ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ್ಮವಿಶ್ವಾಸ ಹೆಚ್ಚಲು ಅವರಿಬ್ಬರು ಕಾರಣ: ಆರ್‌ಸಿಬಿ ತಂಡದ ಅನುಭವ ಬಿಚ್ಚಿಟ್ಟ ಮ್ಯಾಕ್ಸ್‌ವೆಲ್

IPL 2021: Glenn Maxwell praises RCB duo Virat Kohli and AB de Villiers for his confidence

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡಿದ ಆಸ್ಟ್ರೇಲಿಯಾ ಮೂಲದ ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಘ ಪ್ರದರ್ಶನ ನೀಡಿದರು. ಆರ್‌ಸಿಬಿ ಪರವಾಗಿ ಟೂರ್ನಿಯುದ್ದಕ್ಕೂ ಮ್ಯಾಕ್ಸ್‌ವೆಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಈ ಹಿಂದೆ ಅನೇಕ ಐಪಿಎಲ್ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಪಾಲ್ಗೊಂಡಿದ್ದರಾದರೂ ಪ್ರತಿಬಾರಿಯೂ ಮ್ಯಾಕ್ಸ್‌ವೆಲ್ ವಿಫಲವಾಗುತ್ತಿದ್ದರು. ಆದರೆ ಈ ಬಾರಿ ನಿರೀಕ್ಷೆಗೆ ಮೀರಿದ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ತಂಡ ಪ್ಲೇ ಆಫ್ ಹಂತಕ್ಕೇರಲು ಕಾರಣರಾದರು.

ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!

ಈ ಅದ್ಭುತ ಯಶಸ್ಸಿನ ನಂತರ ಇದೀಗ ಟಿ20 ವಿಶ್ವಕಪ್‌ನಲ್ಲಿ ಆಡಲು ಮ್ಯಾಕ್ಸ್‌ವೆಲ್ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಐಪಿಎಲ್‌ನಲ್ಲಿ ತನ್ನ ಪ್ರದರ್ಶನದ ಬಗ್ಗೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದ ಹಿಂದೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಅವರ ಕೊಡುಗೆಯನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲದೆ ಟೂರ್ನಿಯುದ್ದಕ್ಕೂ ಆರ್‌ಸಿಬಿ ಈ ಇಬ್ಬರು ಶ್ರೇಷ್ಠ ಆಟಗಾರರ ಜೊತೆಗೆ ಉತ್ತಮ ರೀತಿಯಲ್ಲಿ ಬೆರೆತುಕೊಂಡಿದ್ದರು ಎಂಬುದನ್ನು ಕೂಡ ಹೇಳಿಕೊಂಡಿದ್ದಾರೆ.

ನಾನು ತುಂಬಾ ಅದೃಷ್ಟಶಾಲಿ

ನಾನು ತುಂಬಾ ಅದೃಷ್ಟಶಾಲಿ

"ಪ್ರತಿದಿನ ಕೂಡ ನಾನು ಏನಾದರೂ ಹೊಸ ಸಂಗತಿಯನ್ನು ಕಲಿಯುತ್ತಿದ್ದೆ, ಹೊಸದನ್ನು ಕಂಡುಕೊಳ್ಳುತ್ತಿದ್ದೆ. ನಾನು ವಿರಾಟ್ ಮತ್ತು ಎಬಿ ಜೊತೆಗೆ ಉತ್ತಮವಾಗಿ ಹೊಂದಿಕೊಂಡಿದ್ದೆ. ಆಟದ ವಿಚಾರವಾಗಿ ಅವರು ಹೊಂದಿರುತ್ತಿದ್ದ ಮನೋಭಾವವನ್ನು ಅರ್ಥ ಮಾಡಿಕೊಳ್ಳುತ್ತಿದ್ದೆ. ಈ ಒಂದು ಕಾರಣಕ್ಕೆ ನಾನು ಐಪಿಎಲ್‌ಗೆ ಸದಾ ಕೃತಜ್ಞನಾಗಿರುತ್ತೇನೆ. ಅದೇನೆಂದರೆ ಇಬ್ಬರು ಶ್ರೇಷ್ಠ ಕ್ರಿಕೆಟ್ ಆಟಗಾರರನ್ನು ನಾನು ಒಂದೇ ತಂಡದಲ್ಲಿದ್ದರು. ಅವರಿಬ್ಬರು ಕೂಡ ಆಟದ ವಿಚಾರವಾಗಿ ಮುಕ್ತವಾಗಿ ನನ್ನೊಂದಿಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ನಾನು ತುಂಬಾ ಅದೃಷ್ಟಶಾಲಿ" ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್.

10 ಅಡಿ ಎತ್ತರ ಬೆಳೆದಂತೆ ಅನುಭವ

10 ಅಡಿ ಎತ್ತರ ಬೆಳೆದಂತೆ ಅನುಭವ

ಇನ್ನು ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಲಿಯರ್ಸ್ ಅವರಿಂದ ತಾನು ಮಾತ್ರವೇ ಕಲಿಯುತ್ತಿರಲಿಲ್ಲ ಅವರು ಕೂಡ ನನ್ನ ಬಳಿ ಕೆಲ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹೀಗಾಗಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿ ನಾನು ಹತ್ತು ಅಡಿ ಎತ್ತರವಾದಂತೆ ಅನುಭವವಾಗುತ್ತಿತ್ತು. ಈ ರೀ ತುಂಬಾ ಮುಕ್ತವಾಗಿ ಸಂವಾದಗಳು ನಡೆಯಯತ್ತಿತ್ತು ಎಂಬುದನ್ನು ಕೂಡ ಗ್ಲೆನ್ ಮ್ಯಾಕ್ಸ್‌ವೆಲ್ ವಿವರಿಸಿದ್ದಾರೆ.

ನನ್ನ ಆಟದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು

ನನ್ನ ಆಟದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು

"ಅವರು ನನ್ನ ಆಟವನ್ನು ನೋಡುತ್ತಾ, ಆ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ ನನಗೆ ಬೆಂಬಲವನ್ನು ನೀಡುತ್ತಿದ್ದರು. ಹೀಗಾಗಿ ಆ ಮಾತುಗಳು ನನ್ನನ್ನು 10 ಅಡಿ ಎತ್ತರದಲ್ಲಿರುವಂತೆ ಭಾವನೆ ಮೂಡಿಸುತ್ತಿತ್ತು. ಅದು ತುಂಬಾ ಆತ್ಮ ವಿಶ್ವಾಸ ತುಂಬುತ್ತಿತ್ತು ಹಾಗೂ ನನಗೆ ಬಹಳ ಸಂತೋಷವನ್ನು ನೀಡುತ್ತಿತ್ತು" ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ವಿವರಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ ಪ್ಲೇಆಫ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಾಲ್ಕನೇ ಸ್ಥಾನವನ್ನು ಪಡೆದು ಟೂರ್ನಿಯನ್ನು ಅಂತ್ಯಗೊಳಿಸಿದೆ. ಈ ಮೂಲಕ ಐಪಿಎಲ್ 14ನೇ ಆವೃತ್ತಿಲ್ಲಿಯೂ ಆರ್‌ಸಿಬಿ ನಿರಾಸೆ ಅನುಭವಿಸಿತು.

ಆರ್‌ಸಿಬಿ ಪರ ಅಮೋಘ ಪ್ರದರ್ಶನ

ಆರ್‌ಸಿಬಿ ಪರ ಅಮೋಘ ಪ್ರದರ್ಶನ

ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪಾಲಾಗುವ ಮುನ್ನ 2020ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. ಆದರೆ ಟೂರ್ನಿಯುದ್ದಕ್ಕೂ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದ ಮ್ಯಾಕ್ಸ್‌ವೆಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಇಡೀ ಟೂರ್ನಿಯಲ್ಲಿ ಕನಿಷ್ಠ ಒಂದು ಸಿಕ್ಸರ್ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಸಿಡಿದಿರಲಿಲ್ಲ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಪ್ರದರ್ಶನ ನೀಡಿದ್ದಾರೆ ಮ್ಯಾಕ್ಸ್‌ವೆಲ್. ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ತಂಡದ ಬೆನ್ನೆಲುಬಾಗಿ ನಿಂತಿದ್ದ ಅವರು 42.75ರ ಸರಾಸರಿಯಲ್ಲಿ 144.10 ಸ್ಟ್ರೈಕ್‌ರೇಟ್‌ನಲ್ಲಿ 513 ರನ್‌ಗಳನ್ನನು ಗಳಿಸಿದ್ದಾರೆ. ಇನ್ನು ಆರ್‌ಸಿಬಿಯಲ್ಲಿ ನಿಡಿದ ಉತ್ತಮ ಪ್ರದರ್ಶನವನ್ನು ಟಿ20 ವಿಶ್ವಕಪ್‌ನಲ್ಲಿಯೂ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Tuesday, October 19, 2021, 20:02 [IST]
Other articles published on Oct 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X