ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಟಿ20 ತಂಡಕ್ಕೆ ಕಮ್‌ಬ್ಯಾಕ್ ಬಗ್ಗೆ ಡಿವಿಲಿಯರ್ಸ್ ಮಹತ್ವದ ಹೇಳಿಕೆ

IPL 2021: it will be fantastic to play for South Africa again says AB De Villiers

ಐಪಿಎಲ್ ಸಹಿತ ವಿಶ್ವದ ಬಹುತೇಕ ಲೀಗ್ ಕ್ರಿಕೆಟ್‌ಗಳಲ್ಲಿ ಭಾಗವಹಿಸಿ ಅಬ್ಬರಿಸುತ್ತಿರುವ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ 3 ವರ್ಷಗಳಾಗುತ್ತಾ ಬಂದಿದೆ. ಆದರೆ ಅದ್ಭುತವಾದ ಫಾರ್ಮ್‌ನಲ್ಲಿರುವ ಎಬಿ ಡಿವಿಲಿಯರ್ಸ್ ಅವರಲ್ಲಿ ಕ್ರಿಕೆಟ್ ಇನ್ನೂ ಸಾಕಷ್ಟು ಉಳಿದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಮತ್ತೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಬೇಕು ಎಂಬ ಕೂಗು ಸಾಕಷ್ಟು ಸಮಯಗಳಿಂದ ಕೇಳಿ ಬಂದಿತ್ತು. ಈಗ ಇದಕ್ಕೆ ಪೂರಕವಾಗಿ ಡಿವಿಲಿಯರ್ಸ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಸಾಧ್ಯವಾದರೆ ಅದು ಶ್ರೇಷ್ಠವಾದ ಸಂಗತಿ ಎಂದು ಎಬಿ ಡಿವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನೀಡಿದ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ನಂತರ ಈ ಮಾತನ್ನು ಡಿವಿಲಿಯರ್ಸ್ ಹೇಳಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!

"ನನ್ನ ಫಾರ್ಮ್, ಫಿಟ್‌ನೆಸ್ ಜೊತೆಗೆ ನಾನು ಸಂಪೂರ್ಣವಾದ ಆಸಕ್ತಿಯನ್ನು ಹೊಂದಿದ್ದೇನೆ. ನಾವು ಅತ್ಯುತ್ತಮ 15ರ ಬಳಗವನ್ನು ಹೊಂದಬೇಕಾಗಿದೆ. ಅದಕ್ಕೆ ಪೂರಕವಾಗಿ ಯೋಜನೆಯನ್ನು ರೂಪಿಸುತ್ತೇವೆ. ಐಪಿಎಲ್ ಮುಕ್ತಾಯದ ನಂತರ ನಾನು ಈ ಬಗ್ಗೆ ಮಾರ್ಕ್ ಬೌಷರ್ ಜೊತೆಗೆ ಚರ್ಚಿಸಲಿದ್ದೇನೆ" ಎಂದು ಎಬಿ ಡಿವಿಲಿಯರ್ಸ್ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಮಡದ ಕೋಚ್ ಆಗಿರುವ ಮಾರ್ಜ್ ಬೌಷರ್ ಕಳೆದ ಶುಕ್ರವಾರ ಎಬಿ ಡಿವಿಲಿಯರ್ಸ್ ಕಮ್‌ಬ್ಯಾಕ್ ಬಗ್ಗೆ ಸುಳಿವು ನೀಡಿದ್ದರು. ಐಪಿಎಲ್‌ಗೆ ತೆರಳುವ ಮುನ್ನ ಎಬಿ ಡಿವಲಿಯರ್ಸ್ ಜೊತೆಗೆ ನಾನು ಎಬಿ ಡಿವಲಿಯರ್ಸ್ ಜೊತೆಗೆ ಚರ್ಚಿಸಿದ್ದೇನೆ" ಎಂದು ಬೌಷರ್ ಹೇಳಿಕೆ ನೀಡಿದ್ದರು.

ಅದ್ಭುತ ಕ್ಯಾಚ್ ಮೂಲಕ ವಿರಾಟ್‌ ಕೊಹ್ಲಿ ಔಟ್ ಮಾಡಿದ ತ್ರಿಪಾಠಿ: ವಿಡಿಯೋಅದ್ಭುತ ಕ್ಯಾಚ್ ಮೂಲಕ ವಿರಾಟ್‌ ಕೊಹ್ಲಿ ಔಟ್ ಮಾಡಿದ ತ್ರಿಪಾಠಿ: ವಿಡಿಯೋ

2018ರ ಮೇ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದರು. ನಿವೃತ್ತಿಗೂ ಮುನ್ನ ಅವರು 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು.

Story first published: Sunday, April 18, 2021, 21:23 [IST]
Other articles published on Apr 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X