ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ಕೆವಿನ್ ಪೀಟರ್ಸನ್ ಮೆಚ್ಚುಗೆ

IPL 2021: Kevin Pietersen praises RCBs bowling department

ಚೆನ್ನೈ: ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆರ್‌ಸಿಬಿ ಬೌಲಿಂಗ್‌ ವಿಭಾಗ ಚೆನ್ನಾಗಿದೆ. ಹೀಗಾಗಿಯೇ ನಾಯಕ ವಿರಾಟ್ ಕೊಹ್ಲಿ ನಿರಾಳರಾಗಿದ್ದಾರೆ ಎಂದು ಪೀಟರ್ಸನ್ ಹೇಳಿದ್ದಾರೆ.

ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದರ ಹಿಂದಿನ ಕಾರಣ ಬಾಯ್ಬಿಟ್ಟ ರಸೆಲ್!ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದರ ಹಿಂದಿನ ಕಾರಣ ಬಾಯ್ಬಿಟ್ಟ ರಸೆಲ್!

ಐಪಿಎಲ್ 2021ರ ಆವೃತ್ತಿಯ ವಿರಾಟ್ ಕೊಹ್ಲಿ ಮುಂದಾಳತ್ವದ ಆರ್‌ಸಿಬಿ ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆಲುವು ಕಂಡಿದೆ. ಐಪಿಎಲ್ ತಂಡವೊಂದು ಆರಂಭಿಕವಾಗಿ ನಾಲ್ಕೂ ತಂಡಗಳನ್ನೂ ಗೆದ್ದ ಅಪರೂಪದ ದಾಖಲೆಗೆ ಆರ್‌ಸಿಬಿ ಕಾರಣವಾಗಿದೆ. ಸದ್ಯದ ಅಂಕಪಟ್ಟಿಯಲ್ಲೂ ಆರ್‌ಸಿಬಿ ಅಗ್ರಸ್ಥಾನದಲ್ಲಿದೆ.

ಆಡಿರುವ ಕೇವಲ 4 ಪಂದ್ಯಗಳಲ್ಲಿ ಆರ್‌ಸಿಬಿ ಬೌಲರ್ ಹರ್ಷಲ್ ಪಟೇಲ್ 12 ವಿಕೆಟ್ ಸಾಧನೆ ಮಾಡಿದ್ದಾರೆ. ಸದ್ಯ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್‌ಗಾಗಿ ನೀಡುವ ಗೌರವವಾದ ಪರ್ಪಲ್ ಕ್ಯಾಪ್‌ ಪಟೇಲ್ ಕೈಯಲ್ಲಿದೆ. ಇನ್ನು ಮೊಹಮ್ಮದ್ ಸಿರಾಜ್‌ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಮೂರನೇ ಸೋಲಿನ ಬಳಿಕ ತಂಡದಲ್ಲಿನ ಕೊರತೆ ಬಿಚ್ಚಿಟ್ಟ ರೋಹಿತ್ ಶರ್ಮಾ!ಮೂರನೇ ಸೋಲಿನ ಬಳಿಕ ತಂಡದಲ್ಲಿನ ಕೊರತೆ ಬಿಚ್ಚಿಟ್ಟ ರೋಹಿತ್ ಶರ್ಮಾ!

'ಆರ್‌ಸಿಬಿಯಲ್ಲಿ ದೊಡ್ಡ ಬದಲಾವಣೆ ತಂದಿರುವ ವಿಭಾಗವೆಂದರೆ ಅದು ಬೌಲಿಂಗ್ ವಿಭಾಗ ಎಂದು ನನಗನ್ನಿಸುತ್ತದೆ. ಕೊಹ್ಲಿ ಒಳ್ಳೆಯ ಬೌಲಿಂಗ್‌ ಕಾಂಬಿನೇಶನ್‌ಗಾಗಿ ಹುಡುಕಾಡುತ್ತಿದ್ದರು. ಅವರಿಗೆ ಉತ್ತಮ ಬೌಲರ್‌ಗಳು ಸಿಕ್ಕಂತಾಗಿದೆ. ಹೀಗಾಗಿ ಕೊಹ್ಲಿಯೀಗ ನಿರಾಳರಾಗಿದ್ದಾರೆ,' ಎಂದು ಪೀಟರ್ಸನ್ ಹೇಳಿದ್ದಾರೆ.

Story first published: Saturday, April 24, 2021, 22:40 [IST]
Other articles published on Apr 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X