ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಕಂಡ ಅತ್ಯಂತ ವಿಚಿತ್ರ ನಾಯಕತ್ವ ಎಂದು ತಿವಿದ ಗೌತಮ್ ಗಂಭೀರ್

IPL 2021: Gautam Gambhir slams Eoin Morgan Captaincy

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಹಾಲಿ ನಾಯಕನ ವಿರುದ್ಧ ಹರಿಹಾಯ್ದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ನಾಯಕನಾಗಿ ಇಯಾನ್ ಮಾರ್ಗನ್ ಅವರ ಪ್ರದರ್ಶನಕ್ಕೆ ಗಂಭೀರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಎರಡನೇ ಓವರ್‌ಅನ್ನು ಎಸೆಯಲು ಇಯಾನ್ ಮಾರ್ಗನ್ ವರುಣ್ ಚಕ್ರವರ್ತಿಗೆ ಚೆಂಡು ನೀಡಿದ್ದರು. ಈ ಓವರ್‌ನಲ್ಲಿ ವರುಣ್ ಚಕ್ರವರ್ತಿ ನಾಯಕ ವಿರಾಟ್ ಕೊಹ್ಲಿ ಹಾಗು ರಜತ್ ಪಾಟಿದಾರ್ ವಿಕೆಟ್ ಪಡೆದು ಆರ್‌ಸಿಬಿಗೆ ದೊಡ್ಡ ಆಘಾತವನ್ನು ನೀಡಿದ್ದರು. ಆದರೆ ನಂತರ ಏಳನೇ ಓವರ್‌ನಲ್ಲಿ ಎರಡನೇ ಓವರ್ ಎಸೆಯುವ ಅವಕಾಶವನ್ನು ಪಡೆದರು ವರುಣ್ ಚಕ್ರವರ್ತಿ.

ಐಪಿಎಲ್ 2021: ಎಬಿಡಿ, ಮ್ಯಾಕ್ಸ್‌ವೆಲ್ ಭರ್ಜರಿ ಆಟ, ಕೆಕೆಆರ್‌ಗೆ 205 ರನ್‌ಗುರಿಐಪಿಎಲ್ 2021: ಎಬಿಡಿ, ಮ್ಯಾಕ್ಸ್‌ವೆಲ್ ಭರ್ಜರಿ ಆಟ, ಕೆಕೆಆರ್‌ಗೆ 205 ರನ್‌ಗುರಿ

6 ಓವರ್‌ಗಳಲ್ಲಿ ಹಿಡಿತ ಸಾಧಿಸಬಹುದಿತ್ತು

6 ಓವರ್‌ಗಳಲ್ಲಿ ಹಿಡಿತ ಸಾಧಿಸಬಹುದಿತ್ತು

ನಾಯಕ ಇಯಾನ್ ಮಾರ್ಗನ್ ಅವರ ಈ ತಂತ್ರವನ್ನು ಗಂಭೀರ್ ಕಟುವಾಗಿ ಟೀಕಿಸಿದ್ದಾರೆ. "ಇದು ನಾನು ನನ್ನ ಜೀವನದಲ್ಲಿ ಕಂಡ ಅತ್ಯಂತ ಕಳಪೆ ಹಾಗೂ ವಿಲಕ್ಷಣವಾದ ನಾಯಕತ್ವ. ವರುಣ್ ಚಕ್ರವರ್ತಿ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ಆದರೆ ಮುಂದಿನ ಓವರ್ ಎಸೆಯಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಅವರನ್ನು ಉತ್ತಮವಾಗಿ ಬಳಸಿಕೊಂಡಿದ್ದರೆ ಮೊದಲ ಆರು ಓವರ್‌ನಲ್ಲಿ ಪಂದ್ಯವನ್ನು ನಿಮ್ಮತ್ತ ವಾಲುವಂತೆ ಮಾಡಬಹುದಿತ್ತು" ಎಂದು ಗಂಭೀರ್ ಹೇಳಿದ್ದಾರೆ.

ಭಾರತೀಯ ನಾಯಕನಿಂದ ಈ ಪ್ರಮಾದವಾಗಿಲ್ಲ!

ಭಾರತೀಯ ನಾಯಕನಿಂದ ಈ ಪ್ರಮಾದವಾಗಿಲ್ಲ!

" ಮೊದಲ ಆರು ಓವರ್‌ಗಳಲ್ಲಿ ವರುಣ್ ಚಕ್ರವರ್ತಿ ಮೂರನೇ ವಿಕೆಟ್ ಪಡೆದಿದ್ದರೆ ಅಥವಾ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಫೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾಗಿರುತ್ತಿದ್ದರೆ ಈ ಆಟ ಬಹುತೇಕ ಅಲ್ಲಿಗೆ ಅಂತ್ಯವಾಗುತ್ತಿತ್ತು. ಖುಷಿಯ ಸಂಗತಿಯೆಂದರೆ ಈ ಪ್ರಮಾದವನ್ನು ಭಾರತೀಯ ನಾಯಕ ಮಾಡಿಲ್ಲ. ಯಾಕೆಂದರೆ ಭಾರತೀಯ ನಾಯಕ ಈ ರೀತಿ ಮಾಡಿದ್ದರೆ ಸಾಕಷ್ಟು ಜನರು ಆ ನಾಯಕನ ವಿರುದ್ಧ ಕಟು ಮಾತುಗಳನ್ನು ಹೊರಹಾಕುತ್ತಿದ್ದರು" ಎಂದು ಗಂಭೀರ್ ಹೇಳಿದ್ದಾರೆ.

ಇದನ್ನು ನಾನು ನಿರೀಕ್ಷಿಸಿರಲಿಲ್ಲ

ಇದನ್ನು ನಾನು ನಿರೀಕ್ಷಿಸಿರಲಿಲ್ಲ

"ನಾನು ಕಂಡ ಅತ್ಯಂತ ವಿಚಿತ್ರವಾದ ನಾಯಕತ್ವ ಇದು. ಇದನ್ನು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ" ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್ ಜೊತೆ ಪಂದ್ಯದ ಮೊದಲಾರ್ಧದ ವೇಳೆ ಮಾತನಾಡುತ್ತಾ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬೃಹತ್ ಗುರಿ ನೀಡಿದ ಆರ್‌ಸಿಬಿ

ಬೃಹತ್ ಗುರಿ ನೀಡಿದ ಆರ್‌ಸಿಬಿ

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭಿಕ ಆಘಾತದ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಅದ್ಭುತ ಪ್ರದರ್ಶನದಿಂದ ದೊಡ್ಡ ಮೊತ್ತವನ್ನು ಗಳಿಸಿತು. ಇಬ್ಬರು ಆಟಗಾರರು 70+ ರನ್‌ಗಳಿಸಿದ್ದು ಆರ್‌ಸಿಬಿ 205 ರನ್‌ಗಳ ಗುರಿಯನ್ನು ಮುಂದಿಟ್ಟಿತು.

Story first published: Monday, April 19, 2021, 9:17 [IST]
Other articles published on Apr 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X