ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಪ್ರತಿ ತಂಡದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿ.

IPL 2021: Highest run-scorers for each IPL team; Here is the List

ಐಪಿಎಲ್ ನಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಕಲೆಹಾಕಿದವರ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಆದರೆ ಒಂದು ಫ್ರಾಂಚೈಸಿಗಾಗಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರು ಯಾರು ಎಂಬ ಮಾಹಿತಿ ಇಲ್ಲಿದೆ. ಪ್ರಸ್ತುತ ಇರುವ 8 ತಂಡಗಳ ಪರ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್ ಗಳ ಪಟ್ಟಿ ಈ ಕೆಳಕಂಡಂತಿದೆ.

1. ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ
ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕೇವಲ ಆರ್ ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಅವರು 5878 ರನ್ ಗಳಿಸಿ ಆರ್ ಸಿಬಿ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.

2. ಚೆನ್ನೈ ಸೂಪರ್ ಕಿಂಗ್ಸ್ : ಸುರೇಶ್ ರೈನಾ
ಐಪಿಎಲ್ ಆರಂಭವಾದಾಗ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದ ಸುರೇಶ್ ರೈನಾ ಅವರು ಐಪಿಎಲ್ ನಲ್ಲಿ ಪವರ್ ಹಿಟ್ಟರ್ ಎನಿಸಿಕೊಂಡಿದ್ದಾರೆ. ಚೆನ್ನೈ ಪರ ಅತ್ಯದ್ಭುತ ಆಟ ಆಡಿರುವ ಸುರೇಶ್ ರೈನಾ ಅವರು ಮಧ್ಯ 2 ವರ್ಷಗಳ ಕಾಲ ಗುಜರಾತ್ ಲಯನ್ಸ್ ಪರ ಆಡಿದ್ದರು. ಸುರೇಶ್ ರೈನಾ ಅವರು ಐಪಿಎಲ್ ನಲ್ಲಿ ಒಟ್ಟು 5368 ರನ್ ಬಾರಿಸಿದ್ದು ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅವರು 4527 ರನ್ಸ್ ಬಾರಿಸಿ ಸಿಎಸ್ಕೆ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.

3. ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ
ಐಪಿಎಲ್ ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ಅವರು ಐಪಿಎಲ್ ನಲ್ಲಿ ಮೊದಲಿಗೆ ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಿದ್ದರು ತದನಂತರ ಮುಂಬೈ ಇಂಡಿಯನ್ಸ್ ಶರ್ಮಾ ಅವರನ್ನು ಖರೀದಿಸಿತು. ಐಪಿಎಲ್ ನಲ್ಲಿ ಒಟ್ಟು 5230 ರನ್ ಕಲೆಹಾಕಿರುವ ರೋಹಿತ್ ಶರ್ಮಾ ಅವರು ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ 4060 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.

4. ಸನ್ ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್
ವಾರ್ನರ್ ಐಪಿಎಲ್ ಪ್ರವೇಶಿಸಿದ ಸಂದರ್ಭದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದರು , 2014 ರಿಂದ ಸನ್ ರೈಸರ್ಸ್ ಹೈದರಾಬಾದ್ ಪರ ಡೇವಿಡ್ ವಾರ್ನರ್ ಅವರು ಆಡುತ್ತಿದ್ದಾರೆ.ಇನ್ನು ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಅವರು ಗಳಿಸಿರುವ ಒಟ್ಟು ರನ್ 5254. ಇದರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ವಾರ್ನರ್ ರನ್ 3819 ಗಳಿಸಿ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.

5. ಕೊಲ್ಕತ್ತಾ ನೈಟ್ ರೈಡರ್ಸ್ : ಗೌತಮ್ ಗಂಭೀರ್
ಐಪಿಎಲ್ ಆರಂಭವಾದಾಗ ಡೆಲ್ಲಿ ಡೇರ್ ಡೆವಿಲ್ಸ್ ಪಾಲಾಗಿದ್ದ ಗೌತಮ್ ಗಂಭೀರ್ ಅವರು 2011 ರ ಐಪಿಎಲ್ ಆಕ್ಷನ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿಕೊಂಡರು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗೌತಮ್ ಗಂಭೀರ್ ಅವರು ಒಟ್ಟು 4217 ರನ್ ಗಳಿಸಿದ್ದು ಇದರಲ್ಲಿ ಕೆಕೆಆರ್ ಪರ 3035 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.

6. ರಾಜಸ್ಥಾನ್ ರಾಯಲ್ಸ್ : ಅಜಿಂಕ್ಯ ರಹಾನೆ
ಐಪಿಎಲ್ ನಲ್ಲಿ ಮುಂಬೈ , ಪುಣೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಆಡಿರುವ ಅಜಿಂಕ್ಯ ರಹಾನೆ ಅವರು ಒಟ್ಟು ಕಲೆಹಾಕಿರುವ ರನ್ 3933 , ಇದರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಜಿಂಕ್ಯಾ ರಹಾನೆ 2810 ರನ್ ಬಾರಿಸಿ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.

7. ಪಂಜಾಬ್ ಕಿಂಗ್ಸ್ : ಶಾನ್ ಮಾರ್ಷ್
ಐಪಿಎಲ್ ಆರಂಭವಾದಾಗಿನಿಂದಲೂ ಸಹ ಇದುವರೆಗೂ ಪಂಜಾಬ್ ತಂಡದ ಪರ ಆಡುತ್ತಿರುವ ಶಾನ್ ಮಾರ್ಷ್ ಅವರು ಐಪಿಎಲ್ ಆರಂಭದ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಶಾನ್ ಮಾರ್ಷ್ ಅವರು ಪಂಜಾಬ್ ತಂಡದ ಪರ ಗಳಿಸಿರುವ ಒಟ್ಟು 2477 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.

8. ಡೆಲ್ಲಿ ಕ್ಯಾಪಿಟಲ್ಸ್ : ಶ್ರೇಯಸ್ ಅಯ್ಯರ್
2015 ರ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಸೇರ್ಪಡೆಗೊಂಡ ಶ್ರೇಯಸ್ ಅಯ್ಯರ್ ಅವರು ಇಂದಿಗೂ ಸಹ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 2200 ರನ್ ಬಾರಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ ಶ್ರೇಯಸ್ ಅಯ್ಯರ್.

Story first published: Monday, March 15, 2021, 15:02 [IST]
Other articles published on Mar 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X