ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಸೇರಿದ ಮೇಲೆ ಹಿಂದೆ ಸಿಗುತ್ತಿದ್ದಷ್ಟು ಅವಕಾಶ ಸಿಗಲಿಲ್ಲ; ಮನಬಿಚ್ಚಿ ಮಾತನಾಡಿದ ದೀಪಕ್ ಚಹರ್

IPL 2021: I did not get much chances as batting all rounder after joining CSK says Deepak Chahar

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚೆಗೆ ಒಳಗಾಗಿರುವ ವಿಷಯಗಳೆಂದರೆ ಇದೇ ತಿಂಗಳ 19ರಿಂದ ಪುನಾರಂಭವಾಗಲಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ. ಹೌದು, ಈ ಎರಡೂ ಚುಟುಕು ಕದನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ. ಇತ್ತೀಚಿಗಷ್ಟೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ವಿವಿಧ ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿದ್ದು ತುಸು ಹೆಚ್ಚಿನ ಚರ್ಚೆಗಳಿಗೆ ಕಾರಣವಾಯಿತು.

ಮ್ಯಾಂಚೆಸ್ಟರ್‌ ಟೆಸ್ಟ್ ರದ್ದು: ಆ ಒಂದು ಭಯದಿಂದಲೇ ಕೊಹ್ಲಿ ಪಡೆ ಓಡಿಹೋಯಿತು ಎಂದ ಮಾಜಿ ಕ್ರಿಕೆಟಿಗಮ್ಯಾಂಚೆಸ್ಟರ್‌ ಟೆಸ್ಟ್ ರದ್ದು: ಆ ಒಂದು ಭಯದಿಂದಲೇ ಕೊಹ್ಲಿ ಪಡೆ ಓಡಿಹೋಯಿತು ಎಂದ ಮಾಜಿ ಕ್ರಿಕೆಟಿಗ

ಅದರಲ್ಲಿಯೂ ಮುಂಬರಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾದಾಗ ತಂಡದಲ್ಲಿ ಸ್ಥಾನ ಪಡೆದುಕೊಂಡ ಆಟಗಾರರ ಕುರಿತು ಹೆಚ್ಚು ಚರ್ಚೆಗಳು ನಡೆದವು ಹಾಗೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಊಹೆ ಮಾಡಲಾಗಿದ್ದ ಆಟಗಾರರಿಗೆ ಅವಕಾಶ ಸಿಗದೇ ಇರುವುದರ ಕುರಿತು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳು ನಡೆಯುತ್ತಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮಿಂಚಿದ್ದ ಕೆಲ ಯುವ ಆಟಗಾರರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶವನ್ನು ನೀಡಲಾಗುತ್ತದೆ ಎಂದು ಎಣಿಸಲಾಗಿತ್ತು, ಆದರೆ ಆ ಕೆಲ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡದೆ ಇರುವುದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಟವನ್ನಾಡುವ ದೀಪಕ್ ಚಹರ್ ಅವರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿ ಅವಕಾಶ ನೀಡಲಾಗಿದೆ.

ಐಪಿಎಲ್: ಹೊಸದಾಗಿ ಆರ್‌ಸಿಬಿ ಸೇರಿರುವ ಲಂಕಾದ ವನಿಂದು ಹಸರಂಗಗೆ ಕೊಹ್ಲಿ ವಾಟ್ಸಾಪ್ ಸಂದೇಶಐಪಿಎಲ್: ಹೊಸದಾಗಿ ಆರ್‌ಸಿಬಿ ಸೇರಿರುವ ಲಂಕಾದ ವನಿಂದು ಹಸರಂಗಗೆ ಕೊಹ್ಲಿ ವಾಟ್ಸಾಪ್ ಸಂದೇಶ

ಹೀಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶವನ್ನು ಪಡೆದ ದೀಪಕ್ ಚಹರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಾವು ನಡೆದು ಬಂದ ಹಾದಿಯ ಕುರಿತು ಮೆಲುಕು ಹಾಕಿದ್ದಾರೆ. ಹೀಗೆ ತಮ್ಮ ಐಪಿಎಲ್ ವೃತ್ತಿಜೀವನದ ಕುರಿತು ಮಾತನಾಡಿದ ದೀಪಕ್ ಚಹರ್ ತಮ್ಮಲ್ಲಾದ ಕೆಲ ಬದಲಾವಣೆಗಳ ಕುರಿತು ಈ ಕೆಳಕಂಡಂತೆ ಮನಬಿಚ್ಚಿ ಮಾತನಾಡಿದ್ದಾರೆ.

ಮೊದಲು ಐಪಿಎಲ್ ಟೂರ್ನಿಗೆ ಆಯ್ಕೆಯಾದಾಗ ನಾನು ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದೆ

ಮೊದಲು ಐಪಿಎಲ್ ಟೂರ್ನಿಗೆ ಆಯ್ಕೆಯಾದಾಗ ನಾನು ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದೆ

ತಮ್ಮ ಐಪಿಎಲ್ ವೃತ್ತಿ ಜೀವನದ ಬಗ್ಗೆ ಮಾತನಾಡಿದ ದೀಪಕ್ ಚಹರ್ ಮೊಟ್ಟಮೊದಲು ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ತಾನು ಬ್ಯಾಟಿಂಗ್ ಆಲ್ ರೌಂಡರ್ ಆಗಿ ಆಯ್ಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಹೌದು, ರೈಸಿಂಗ್ ಪುಣೆ ಸೂಪರ್‌ಜಿಯಂಟ್ಸ್ ತಂಡಕ್ಕೆ ದೀಪಕ್ ಚಹರ್ ಆಯ್ಕೆಯಾಗಿದ್ದಾಗ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ದೀಪಕ್ ಚಹರ್ ಅವರನ್ನು ಬ್ಯಾಟಿಂಗ್ ಆಲ್ ರೌಂಡರ್ ಎಂದು ಆಯ್ಕೆ ಮಾಡಿದ್ದರಂತೆ. ಹೀಗೆ ಬ್ಯಾಟಿಂಗ್ ಆಲ್ ರೌಂಡರ್ ಆಗಿ ಅಭ್ಯಾಸ ಪಂದ್ಯದಲ್ಲಿ 49 ರನ್ ಬಾರಿಸಿದ್ದ ತನ್ನನ್ನು ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಫ್ಲೆಮಿಂಗ್ ಸರ್ ಕಣಕ್ಕಿಳಿಸಿದ್ದರು ಎಂದು ದೀಪಕ್ ಚಹರ್ ಹೇಳಿಕೆ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ನಂತರ ಅವಕಾಶಗಳು ಕಡಿಮೆಯಾಗುತ್ತಾ ಹೋದವು

ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ನಂತರ ಅವಕಾಶಗಳು ಕಡಿಮೆಯಾಗುತ್ತಾ ಹೋದವು


ಪುಣೆ ತಂಡದಲ್ಲಿದ್ದಾಗ ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದ ದೀಪಕ್ ಚಹರ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2018ರಲ್ಲಿ ಸೇರಿಕೊಂಡ ನಂತರ ಬೌಲಿಂಗ್ ಆಲ್ ರೌಂಡರ್ ಆಗಿಬಿಟ್ಟರು. ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದಾಗ 20 ಎಸೆತಗಳಲ್ಲಿ 40 ರನ್ ಬಾರಿಸಿದ್ದೆ, ಆದರೂ ನಂತರದ ಪಂದ್ಯಗಳಲ್ಲಿ ಹೆಚ್ಚಿನ ಬ್ಯಾಟಿಂಗ್ ಮಾಡುವ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಬೌಲಿಂಗ್ ಆಲ್ ರೌಂಡರ್ ಆಗಿ ಪ್ರದರ್ಶನ ನೀಡುತ್ತಿದ್ದೇನೆ ಎಂದು ದೀಪಕ್ ಚಹರ್ ಹೇಳಿಕೊಂಡಿದ್ದಾರೆ.

ಹಸರಂಗನಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿದ ವಿರಾಟ್ ! | Oneindia Kannada
ಬ್ಯಾಟಿಂಗ್ ಆಲ್ ರೌಂಡರ್ ಆದರೆ ಹೆಚ್ಚು ಬೇಡಿಕೆ

ಬ್ಯಾಟಿಂಗ್ ಆಲ್ ರೌಂಡರ್ ಆದರೆ ಹೆಚ್ಚು ಬೇಡಿಕೆ

ಇನ್ನು ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಬೇಕಾದರೆ ಬೌಲಿಂಗ್ ಆಲ್ ರೌಂಡರ್ ಆಗುವುದಕ್ಕಿಂತ ಬ್ಯಾಟಿಂಗ್ ಆಲ್ ರೌಂಡರ್ ಆಗಿ ಪ್ರದರ್ಶನ ನೀಡಿದರೆ ಹೆಚ್ಚು ಅವಕಾಶಗಳು ಸಿಗಲಿವೆ ಎಂದು ದೀಪಕ್ ಚಹರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತಂಡದಲ್ಲಿ ಈಗಾಗಲೇ ಸಾಕಷ್ಟು ಬೌಲಿಂಗ್ ಆಲ್ ರೌಂಡರ್ ಆಟಗಾರರು ಇದ್ದಾರೆ, ಹೀಗಾಗಿ ಬ್ಯಾಟಿಂಗ್ ಆಲ್ ರೌಂಡರ್ ಆಟಗಾರನಾದರೆ ತಂಡದಲ್ಲಿ ಹೆಚ್ಚು ಅವಕಾಶಗಳು ಸಿಗಲಿವೆ ಎಂದು ದೀಪಕ್ ಚಹರ್ ಹೇಳಿಕೆ ನೀಡಿದ್ದಾರೆ.

Story first published: Tuesday, September 14, 2021, 21:31 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X