ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ನಾನು ಆ ಒಬ್ಬ ಆಟಗಾರನಿಂದ ಎಡಗೈ ಬ್ಯಾಟ್ಸ್‌ಮನ್‌ ಆದೆ: ವೆಂಕಟೇಶ್ ಐಯ್ಯರ್

ಸೆಪ್ಟೆಂಬರ್ 19ರ ಭಾನುವಾರದಿಂದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಭಾಗ ಯುಎಇಯಲ್ಲಿ ಆರಂಭವಾಗಿದೆ.

ಹೀಗೆ ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿಸಿ ಎಲ್ಲೆಡೆ ಅತಿ ಹೆಚ್ಚಾಗಿ ಚರ್ಚೆಗೀಡಾಗಿರುವ ಆಟಗಾರ ಎಂದರೆ ಅದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ್ ಐಯ್ಯರ್. ಹೌದು, ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರನಾಗಿ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವೆಂಕಟೇಶ್ ಐಯ್ಯರ್ ತಮ್ಮ ವೇಗದ ಹೊಡಿಬಡಿ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಐಪಿಎಲ್ ರದ್ದು ಭೀತಿ; ಚೆನ್ನೈ ಆಟಗಾರರನ್ನು ಮುದುಕರಿಗೆ ಹೋಲಿಸಿದ ವಿರೇಂದ್ರ ಸೆಹ್ವಾಗ್!ಐಪಿಎಲ್ ರದ್ದು ಭೀತಿ; ಚೆನ್ನೈ ಆಟಗಾರರನ್ನು ಮುದುಕರಿಗೆ ಹೋಲಿಸಿದ ವಿರೇಂದ್ರ ಸೆಹ್ವಾಗ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವೆಂಕಟೇಶ್ ಐಯ್ಯರ್ 27 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸುವುದರ ಮೂಲಕ ಕ್ರಿಕೆಟ್ ಪ್ರಿಯರ ಗಮನವನ್ನು ಸೆಳೆದರು. ಅಷ್ಟೇ ಅಲ್ಲದೆ ನಿನ್ನೆ ( ಸೆಪ್ಟೆಂಬರ್ 23 ) ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿಯೂ ಕೂಡ ವೆಂಕಟೇಶ್ ಐಯ್ಯರ್ ಅಬ್ಬರದ ಬ್ಯಾಟಿಂಗ್ ನಡೆಸಿ ಮುಂಬೈ ತಂಡಕ್ಕೆ ಸೋಲುಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವೆಂಕಟೇಶ್ ಐಯ್ಯರ್ 30 ಎಸೆತಗಳಲ್ಲಿ 53 ರನ್ ಚಚ್ಚುವುದರ ಮೂಲಕ ತಾನೊಬ್ಬ ಪ್ರತಿಭಾವಂತ ಟಿ ಟ್ವೆಂಟಿ ಬ್ಯಾಟ್ಸ್‌ಮನ್‌ ಎಂದು ಸಾಬೀತು ಪಡಿಸಿಕೊಂಡರು.

ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

ಹೀಗೆ ಈ ಎರಡೂ ಪಂದ್ಯಗಳಲ್ಲಿಯೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವೆಂಕಟೇಶ್ ಐಯ್ಯರ್ ತಮ್ಮ ಕ್ರಿಕೆಟ್ ಜೀವನದ ಕುರಿತು ಮಾತನಾಡಿದ್ದು ಈ ಕೆಳಕಂಡ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಕೆಕೆಆರ್ ತಂಡ ಪ್ರತಿನಿಧಿಸುವುದು ನನ್ನ ಕನಸಾಗಿತ್ತು ಎಂದ ವೆಂಕಟೇಶ್ ಐಯ್ಯರ್

ಕೆಕೆಆರ್ ತಂಡ ಪ್ರತಿನಿಧಿಸುವುದು ನನ್ನ ಕನಸಾಗಿತ್ತು ಎಂದ ವೆಂಕಟೇಶ್ ಐಯ್ಯರ್

ತಮ್ಮ ಕ್ರಿಕೆಟ್ ಜೀವನದ ಕುರಿತು ಮಾತನಾಡಿರುವ ವೆಂಕಟೇಶ್ ಐಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆಯ್ಕೆಯಾಗುವ ಮುಂಚಿನಿಂದಲೂ ತಾನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಪರ ಆಡಬೇಕೆಂಬ ಕನಸನ್ನು ಹೊಂದಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಹೌದು, 'ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ಮೊದಲ ನಾಯಕನಾಗಿದ್ದು ಸೌರವ್ ಗಂಗೂಲಿಯವರು. ಹೀಗಾಗಿ ನಾನು ಅವರ ಅಪ್ಪಟ ಅಭಿಮಾನಿಯಾದ ಕಾರಣ ಐಪಿಎಲ್ ಟೂರ್ನಿಯಲ್ಲಿ ಮೊದಲು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿಯೇ ಆಡಬೇಕು ಎಂಬ ಕನಸನ್ನು ಹಿಂದಿನಿಂದಲೂ ಹೊತ್ತುಕೊಂಡಿದ್ದೆ' ಎಂದು ವೆಂಕಟೇಶ್ ಐಯ್ಯರ್ ಹೇಳಿಕೊಂಡಿದ್ದಾರೆ.

ದಾದಾಗೋಸ್ಕರ ನನ್ನ ಬ್ಯಾಟಿಂಗ್ ವಿಧಾನವನ್ನೇ ಬದಲಿಸಿಕೊಂಡೆ

ದಾದಾಗೋಸ್ಕರ ನನ್ನ ಬ್ಯಾಟಿಂಗ್ ವಿಧಾನವನ್ನೇ ಬದಲಿಸಿಕೊಂಡೆ

ಇನ್ನು ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ವೆಂಕಟೇಶ್ ಐಯ್ಯರ್ ತನ್ನ ನೆಚ್ಚಿನ ಕ್ರಿಕೆಟಿಗ ಸೌರವ್ ಗಂಗೂಲಿ ಎಡಗೈ ಬ್ಯಾಟ್ಸ್‌ಮನ್‌ ಎಂಬ ಒಂದೇ ಒಂದು ಕಾರಣದಿಂದಾಗಿ ತಾವೂ ಕೂಡ ಅಂದಿನಿಂದಲೇ ಎಡಗೈ ಬ್ಯಾಟಿಂಗ್ ಅಭ್ಯಾಸವನ್ನು ಬೆಳೆಸಿಕೊಂಡರಂತೆ. ಹೀಗೆ ಚಿಕ್ಕ ವಯಸ್ಸಿನಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ವೆಂಕಟೇಶ್ ಐಯ್ಯರ್ ಈಗ ಎಡಗೈ ಬ್ಯಾಟ್ಸ್‌ಮನ್‌ ಆಗಿ ಮಿಂಚುತ್ತಿದ್ದಾರೆ.

ನಾನು ದೊಡ್ಡ Rajini ಅಭಿಮಾನಿ ಎಂದ Venkatesh Iyer | Oneindia kannada
ರಜನಿಕಾಂತ್ ನನ್ನ ನೆಚ್ಚಿನ ಹೀರೋ ಎಂದ ವೆಂಕಟೇಶ್ ಐಯ್ಯರ್

ರಜನಿಕಾಂತ್ ನನ್ನ ನೆಚ್ಚಿನ ಹೀರೋ ಎಂದ ವೆಂಕಟೇಶ್ ಐಯ್ಯರ್

ಇನ್ನು ವೆಂಕಟೇಶ್ ಐಯ್ಯರ್ ತನ್ನ ನೆಚ್ಚಿನ ಹೀರೋ ರಜನಿಕಾಂತ್ ಎಂದು ಬಹಿರಂಗಪಡಿಸಿದ್ದಾರೆ. ವೆಂಕಟೇಶ್ ಐಯ್ಯರ್ ಇಂದೋರ್ ನಗರದಲ್ಲಿ ವಾಸಿಸುತ್ತಿದ್ದರೂ ಕೂಡ ಈ ಹಿಂದೆ ರಜನಿಕಾಂತ್ ಚಿತ್ರಗಳು ಬಿಡುಗಡೆಯಾದಾಗ ಬಿಡುಗಡೆಯ ದಿನವೇ ಅವರ ಚಿತ್ರಗಳನ್ನು ವೀಕ್ಷಿಸಲು ಇಂದೋರ್ ನಗರದಿಂದ ಚೆನ್ನೈ ನಗರಕ್ಕೆ ಪ್ರಯಾಣ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಜನಿಕಾಂತ್ ಅವರನ್ನು ಭೇಟಿ ಮಾಡುವ ದಿನ ನನ್ನ ಜೀವನದ ಅತ್ಯಂತ ದೊಡ್ಡ ದಿನವಾಗಲಿದೆ ಎಂದು ಕೂಡ ವೆಂಕಟೇಶ್ ಐಯ್ಯರ್ ಹೇಳಿಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 24, 2021, 14:37 [IST]
Other articles published on Sep 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X