ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು

IPL 2021, Interesting facts of 14th edition of IPL

ಐಪಿಎಲ್‌ನ 14ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಮೂಲಕ ಐಪಿಎಲ್ ಆರಂಭದ ಚಟುವಟಿಕೆಗಳು ಮತ್ತಷ್ಟು ಗರಿಗೆದರಲು ಆರಂಭವಾಗಿದೆ. ಈ ವೇಳಾಪಟ್ಟಿ ಬಿಡುಗಡೆಯಾಗುವ ಮೂಲಕ ಸಾಕಷ್ಟು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಗಳೂ ದೊರೆತಿದೆ. ಭಾರತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಅಂತ್ಯವಾಗಿ 19 ದಿನಗಳ ಬಳಿಕ ಈ ಮಹತ್ವದ ಟೂರ್ನಿಗೆ ಚಾಲನೆ ದೊರೆಯಲಿದೆ.

ಐಪಿಎಲ್ ಯಾವಾಗ ಆರಂಭವಾಗಲಿದೆ ಎಂಬುದರಿಂದ ಹಿಡಿದು ಈ ಬಾರಿಯ ಐಪಿಎಲ್‌ಗೆ ಆತಿಥ್ಯವಹಿಸುವ ಕ್ರೀಡಾಂಗಣಗಳು ಯಾವುದು? ಯಾವಾಗ ಫೈನಲ್ ಪಂದ್ಯ ನಡೆಯಲಿದೆ? ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಅವಕಾಶಗಳು ದೊರೆಯಲಿದೆಯಾ ಎಂಬುದು ಸೇರಿದಂತೆ ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿತ್ತು. ಈ ಬಗೆಗಿನ ಉತ್ತರಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದರು.

ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಎದುರಾಳಿಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಎದುರಾಳಿ

ಈ ಪ್ರಶ್ನೆಗಳಿಗೆ ಉತ್ತರಗಳು ದೊರೆಯುವ ಜೊತೆಗೆ ಕೆಲ ಕುತೂಹಲಕಾರಿ ಸಂಗತಿಗಳು ಕೂಡ ಬೆಳಕಿಗೆ ಬಂದಿದೆ. ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳ ವರದಿಗಾಗಿ ಮುಂದೆ ಓದಿ..

ಆರು ಕ್ರೀಡಾಂಗಣದಲ್ಲಿ ಪಂದ್ಯಗಳು

ಆರು ಕ್ರೀಡಾಂಗಣದಲ್ಲಿ ಪಂದ್ಯಗಳು

ಭಾರತದಲ್ಲಿ ಪ್ರತಿ ಬಾರಿಯೂ ಪಂದ್ಯಗಳು ನಡೆಯುವಾಗ ಪ್ರತಿ ತಂಡಗಳಿಗೂ ತವರು ಅಂಗಳಗಳು ಇದ್ದು ತವರು ಹಾಗೂ ಹೊರಗಿನ ಅಂಗಳದಲ್ಲಿ ಪಂದ್ಯಗಳನ್ನು ಆಡುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೇವಲ 6 ಅಂಗಳಗಳಲ್ಲಿ ಪಂದ್ಯಗಳು ನಡೆಯಲಿದೆ. ಚೆನ್ನೈ, ಮುಂಬೈ, ಅಹ್ಮದಾಬಾದ್, ಡೆಲ್ಲಿ, ಬೆಂಗಳೂರು ಹಾಗೂ ಕೊಲ್ಕತ್ತಾ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದೆ

ತವರು ಅಂಗಳದಲ್ಲಿ ಆಡಲ್ಲ ತಂಡಗಳು

ತವರು ಅಂಗಳದಲ್ಲಿ ಆಡಲ್ಲ ತಂಡಗಳು

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಈ ಬಾರಿಯ ಐಪಿಎಲ್‌ನಲ್ಲಿ ಯಾವುದೇ ತಂಡಗಳು ಕೂಡ ತವರು ಕ್ರೀಡಾಂಗಣದಲ್ಲಿ ಎದುರಾಳಿಯನ್ನು ಎದುರಿಸುವುದಿಲ್ಲ. ಅಂದರೆ ಉದಾಹರಣೆಗೆ ಆರ್‌ಸಿಬಿ ತಂಡ ಬೆಂಗಳೂರಿನ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯವನ್ನೂ ಆಡುವುದಿಲ್ಲ. ಪ್ರತಿಯೊಂದು ತಂಡಕ್ಕೂ ಇದೇ ರೀತಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಹೀಗಾಗಿ ಪ್ರತಿಯೊಂದು ಪಂದ್ಯವೂ ಕೂಡ ತಟಸ್ಥ ಕೇಂದ್ರಗಳಲ್ಲಿಯೇ ನಡೆಯಲಿದೆ. ಹೆಚ್ಚಿನ ಪ್ರಯಾಣವನ್ನು ತಪ್ಪಿಸುವುದು ಹಾಗೂ ಪ್ರತಿ ಫ್ರಾಂಚೈಸಿಗೂ ಸಮಾನ ಅವಕಾಶವನ್ನು ನಿಡುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮೊದಲಾರ್ಧದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ

ಮೊದಲಾರ್ಧದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ

ಕೊರೊನಾ ವೈರಸ್‌ನ ಮುಂಜಾಗ್ರಥಾ ಕ್ರಮವಾಗಿ ಈ ಬಾರಿಯ ಐಪಿಎಲ್‌ನ ಮೊದಲಾರ್ಧದ ಪಂದ್ಯಗಳು ಮುಚ್ಚಿದ ಕ್ರೀಡಾಂಗಣಗಳಲ್ಲಿಯೇ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊದಲಾರ್ಧ ಅಂತ್ಯದ ಬಳಿಕ ಮತ್ತೊಮ್ಮೆ ಪರಿಶೀಲನೆಯನ್ನು ನಡೆಸಿ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

Story first published: Sunday, March 7, 2021, 15:06 [IST]
Other articles published on Mar 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X