ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಅರ್ಧಶತಕ ಸಿಡಿಸಿಯೂ ಸೋಲಿಗೆ ಹೊಣೆಯಾದರಾ ಮನೀಶ್ ಪಾಂಡೆ!

ipl 2021: Is Manish pandey reason for SRH defeat against kolkata knight riders

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಹೊರತಾಗಿಯೂ ಗೆಲುವು ಸಾಧ್ಯವಾಗಲಿಲ್ಲ. ತಂಡದ ಪ್ರಮುಖ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಹಾಗೂ ಜಾನಿ ಬೈರ್‌ಸ್ಟೋವ್ ಅರ್ಧಶತಕ ದಾಖಲಿಸಿ ಮಿಂಚಿದರು. ಆದರೆ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರೂ ಮನೀಶ್ ಪಾಂಡೆ ಬ್ಯಾಟಿಂಗ್ ಶೈಲಿ ಟೀಕೆಗೆ ಗುರಿಯಾಗಿದೆ.

ಕೊಲ್ಕತ್ತಾ ನೈಟ್‌ರೈಡರ್ಸ್ ತಂಡ ನೀಡಿದ 188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್‌ಗೆ ಆರಂಭಿಕ ಆಘಾತ ಉಂಟಾಯಿತು. ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹಾ 10 ರನ್‌ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಸೇರಿದರು. ಬಳಿಕ ಜೊತೆಯಾದ ಮನೀಶ್ ಪಾಂಡೆ ಹಾಗೂ ಜಾನಿ ಬೈರ್‌ಸ್ಟೋವ್ 92 ರನ್‌ಗಳ ಜೊತೆಯಾಟವನ್ನು ನೀಡಿದರು.

ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್

44 ಎಸೆತಗಳಲ್ಲಿ 61 ರನ್

44 ಎಸೆತಗಳಲ್ಲಿ 61 ರನ್

ಆದರೆ ಬಹುತೇಕ ಇನ್ನಿಂಗ್ಸ್ ಪೂರ್ತಿ ಆಡಿದ ಮನೀಶ್ ಪಾಂಡೆ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಲಿಲ್ಲ. ಎಚ್ಚರಿಕೆಯಿಂದಲೇ ಆಡುತ್ತಾ ಸಾಗಿದ್ದರು. 44 ಎಸೆತಗಳನ್ನು ಎದುರಿಸಿದ ಪಾಂಡೆ 61 ರನ್ ಬಾರಿಸಿದರು. 138.64 ಸ್ಟ್ರೈಕ್‌ರೇಟ್ ಈ ಆಟ ತಂಡಕ್ಕೆ ಹಿನ್ನಡೆಯಾಯಿತು ಎಂದು ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಪರೋಕ್ಷವಾಗಿ ಚಾಟಿ ಬೀಸಿದ ಸೆಹ್ವಾಗ್

ಪರೋಕ್ಷವಾಗಿ ಚಾಟಿ ಬೀಸಿದ ಸೆಹ್ವಾಗ್

ಇನ್ನು ಮನೀಶ್ ಪಾಂಡೆ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಪರೋಕ್ಷವಾಗಿ ಕುಟುಕಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ಸ್‌ಮನ್‌ಗಳು ರನ್‌ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲವಾದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕುತ್ತದೆ ಎಂದಿದ್ದಾರೆ ಸೆಹ್ವಾಗ್.

ಮನೀಶ್ ಪಾಂಡೆ ಬಗ್ಗೆ ಟೀಕೆ

ಮನೀಶ್ ಪಾಂಡೆ ಬಗ್ಗೆ ಟೀಕೆ

ಮನೀಶ್ ಪಾಂಡೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 138.64 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಆದರಲ್ಲಿ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿರುವುದನ್ನು ಹೊರತುಪಡಿಸಿದರೆ ಅವರ ಸ್ಟ್ರೈಕ್‌ರೇಟ್ 127 ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟುವಾಗ ಇದು ಸಮರ್ಥನೀಯವಾದ ಸ್ಟ್ರೈಕ್‌ರೇಟ್ ಅಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

ಮನೀಶ್ ಪಾಂಡೆ ಪ್ರಮುಖ ಆಟಗಾರ

ಮನೀಶ್ ಪಾಂಡೆ ಪ್ರಮುಖ ಆಟಗಾರ

ಆಕಾಶ್ ಚೋಪ್ರ ಮನೀಶ್ ಪಾಂಡೆ ಆಟದ ಬಗ್ಗೆ ಮಾತನಾಡುತ್ತಾ "ಇದು ಟೂರ್ನಿಯ ಮೊದಲ ಪಂದ್ಯ. ನೀವು ಮೊದಲ ಪಂದ್ಯದಲ್ಲಿ ಉತ್ತಮವಾಗಿ ರನ್‌ಗಳಿಸಿದರೆ ಸೀಸನ್ ಉತ್ತಮವಾಗಿರುತ್ತದೆ ಎಂದು ಅರ್ಥ. ಆತ ತಂಡದ ಪ್ರಮುಖ ಸದಸ್ಯ. ಆತನ ಆರಂಭ ಉತ್ತಮವಾಗಿದೆ. ಅರ್ಧ ಶತಕದಿಂದಾಗಿ ಆತ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಹೀಗಾಗಿ ಮತ್ತಷ್ಟು ರನ್‌ಗಳಿಸಲು ಆತನಿಂದ ಸಾಧ್ಯವಾಗುತ್ತದೆ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.

Story first published: Monday, April 12, 2021, 14:46 [IST]
Other articles published on Apr 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X