ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉನಾದ್ಕತ್ ಚತುರ ಬೌಲಿಂಗ್ ಮಾಡಿದ್ದಾರೆ: ಇರ್ಫಾನ್ ಪಠಾಣ್ ಮೆಚ್ಚುಗೆ

IPL 2021: He used his variations well, Irfan Pathan lauds brilliant Jaydev Unadkat

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 15) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಗೆಲುವು ದಾಖಲಿಸಿದೆ. ಇದಕ್ಕೆ ಮುಖ್ಯ ಕಾರಣ ರಾಜಸ್ಥಾನ್ ವೇಗಿ ಜಯದೇವ್ ಉನಾದ್ಕತ್.

ಟೀಮ್ ಇಂಡಿಯಾ ಆಟಗಾರರ ವಾರ್ಷಿಕ ವೇತನ ಶ್ರೇಣಿ ಪ್ರಕಟಿಸಿದ ಬಿಸಿಸಿಐಟೀಮ್ ಇಂಡಿಯಾ ಆಟಗಾರರ ವಾರ್ಷಿಕ ವೇತನ ಶ್ರೇಣಿ ಪ್ರಕಟಿಸಿದ ಬಿಸಿಸಿಐ

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವೇಗಿ ಜಯದೇವ್ ಉನಾದ್ಕತ್ 4 ಓವರ್‌ ಎಸೆದು, 15 ರನ್ ನೀಡಿ ಡೆಲ್ಲಿ ಕ್ಯಾಪಿಟಲ್ಸ್‌ನ ಮೂರು ಪ್ರಮುಖ ವಿಕೆಟ್‌ಗಳನ್ನು ಕೆಡವಿದರು. ಹೀಗಾಗಿಯೇ ರಾಜಸ್ಥಾನ್ ಗೆಲ್ಲಲು ನೆರವಾಯ್ತು. ತಂಡ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಉನಾದ್ಕತ್ ಬೌಲಿಂಗ್ ಪ್ರದರ್ಶನವನ್ನು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ.

ಇಎಸ್ಪಿಎನ್‌ ಕ್ರಿಕ್‌ ಇನ್ಫೋ ಜೊತೆ ಮಾತನಾಡಿದ ಎಡಗೈ ಮಾಜಿ ವೇಗಿ ಇರ್ಫಾನ್ ಪಠಾಣ್, 'ಅದ್ಭುತ, ಅದ್ಭುತ ಪ್ರದರ್ಶನ ಎಡಗೈ ವೇಗಿಯಿಂದ ಬಂತು. ಮುಖ್ಯವಾಗಿ ಹರಾಜಿನ ವೇಳೆ ನನ್ನ ಪ್ರಕಾರ ಯಾವುದೇ ಆಟಗಾರರು ತಾನು ದೊಡ್ಡ ಮೊತ್ತಕ್ಕೆ ಹೋಗಬೇಕು ಎಂದು ಬಯಸುವುದಿಲ್ಲ. ಆದರೆ ಹೋದರೆ ಅದು ಅವರಿಗೆ ಒಳ್ಳೆಯ ರೀತಿ ನೆರವಾಗಲಿದೆ. ಬೌಲರ್ ಉತ್ತಮ ಪ್ರದರ್ಶನ ನೀಡಿದರೆ ನನಗೆ ಖುಷಿಯಾಗುತ್ತದೆ,' ಎಂದಿದ್ದಾರೆ.

ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಸೂಚನೆ ನೀಡಿದ ಬೌಚರ್ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಸೂಚನೆ ನೀಡಿದ ಬೌಚರ್

Sanju Samson ಮೊದಲನೇ ಪಂದ್ಯದಲ್ಲಿ ಮಾಡಿದ ಎಡವಟ್ಟೇನು | Oneindia Kannada

ಉನಾದ್ಕತ್ ಬೌಲಿಂಗ್, ಡೇವಿಡ್ ಮಿಲ್ಲರ್ ಮತ್ತು ಕ್ರಿಸ್ ಮೋರಿಸ್ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ 3 ವಿಕೆಟ್‌ ರೋಚಕ ಜಯ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ 147 ರನ್ ಗಳಿಸಿದ್ದರೆ, ರಾಜಸ್ಥಾನ್ 150 ರನ್ ಬಾರಿಸಿ ಟೂರ್ನಿಯ ಮೊದಲ ಜಯ ದಾಖಲಿಸಿತು.

Story first published: Friday, April 16, 2021, 0:46 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X