ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೆಹಲಿಯಿಂದ ಮಾಲ್ಡೀವ್ಸ್‌ಗೆ ಹಾರಿದ ಕೇನ್ ವಿಲಿಯಮ್ಸನ್ ಹಾಗೂ 3 ಕೀವಿಸ್ ಆಟಗಾರರು

IPL 2021: Kane Williamson and three other NZ players fly out to Maldives

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಇತರ ಮೂವರು ಕೀವಿಸ್ ಆಟಗಾರರು ದೆಹಲಿಯಿಂದ ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದಾರೆ. ಕೊರೊನಾ ಹಾಟ್‌ಸ್ಪಾಟ್ ಆಗಿರುವ ದೆಹಲಿಯಲ್ಲಿ ಉಳಿದುಕೊಳ್ಳಲು ಕಷ್ಟವಾಗುತ್ತಿದೆ ಎಂದು ಈ ನಾಲ್ವರು ಆಟಗಾರರು ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದಾರೆ.

ಈ ಬಾರಿಯ ಐಪಿಎಲ್ ಮುಂದೂಡಿಕೆಯಾದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾಗಿಯಾಗಲಿರುವ ನ್ಯೂಜಿಲೆಂಡ್‌ನ ಆಟಗಾರರು ಮೇ 10 ವರೆಗೆ ಭಾರತದಲ್ಲಿಯೇ ಉಳಿದುಕೊಂಡು ನಂತರ ಇಂಗ್ಲೆಂಡ್‌ಗೆ ಪ್ರಯಾಣಿಸುವುದಾಗಿ ನಿರ್ಧರಿಸಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಈ ಆಟಗಾರರು ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದಾರೆ.

ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿರುವ ಕೇನ್ ವಿಲಿಯನ್ಸ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಿಚೆಲ್ ಸ್ಯಾಂಟರ್, ರಾಯಲ್ ಚಾಲೆಂಜರ್ಸ್ ತಂಡದ ಕೈಲ್ ಜಾಮಿಸನ್ ಜೊತೆಗೆ ಚೆನ್ನೈ ತಂಡದ ಫಿಸಿಯೋ ಟಾಮಿ ಸಿಮ್‌ಸೆಕ್ ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಧಿಕಾರಿಯೊಬ್ಬರು ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ. "ದೆಹಲಿಯಲ್ಲಿ ಕೊರೊನಾ ವೈರಸ್‌ನ ಪರಿಸ್ಥಿತಿಯಿಂದಾಗಿ ಕೇಮ್ ವಿಲಿಯಮ್ಸನ್ ಹಾಗೂ ಕೆಲವರು ಅಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ. ಹಾಗಾಗಿ ಅವರು ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದಾರೆ ಎಂದಿದ್ದಾರೆ.

ಆತನಲ್ಲಿ ವೈರಸ್ ಈಗ ತೆಗೆಯಲ್ಪಟ್ಟಿದೆ: ಆಟಗಾರನ ಶ್ಲಾಘಿಸಿದ ಜಡೇಜಾಆತನಲ್ಲಿ ವೈರಸ್ ಈಗ ತೆಗೆಯಲ್ಪಟ್ಟಿದೆ: ಆಟಗಾರನ ಶ್ಲಾಘಿಸಿದ ಜಡೇಜಾ

ಸದ್ಯ ಮಾಲ್ಡೀವ್ಸ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ಹಾಗೂ ಸಿಬ್ಬಂದಿಗಳು ಉಳಿದುಕೊಂಡಿದ್ದಾರೆ. ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಮೇಲೂ ನಿರ್ಬಂಧವನ್ನು ಹೇರಿರುವ ಕಾರಣ ಆಸಿಸ್ ಆಟಗಾರರು ಸದ್ಯ ತವರಿಗೆ ಮರಳಲು ಸಾಧ್ಯವಿಲ್ಲ. ಹಾಗಾಗಿ ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್ ಪೂರೈಸಿದ ಬಳಿಕ ತವರಿಗೆ ಮರಳುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

Story first published: Friday, May 7, 2021, 23:48 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X