ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಪ್ಲೇಯಿಂಗ್ XI ಹಂಚಿಕೊಂಡ ನಿರ್ದೇಶಕ ಸಿಂಪಲ್ ಸುನಿ

IPL 2021: Kannada Director Simple Suni shares his RCB Playing 11

ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಆ ಒಂದು ದಿನ ಬಂದೇ ಬಿಟ್ಟಿದೆ. 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದು ( ಏಪ್ರಿಲ್ 9 ) ಆರಂಭವಾಗುತ್ತಿದ್ದು ಮೊದಲನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಪ್ರತಿವರ್ಷದಂತೆ ಈ ವರ್ಷವೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಅಭಿಮಾನಿಗಳು ಅಪಾರವಾದ ಭರವಸೆಯನ್ನಿಟ್ಟುಕೊಂಡಿದ್ದಾರೆ. ಕನ್ನಡ ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೆಲೆಬ್ರಿಟಿ ಅಭಿಮಾನಿಗಳಲ್ಲೊಬ್ಬರು. ಆರ್‌ಸಿಬಿ ತಂಡದ ಮೇಲೆ ಅಪಾರವಾದ ಅಭಿಮಾನವನ್ನು ಹೊಂದಿರುವ ಸಿಂಪಲ್ ಸುನಿ ಟ್ವಿಟ್ಟರ್ ಮೂಲಕ ಐಪಿಎಲ್ ಸಮಯದಲ್ಲಿ ಬೆಂಗಳೂರು ತಂಡದ ಬಗ್ಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಇದೀಗ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ 'ನನ್ನ ಹನ್ನೊಂದು ಆಡುವ ಆರ್‌ಸಿಬಿ ಆಟಗಾರರು' ಎಂದು ಟ್ವೀಟ್ ಮಾಡುವ ಮುಖಾಂತರ ತಮ್ಮ ಆರ್‌ಸಿಬಿ ಆಡುವ ಬಳಗವನ್ನು ನಿರ್ದೇಶಕ ಸಿಂಪಲ್ ಸುನಿ ಪ್ರಕಟಿಸಿದ್ದಾರೆ. ಸಿಂಪಲ್ ಸುನಿ ರಚಿಸಿರುವ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಈ ಕೆಳಕಂಡಂತಿದೆ ನೋಡಿ..

ದೇವದತ್ ಪಡಿಕ್ಕಲ್, ಫಿನ್ ಅಲೆನ್ , ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ವಾಷಿಂಗ್ಟನ್ ಸುಂದರ್, ಕೈಲ್ ಜಾಮಿಸನ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಹಾಲ್. ಇಷ್ಟು ಆಟಗಾರರನ್ನೊಳಗೊಂಡ ಆರ್‌ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಅನ್ನು ನಿರ್ದೇಶಕ ಸಿಂಪಲ್ ಸುನಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪ್ರಕಟಿಸಿದ್ದಾರೆ.

Story first published: Friday, April 9, 2021, 12:28 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X