡೆತ್ ಬೌಲಿಂಗ್. ಆದರೆ ಈಗ ಹರ್ಷಲ್ ಪಟೇಲ್ ಈ ಬಾರಿ ಡೆತ್ ಬೌಲಿಂಗ್‌ನ ಜವಾಬ್ಧಾರಿಯನ್ನು ಏಕಾಂಗಿಯಾಗಿ ಹೊತ್ತುಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಪರ್ಪಲ್ ಟ್ರೋಫಿಯನ್ನು ಧರಿಸಿದ್ದಾರೆ" ಎಂದಿದ್ದಾರೆ ಗೌತಮ್ ಗಂಭೀರ್.

Story first published: Thursday, October 7, 2021, 10:01 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X