ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನಲು ಪ್ರಮುಖ 3 ಕಾರಣಗಳಿವು!

IPL 2021: Here are 3 reasons why RCB will win this IPL season

ಬೆಂಗಳೂರು: ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆರಂಭವಾಗಿ 13 ವರ್ಷಗಳು ಕಳೆದಿವೆ. ಆದರೂ ಮೂರು ತಂಡಗಳು ಒಂದು ಸಾರಿಯೂ ಟ್ರೋಫಿ ಗೆಲ್ಲದ ಕೆಟ್ಟ ದಾಖಲೆ ಉಳಿಸಿಕೊಂಡಿವೆ. ಆ ತಂಡಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. ಕಪ್ ಗೆಲ್ಲದ ಇನ್ನಿತರ ತಂಡಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್‌.

ಈ ಪ್ರಮುಖ 5 ಆಟಗಾರರು ಐಪಿಎಲ್‌ ಆರಂಭಿಕ ಪಂದ್ಯಗಳಲ್ಲಿ ಆಡಲ್ಲ!ಈ ಪ್ರಮುಖ 5 ಆಟಗಾರರು ಐಪಿಎಲ್‌ ಆರಂಭಿಕ ಪಂದ್ಯಗಳಲ್ಲಿ ಆಡಲ್ಲ!

ಕಳೆದ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್‌ಗೆ ಪ್ರವೇಶಿಸಿ ಕಪ್‌ನ ಆಸೆ ಮೂಡಿಸಿತ್ತಾದರೂ 4ನೇ ಸ್ಥಾನದೊಂದಿಗೆ ಟೂರ್ನಿ ಮುಗಿಸಿತ್ತು. ಈ ಬಾರಿ ಕಪ್‌ ಗೆಲ್ಲುವ ಅವಕಾಶ ಆರ್‌ಸಿಬಿಗೆ ಹೆಚ್ಚಿದೆ. ಇದಕ್ಕೆ ಮೂರು ಪ್ರಮುಖ ಕಾರಣಗಳಿವೆ.

ಕಪ್‌ ಗೆಲ್ಲಲು ಕಾರಣ 1

ಕಪ್‌ ಗೆಲ್ಲಲು ಕಾರಣ 1

2021ರ ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ಅದೇನೆಂದರೆ, ನಾಯಕ ವಿರಾಟ್ ಕೊಹ್ಲಿ ಈ ಸೀಸನ್‌ನಲ್ಲಿ ಆರಂಭಿಕರಾಗಿ ಆಡುವ ನಿರ್ಧಾರ ತಾಳಿದ್ದಾರೆ. ಇದಕ್ಕೆ ಆರ್‌ಸಿಬಿ ಮುಖ್ಯ ಕೋಚ್ ಮೈಕ್ ಹೆಸನ್ ಕೂಡ ಬೆಂಬಲ ಸೂಚಿಸಿದ್ದಾರೆ. ಕೊಹ್ಲಿ ಈ ಸೀಸನ್‌ನಲ್ಲಿ ಆರಂಭಿಕರಾಗಿ ಆಡಿದ್ದೇ ಹೌದಾದರೆ ಆರ್‌ಸಿಬಿಗೆ ನಿಜವಾಗಿಯೂ ಉತ್ತಮ ಆರಂಭ ಲಭಿಸಲಿದೆ. ಇದು ತಂಡಕ್ಕೆ ಲಾಭವಾಗಿ ಪರಿಣಮಿಸಲಿದೆ. ತಂಡದ ಹುಮ್ಮಸ್ಸು ಆರಂಭದಿಂದಲೂ ಹೆಚ್ಚುತ್ತಾ ಸಾಗಿದರೆ ಕಪ್‌ ಗೆಲುವಿನ ದಾರಿ ಸುಲಭವಾಗಲಿದೆ.

ಟ್ರೋಫಿ ಜಯಿಸಲು ಕಾರಣ 2

ಟ್ರೋಫಿ ಜಯಿಸಲು ಕಾರಣ 2

ಈ ಬಾರಿ ಆರ್‌ಸಿಬಿ ತಂಡದಲ್ಲಿ ಇನ್ನೂ ಪ್ರಮುಖ ಪ್ರತಿಭಾನ್ವಿತ ಆಟಗಾರರು ಸೇರಿಕೊಂಡು ಆರ್‌ಸಿಬಿ ಇನ್ನೂ ಬಲಿಷ್ಠ ತಂಡವಾಗಿದೆ. ಈ ಬಾರಿಯ ಹರಾಜಿನ ವೇಳೆ ಆರ್‌ಸಿಬಿ ತಂಡಕ್ಕೆ ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಫಿನ್ ಅಲೆನ್, ಆಸ್ಟ್ರೇಲಿಯಾದ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್, ನ್ಯೂಜಿಲೆಂಡ್‌ನ ಆಲ್ ರೌಂಡರ್ ಕೈಲ್ ಜೇಮಿಸನ್, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಡ್ಯಾನ್ ಕ್ರಿಸ್ಚಿಯನ್ ಮೊದಲಾದ ಆಟಗಾರರು ಸೇರ್ಪಡೆಯಾಗಿದ್ದಾರೆ. ಇನ್ನು ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್ ಹೇಗೂ ಇದ್ದಾರೆ.

ಚಾಂಪಿಯನ್ಸ್ ಪಟ್ಟಕ್ಕೇರಲು ಕಾರಣ 3

ಚಾಂಪಿಯನ್ಸ್ ಪಟ್ಟಕ್ಕೇರಲು ಕಾರಣ 3

ಈ ಕಾರಣ ನಿಮಗೆ ತಮಾಷೆ ಅನ್ನಿಸಬಹುದು. ಆದರೆ ಕುತೂಹಲಕಾರಿ ಸತ್ಯ ಸಂಗತಿಯಿದು. 2014ರ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಗೌತಮ್ ಗಂಭೀರ್‌ ನಾಯಕರಾಗಿದ್ದಾಗ ಅವರಿಗೆ ಹೆಣ್ಣುಮಗು ಜನಿಸಿತ್ತು. ಇದೇ ವರ್ಷ ಕೆಕೆಆರ್ ಟ್ರೋಫಿ ಗೆದ್ದಿತ್ತು. 2019ರಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಮಗಳು ಸಮೈರಾ ಜನಿಸಿದಳು. ಅಚ್ಚರಿಯೆಂದರೆ ಆ ವರ್ಷ ಎಂಐ ಚಾಂಪಿಯನ್ಸ್ ಆಗಿ ಮಿನುಗಿತ್ತು. ಈ ವರ್ಷ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಹೆಣ್ಣು ಮಗು ಜನಿಸಿದ್ದಾಳೆ. ಹೀಗಾಗಿ ಈ ಸಲ ಕಪ್‌ ನಮ್ದೇ ಆಗಲೂಬಹುದು ಅಲ್ಲವೆ?!

Story first published: Thursday, April 1, 2021, 9:48 [IST]
Other articles published on Apr 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X