ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆರ್‌ಸಿಬಿ ಶೂಗೆ ಕನ್ನಡಪರ ಸಂಘಟನೆಗಳ ಅಸಮಾಧಾನ

IPL 2021: Kannada activists Oppose to RCB shoes colours

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟಗಾರರ ಶೂವಿನ ಬಗ್ಗೆ ಕನ್ನಡಪರ ಸಂಘಟನೆಗಳು ತಕರಾರು ತೆಗೆದಿವೆ. ಆರ್‌ಸಿಬಿ ಶೂನಿಂದ ಕನ್ನಡಕ್ಕೆ ಅವಮಾನವಾಗಿದೆ ಎಂದು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಫೆಬ್ರವರಿ ತಿಂಗಳ ಐಸಿಸಿ ಪ್ಲೇಯರ್ ಆಫ್ ದ ಮಂಥ್ ಪ್ರಶಸ್ತಿಗಾಗಿ ಮೂವರ ಹೆಸರು ಶಿಫಾರಸುಫೆಬ್ರವರಿ ತಿಂಗಳ ಐಸಿಸಿ ಪ್ಲೇಯರ್ ಆಫ್ ದ ಮಂಥ್ ಪ್ರಶಸ್ತಿಗಾಗಿ ಮೂವರ ಹೆಸರು ಶಿಫಾರಸು

2021ರ ಐಪಿಎಲ್ ಆವೃತ್ತಿಗಾಗಿ ಆರ್ಸಿಬಿ ಧರಿಸಲಿರುವ ಶೂವಿನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳಲಾಗಿತ್ತು. ಈ ಶೂವಿನ ಬಣ್ಣ ಕರ್ನಾಟಕ ಧ್ವಜದ ಹೋಲುತ್ತದೆ. ಹೀಗಾಗಿ ಶೂವಿನ ಬಣ್ಣ ಬದಲಾಯಿಸಬೇಕು ಎಂದು ಕನ್ನಡ ಸಂಘಟನೆಗಳು ಒತ್ತಾಯಿಸಿವೆ.

ಇತ್ತೀಚೆಗೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಇದರಲ್ಲಿ ಆರ್‌ಸಿಬಿಯ ಹೊಸ ಶೂವಿನ ಚಿತ್ರವಿತ್ತು. ಪೂಮ ಕಂಪನಿ ವಿಶೇಷವಾಗಿ ತಯಾರಿಸಿರುವ ಈ ಶೂವಿನ ಬಣ್ಣ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿತ್ತು.

ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಬಲ್ಲೆ: ಕ್ರಿಸ್ ಗೇಲ್ ಆತ್ಮವಿಶ್ವಾಸದ ಮಾತುಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಬಲ್ಲೆ: ಕ್ರಿಸ್ ಗೇಲ್ ಆತ್ಮವಿಶ್ವಾಸದ ಮಾತು

ಕೊಹ್ಲಿ ಟ್ವೀಟ್ ಮಾಡಿದ್ದ ಈ ಚಿತ್ರವನ್ನು ಹಾಕಿಕೊಂಡು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಕನ್ನಡಧ್ವಜಕ್ಕೆ ಹೋಲುವ ಬಣ್ಣವನ್ನು ಶೂಗಳಲ್ಲಿ ಬಳಕೆ ಮಾಡೋದು ಸರಿನಾ? ಕೂಡಲೇ ಸರಿಪಡಿಸಿ' ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ.

Story first published: Tuesday, March 2, 2021, 18:07 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X