ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮುಂಬೈಗೆ ಹರ್ಷಲ್ ಪಟೇಲ್ ಆಘಾತ, ಆರ್‌ಸಿಬಿ 160 ರನ್ ಗುರಿ

IPL 2021: Harshal Patels 5-Wicket Haul Helps RCB Restrict mumbai Indians

ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಪಡೆಗೆ 160 ರನ್‌ಗಳ ಗುರಿಯನ್ನು ನೀಡಿದೆ. ಆರಂಭದಲ್ಲಿ ಬೃಹತ್ ಮೊತ್ತದ ಗುರಿ ನೀಡುವ ಲಕ್ಷಣ ತೋರಿದ್ದ ಮುಂಬೈ ಬಳಿಕ ಆರ್‌ಸಿಬಿ ಬೌಲಿಂಗ್ ದಾಳಿಗೆ ಮೆತ್ತಗಾಯಿತು.

ಆರ್‌ಸಿಬಿ ತಂಡದ ಪರವಾಗಿ ಯುವ ವೇಗಿ ಹರ್ಷದ್ ಪಟೇಲ್ ಅದ್ಭುತ ದಾಳಿ ಮಾಡಿದರು. ಐದು ವಿಕೆಟ್ ಕಿತ್ತ ಪಟೇಲ್ ಮುಂಬೈ ಇಂಡಿಯನ್ಸ್‌ನ ಮಧ್ಯಮ ಕ್ರಮಾಂಕಕ್ಕೆ ದೊಡ್ಡ ಆಘಾತವನ್ನು ನೀಡಿದ್ದಾರೆ. ಈ ಮೂಲಕ ಮುಂಬೈ ತಂಡಕ್ಕೆ ಕಂಟಕವಾದರು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಐಪಿಎಲ್‌ನಲ್ಲಿ ಮುಂಬೈ ತಂಡದ ವಿರುದ್ಧ ಐದು ವಿಕೆಟ್ ಪಡೆಯುವ ಮೂಲಕ ಹರ್ಷಲ್ ಪಟೇಲ್ ಹೊಸ ದಾಖಲೆಯನ್ನು ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಬೌಲರ್ ಓರ್ವ ಐದು ವಿಕೆಟ್ ಗೊಂಚಲು ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಹರ್ಷಲ್ ಪಟೇಲ್ ಪಾತ್ರರಾಗಿದ್ದಾರೆ.

ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದ ಹರ್ಷಲ್ ಬಳಿಕ ಅಪಾಯಕಾರಿ ಕಿರಾನ್ ಪೊಲಾರ್ಡ್ ಅವರನ್ನು ಕ್ಯಾಚ್ ಕೊಡಿಸುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಕೃನಾಲ್ ಪಾಂಡ್ಯ ಹಾಗೂ ಮಾಕ್ರೋ ಜಾನ್‌ಸನ್ ಕೂಡ ಹರ್ಷಲ್ ಬಲೆಗೆ ಬಿದ್ದರು.

ಮೊದಲ 10 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 90ರ ಗಡಿ ತಲುಪಿದ್ದ ಮುಂಬೈ ಬಳಿಕ ವಿಕೆಟ್ ಕಳೆದುಕೊಳ್ಳಲು ಆರಂಭಿಸಿರು. ಅದರಲ್ಲೂ ಸ್ಲಾಗ್ ಓವರ್‌ನಲ್ಲಿ ಮುಂಬೈ ಹೆಚ್ಚು ರನ್ ಗಳಿಸದಂತೆ ನೋಡಿಕೊಳ್ಳುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ಸು ಕಂಡರು. ಅಂತಿಮವಾಗಿ ಮುಂಬೈ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್‌ಗಳಿಸಿದೆ.

Story first published: Friday, April 9, 2021, 22:11 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X