ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಹಲವು ಪ್ರಶಸ್ತಿ ಬಾಚಿಕೊಂಡ ಋತುರಾಜ್ ಮತ್ತು ಹರ್ಷಲ್ ಪಟೇಲ್‌ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತಾ?

IPL 2021: Here is the details of prize money won by Harshal Patel and Ruturaj Gaikwad

ಅಕ್ಟೋಬರ್ 15ರ ಶುಕ್ರವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಫೈನಲ್ ಪಂದ್ಯದ ಮೂಲಕ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆಬಿದ್ದಿದೆ.

ಐಪಿಎಲ್ 2021: ಅತಿಹೆಚ್ಚು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಟಾಪ್ 5 ಡೇಂಜರಸ್ ಬ್ಯಾಟ್ಸ್‌ಮನ್‌ಗಳ ಪಟ್ಟಿಐಪಿಎಲ್ 2021: ಅತಿಹೆಚ್ಚು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಟಾಪ್ 5 ಡೇಂಜರಸ್ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್‌ ಗಳಿಸಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ 27 ರನ್‌ಗಳ ಜಯ ಸಾಧಿಸುವುದರ ಮೂಲಕ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಈ ಬಾರಿಯ ಐಪಿಎಲ್ ಗೆಲ್ಲಲು ಅರ್ಹ ತಂಡ ಸಿಎಸ್‌ಕೆ ಅಲ್ಲ; ಚಾಂಪಿಯನ್ಸ್ ಆಗಬೇಕಿದ್ದ ತಂಡವನ್ನು ಹೆಸರಿಸಿದ ಧೋನಿಈ ಬಾರಿಯ ಐಪಿಎಲ್ ಗೆಲ್ಲಲು ಅರ್ಹ ತಂಡ ಸಿಎಸ್‌ಕೆ ಅಲ್ಲ; ಚಾಂಪಿಯನ್ಸ್ ಆಗಬೇಕಿದ್ದ ತಂಡವನ್ನು ಹೆಸರಿಸಿದ ಧೋನಿ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿ ಅನುಭವವನ್ನು ಹೊಂದಿರುವ ಸ್ಟಾರ್ ಆಟಗಾರರಿಗಿಂತ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ಕ್ಯಾಪ್ ಧರಿಸದೇ ಇರುವ ಆಟಗಾರರೇ ಮಿಂಚಿರುವುದು ತುಂಬಾ ವಿಶೇಷವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಋತುರಾಜ್ ಗಾಯಕ್ವಾಡ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡದ ವೆಂಕಟೇಶ ಐಯ್ಯರ್ ಹೀಗೆ ಇನ್ನೂ ಕೆಲ ಯುವ ಆಟಗಾರರು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ದೊಡ್ಡ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಐಪಿಎಲ್ 2021: ಯಾರು ಯಾವ ಪ್ರಶಸ್ತಿ ಗೆದ್ದಿದ್ದಾರೆ?; ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿಐಪಿಎಲ್ 2021: ಯಾರು ಯಾವ ಪ್ರಶಸ್ತಿ ಗೆದ್ದಿದ್ದಾರೆ?; ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅದರಲ್ಲಿಯೂ ಹರ್ಷಲ್ ಪಟೇಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರೆ, ಋತುರಾಜ್ ಗಾಯಕ್ವಾಡ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಟೂರ್ನಿ ಅಂತ್ಯಗೊಂಡ ಬಳಿಕ ವಿತರಿಸಲಾಗುವ ಹಲವಾರು ಪ್ರಶಸ್ತಿಗಳನ್ನು ಈ ಇಬ್ಬರೂ ಆಟಗಾರರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಹೀಗೆ ಟೂರ್ನಿ ಮುಗಿದ ಬಳಿಕ ವಿತರಿಸಲಾಗುವ ಪ್ರಶಸ್ತಿಗೆ ಭಾಜನರಾಗಿರುವ ವಿವಿಧ ಆಟಗಾರರು ಎಷ್ಟು ಹಣವನ್ನು ಗಳಿಸಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಹರ್ಷಲ್ ಪಟೇಲ್ ಗಳಿಸಿದ್ದೆಷ್ಟು?

ಹರ್ಷಲ್ ಪಟೇಲ್ ಗಳಿಸಿದ್ದೆಷ್ಟು?

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿರುವ ಹರ್ಷಲ್ ಪಟೇಲ್ 32 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಪರ್ಪಲ್ ಕ್ಯಾಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಷ್ಟೇ ಅಲ್ಲದೆ ಗೇಮ್ ಚೇಂಜರ್ ಆಫ್ ದಿ ಸೀಸನ್ ಮತ್ತು ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಗಳನ್ನೂ ಸಹ ಹರ್ಷಲ್ ಪಟೇಲ್ ಪಡೆದುಕೊಂಡಿದ್ದಾರೆ. ಹೀಗೆ ಒಟ್ಟು 3 ವಿವಿಧ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಹರ್ಷಲ್ ಪಟೇಲ್ ಎಲ್ಲಾ ಪ್ರಶಸ್ತಿಗಳಿಗೂ ತಲಾ 10 ಲಕ್ಷ ಬಹುಮಾನ ಧನ ಪಡೆದುಕೊಂಡಿದ್ದಾರೆ. ಈ ಮೂಲಕ 3 ಪ್ರಶಸ್ತಿಗಳಿಂದ ಒಟ್ಟು 30 ಲಕ್ಷ ರೂಪಾಯಿಗಳನ್ನು ಹರ್ಷಲ್ ಪಟೇಲ್ ತಮ್ಮದಾಗಿಸಿಕೊಂಡಿದ್ದಾರೆ.

ಋತುರಾಜ್ ಗಾಯಕ್ವಾಡ್ ಗಳಿಸಿದ ಹಣವಿಷ್ಟು

ಋತುರಾಜ್ ಗಾಯಕ್ವಾಡ್ ಗಳಿಸಿದ ಹಣವಿಷ್ಟು

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಹೀರೋ ಆಗಿ ಮಿಂಚಿದ ಋತುರಾಜ್ ಗಾಯಕ್ವಾಡ್ 16 ಪಂದ್ಯಗಳನ್ನಾಡಿ 635 ರನ್ ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಹೀಗೆ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಕೂಡ ಋತುರಾಜ್ ಗಾಯಕ್ವಾಡ್ ತಮ್ಮದಾಗಿಸಿಕೊಂಡಿದ್ದಾರೆ. ಈ ಎರಡೂ ಪ್ರಶಸ್ತಿಗಳಿಗೆ ಭಾಜನರಾಗಿರುವ ಋತುರಾಜ್ ಗಾಯಕ್ವಾಡ್ ಒಟ್ಟು 20 ಲಕ್ಷ ರೂಪಾಯಿ ಬಹುಮಾನ ಧನ ಪಡೆದುಕೊಂಡಿದ್ದಾರೆ.

ಇಂಡೋ-ಪಾಕ್ ಬದ್ಧವೈರಿಗಳ ಮಹಾಸಮರಕ್ಕೆ ಭಾರತೀಯರಿಂದ ವಿರೋಧ | Oneindia Kannada
ಉಳಿದ ಆಟಗಾರರು ಗಳಿಸಿದ್ದೆಷ್ಟು?

ಉಳಿದ ಆಟಗಾರರು ಗಳಿಸಿದ್ದೆಷ್ಟು?

ಹರ್ಷಲ್ ಪಟೇಲ್ ಮತ್ತು ಋತುರಾಜ್ ಗಾಯಕ್ವಾಡ್ ಹೊರತುಪಡಿಸಿ ಉಳಿದ ಕೆಲ ತಂಡಗಳ ವಿವಿಧ ಆಟಗಾರರು ಟೂರ್ನಿ ನಂತರ ವಿತರಿಸಲಾಗುವ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದು ಅವರು ಗಳಿಸಿರುವ ಮೊತ್ತದ ವಿವರ ಈ ಕೆಳಕಂಡಂತಿದೆ.

* ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ಶಿಮ್ರಾನ್ ಹೆಟ್ಮಾಯೆರ್ (ಡೆಲ್ಲಿ ಕ್ಯಾಪಿಟಲ್ಸ್) - 10 ಲಕ್ಷ ರೂಪಾಯಿ

* ಅತಿ ಹೆಚ್ಚು ಸಿಕ್ಸರ್ ಪ್ರಶಸ್ತಿ: ಕೆಎಲ್ ರಾಹುಲ್ (ಪಂಜಾಬ್ ಕಿಂಗ್ಸ್) - 10 ಲಕ್ಷ ರೂಪಾಯಿ

* ಪವರ್ ಪ್ಲೇಯರ್ ಆಫ್ ದಿ ಸೀಸನ್: ವೆಂಕಟೇಶ್ ಐಯ್ಯರ್ ( ಕೋಲ್ಕತ್ತಾ ನೈಟ್ ರೈಡರ್ಸ್ ) - 10 ಲಕ್ಷ ರೂಪಾಯಿ

* ಪರ್ಫೆಕ್ಟ್ ಕ್ಯಾಚ್ ಆಫ್ ದಿ ಸೀಸನ್: ರವಿ ಬಿಷ್ಣೋಯಿ (ಪಂಜಾಬ್ ಕಿಂಗ್ಸ್) - 10 ಲಕ್ಷ ರೂಪಾಯಿ

Story first published: Saturday, October 16, 2021, 22:58 [IST]
Other articles published on Oct 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X