ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಜೊತೆಗಿನ ಒಪ್ಪಂದ ಅಂತ್ಯವಾಗುತ್ತಿರುವುದನ್ನು ಘೋಷಿಸಿದ ಹರ್ಭಜನ್ ಸಿಂಗ್

IPL 2021: Harbhajan Singh says that his contract ended with CSK

ಅನುಭವಿ ಆಟಗಾರ ಹರ್ಭಜನ್ ಸಿಂಗ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ಟ್ವಿಟ್ಟರ್‌ನಲ್ಲಿ ಪ್ರಮುಖ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಳೆದ ಎರಡು ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಹರ್ಭಜನ್ ಸಿಂಗ್ ಫ್ರಾಂಚೈಸಿ ಜೊತೆಗಿನ ತಮ್ಮ ಒಪ್ಪಂದ ಅಂತ್ಯವಾಗಿದೆ ಎಂದು ಘೋಷಿಸಿದ್ದಾರೆ.

ಬುಧವಾರ ಸಂಜೆ ಆರು ಗಂಟೆಯಿಂದ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆ ಆರಂಭವಾಗಲಿದ್ದು ಯಾವೆಲ್ಲಾ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಳ್ಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನವೇ ಹರ್ಭಜನ್ ಸಿಂಗ್ ತಮ್ಮ ಒಪ್ಪಂದದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಹರ್ಭಜನ್ ಸಿಂಗ್ ಚೆನ್ನೈ ತಂಡದ ಬಿಡುಗಡೆಗೊಳ್ಳುವ ಪಟ್ಟಿಯಲ್ಲಿ ಇರುವುದು ಖಚಿತವಾಗಿದೆ.

ಐಪಿಎಲ್ 2021: ಫ್ರಾಂಚೈಸಿಗಳು ಹರಾಜಿಗೆ ಬಿಡುಗಡೆಗೊಳಿಸಬಹುದಾದ ಸ್ಟಾರ್ ಆಟಗಾರರುಐಪಿಎಲ್ 2021: ಫ್ರಾಂಚೈಸಿಗಳು ಹರಾಜಿಗೆ ಬಿಡುಗಡೆಗೊಳಿಸಬಹುದಾದ ಸ್ಟಾರ್ ಆಟಗಾರರು

ಟ್ವೀಟ್‌ನಲ್ಲಿ ಹರ್ಭಜನ್ ಸಿಂಗ್ "ಚೆನ್ನೈ ಐಪಿಎಲ್ ಜೊತೆಗಿನ ನನ್ನ ಒಪ್ಪಂದ ಅಂತ್ಯವಾಗಿದ್ದು ತಂಡದ ಜೊತೆಯಲ್ಲಿ ಆಡಿದ್ದು ಅದ್ಭುತ ಅನುಭವವನ್ನು ನೀಡಿದೆ. ಸುಂದರವಾದ ನೆನಪುಗಳನ್ನು ನೀಡಿದ್ದು ಮುಂಬರುವ ದಿನಗಳಲ್ಲಿ ನೆನಪಿಸಿಕೊಳ್ಳುವಂತಾ
ಗೆಳಯರನ್ನು ಈ ತಂಡ ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್, ಮ್ಯಾನೇಜ್‌ಮೆಂಟ್‌, ಸಿಬ್ಬಂಧಿಗಳು ಹಾಗೂ ಅಭಿಮಾನಿಗಳಿಗೆ ನನ್ನ ಅದ್ಭುತವಾದ ಎರಡು ವರ್ಷಗಳಿಗಾಗಿ ಧನ್ಯವಾದಗಳು. ಒಳ್ಳೆಯದಾಗಲಿ" ಎಂದು ಹರ್ಭಜನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹರ್ಭಜನ್ ಸಿಂಗ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರಂಭದಲ್ಲಿ ತಾಯಿಯ ಅನಾರೋಗ್ಯದ ಕಾರಣದಿಂದಾಗಿ ತಡವಾಗಿ ತಂಡವನ್ನು ಸೇರಿಕೊಳ್ಳಲು ನಿರ್ಧರಿಸಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈಗೆ ಪ್ರಯಾಣಿಸಿದ ಬಳಿಕ ತಾನು ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಘೋಷಿಸಿದ್ದರು.

ಭಾರತ vs ಆಸ್ಟ್ರೇಲಿಯಾ: ಗೆದ್ದಿದ್ದು ಭಾರತ, ಸದ್ದು ಮಾಡಿದ್ದು ಆರ್‌ಸಿಬಿ!ಭಾರತ vs ಆಸ್ಟ್ರೇಲಿಯಾ: ಗೆದ್ದಿದ್ದು ಭಾರತ, ಸದ್ದು ಮಾಡಿದ್ದು ಆರ್‌ಸಿಬಿ!

ಸತತ 10 ವರ್ಷ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದ ಹರ್ಭಜನ್ ಸಿಂಗ್ 2018 ರ ಐಪಿಎಲ್ ಆವೃತ್ತಿಗೂ ಮುನ್ನ ನಡೆದಿದ್ದ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೂಲ ಬೆಲೆ 2 ಕೋಟಿಗೆ ಹರಾಜಾಗಿದ್ದರು.

Story first published: Wednesday, January 20, 2021, 14:01 [IST]
Other articles published on Jan 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X