ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ನಾಯಕತ್ವದ ಬಗ್ಗೆ ಭರವಸೆ ವ್ಯಕ್ತಪಡಿಸಿದ ಸಿಎಸ್‌ಕೆ ಆಲ್‌ರೌಂಡರ್ ಸುರೇಶ್ ರೈನಾ

IPL 2021: Im sure Pant will be a talismanic leader, says Raina

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಯುವ ಕ್ರಿಕೆಟಿಗನಿಗೆ ಈ ಮಹತ್ವದ ಜವಾಬ್ಧಾರಿ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸುರೇಶ್ ರೈನಾ ಪಂತ್ ನಾಯಕತ್ವದ ಬಗ್ಗೆ ಭರವಸೆಯ ಮಾತುಗಳನ್ನು ಆಡಿದ್ದಾರೆ.

"ಡೆಲ್ಲಿ ಕ್ಯಾಪಿಟಲ್ಸ್ ತಂಡದ 2021ನೇ ಆವೃತ್ತಿಗೆ ನಾಯಕನಾಗಿ ಆಯ್ಕೆಯಾದ ರಿಷಭ್ ಪಂತ್‌ಗೆ ಹೃದಯಪೂರ್ವಕ ಅಭಿನಂದನೆಗಳು. ಆತ ಅತ್ಯುತ್ತಮ ನಾಯಕನಾಗಯವ ಭರವಸೆ ನನ್ನಲ್ಲಿದೆ. ಈ ಹೊಸ ಹುದ್ದೆಯನ್ನು ಆತ ಹೆಮ್ಮೆಯಿಂದ ನಿರ್ವಹಿಸಲಿದ್ದಾರೆ" ಎಂದು ಸುರೇಶ್ ರೈನಾ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆ

ರಿಷಭ್ ಪಂತ್ 2016ರ ಆವೃತ್ತಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರಿಷಭ್ ಪಂತ್ ಹೆಮ್ಮೆಯನ್ನು ವ್ಯಕ್ತಡಿಸಿದ್ದು ಇದು ನನ್ನ ಕನಸು ನನಸಾದ ಸಂದರ್ಭ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

"ಡೆಲ್ಲಿ ನಾನು ಬೆಳೆದ ಪ್ರದೇಶ. ಆರು ವರ್ಷಗಳ ಹಿಂದೆ ನಾನು ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸ್ಥಳ. ಈ ತಂಡವನ್ನು ಒಂದಲ್ಲ ಒಂದು ದಿನ ಮುನ್ನಡೆಸಬೇಕು ಎಂಬುದು ನನ್ನ ದೊಡ್ಡ ಕನಸು. ಆದರೆ ಇಂದು ಆ ಕನಸು ನಿಜವಾಗುತ್ತಿದೆ. ನಾನು ಇದಕ್ಕಾಗಿವಿನಮ್ರನಾಗಿರುತ್ತೇನೆ. ಈ ಜವಾಬ್ಧಾರಿಗೆ ನಾನು ಸಮರ್ಥ ಎಂದು ಪರಿಗಣಿಸಿದ ತಂಡದ ಮಾಲೀಕರಿಗೆ ನಾನು ನಿಜವಾಗಿಯೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ" ಎಂದು ಪಂತ್ ಹೇಳಿಕೆ ನೀಡಿದ್ದಾರೆ.

ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಕೂಡ ನೂತನ ನಾಯಕನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ಅದ್ಭುತ ಪ್ರದರ್ಶನವನ್ನು ಡೆಲ್ಲಿ ನೀಡಿತ್ತು. ಈ ಬಾರಿ ರಿಷಭ್ ಪಂತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು ಹೀಗಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ" ಎಂದಿದ್ದಾರೆ.

Story first published: Wednesday, March 31, 2021, 10:08 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X