ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ವಿರುದ್ಧದ ರನ್ ಚೇಸ್ ರಹಸ್ಯ ಬಿಚ್ಚಿಟ್ಟ ಪೊಲಾರ್ಡ್ ; ಇದು ಡ್ರೆಸಿಂಗ್ ರೂಮ್ ಪ್ಲಾನ್

IPL 2021 : Kieron Pollard unleashed the secret behind MIs win against CSK

ಪ್ರಸ್ತುತ ಐಪಿಎಲ್ ಟೂರ್ನಿಯ ಆರಂಭದಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ ಮುಂಬೈ ಇಂಡಿಯನ್ಸ್ ತಂಡ ಇದೀಗ ಗೆಲುವಿನ ಹಾದಿಗೆ ಮರಳಿದೆ. ಶನಿವಾರ (ಮೇ 1) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿಯಲ್ಲಿ ರನ್ ಹೊಳೆಯೇ ಹರಿದಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊಯಿನ್ ಅಲಿ, ಡುಪ್ಲೆಸಿಸ್ ಹಾಗೂ ಅಂಬಾಟಿ ರಾಯುಡು ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 218 ರನ್ ಗಳಿಸಿತು.

ಈ ಭರ್ಜರಿ ಮೊತ್ತದ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 219 ರನ್‌ಗಳ ಬೃಹತ್ ಗುರಿ ಎದುರಾಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ ಈ ಬೃಹತ್ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡ ತಲುಪುತ್ತಾ ಎಂದು ಎಲ್ಲರೂ ಅನುಮಾನಿಸತೊಡಗಿದರು. ಆದರೆ ಮುಂಬೈ ಇಂಡಿಯನ್ಸ್ ತಂಡದ ಪರ ಕೀರನ್ ಪೊಲಾರ್ಡ್ 34 ಎಸೆತಗಳಲ್ಲಿ 87 ರನ್ ಬಾರಿಸುವುದರ ಮೂಲಕ ಅಬ್ಬರದ ಬ್ಯಾಟಿಂಗ್ ನಡೆಸಿದರು, ಈ ಮೂಲಕ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸುವುದರ ಮೂಲಕ ಮುಂಬೈ ದಾಖಲೆಯ ಜಯ ಗಳಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ಕೀರನ್ ಪೊಲಾರ್ಡ್ ಡ್ರೆಸಿಂಗ್ ರೂಂನಲ್ಲಿ ಪಂದ್ಯದ ಮಧ್ಯಂತರ ವಿರಾಮದ ವೇಳೆ ಚೆನ್ನೈ ನೀಡಿದ ಬೃಹತ್ ಮೊತ್ತವನ್ನು ಯಾವ ರೀತಿ ಮುಟ್ಟಬೇಕೆಂದು ಮುಂಬೈ ಇಂಡಿಯನ್ಸ್ ತಂಡ ಯೋಜನೆ ಹಾಕಿದ ರೀತಿಯನ್ನು ಬಿಚ್ಚಿಟ್ಟಿದ್ದಾರೆ. 'ವಿರಾಮದ ವೇಳೆ ಡ್ರೆಸಿಂಗ್ ರೂಂನಲ್ಲಿ ಚೇಸಿಂಗ್ ಕುರಿತು ಮಾತಾಡಿದೆವು, ಪವರ್ ಪ್ಲೇ ಓವರ್‌ಗಳಲ್ಲಿ ಒಳ್ಳೆಯ ಆಟವನ್ನು ಆಡಿ ಉತ್ತಮ ಆರಂಭವನ್ನು ಪಡೆದರೆ ಚೇಸಿಂಗ್ ಮಾಡಲು ಯತ್ನಿಸಬಹುದು ಎಂದು ಯೋಜನೆ ಹಾಕಿದೆವು. ನಮ್ಮ ಯೋಜನೆಯಂತೆ ಪವರ್ ಪ್ಲೇನಲ್ಲಿ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿಕಾಕ್ ಉತ್ತಮ ಆರಂಭವನ್ನು ಮಾಡಿ ಒಳ್ಳೆಯ ರನ್ ಗಳಿಸಿದರು. ನಂತರದ ಓವರ್‌ಗಳಲ್ಲಿ ಯಾವ ಬೌಲರ್‌ಗೆ ರನ್ ಬಾರಿಸಬೇಕು ಎಂಬುದನ್ನು ಮೈದಾನದಲ್ಲಿಯೇ ಸರಿಯಾಗಿ ಯೋಜನೆ ಹಾಕಿ ತೀರ್ಮಾನಿಸಿ ಉತ್ತಮವಾಗಿಯೇ ಜಾರಿಗೆ ತಂದೆವು, ನಮ್ಮ ಬ್ಯಾಟ್ಸ್‌ಮನ್‌ಗಳು ತಂಡದ ಗೆಲುವುಗಾಗಿ ಪಣತೊಟ್ಟು ಸರಿಯಾದ ರೀತಿಯಲ್ಲಿ ಆಡಿದರು, ಹೀಗಾಗಿ ಬೃಹತ್ ಮೊತ್ತದ ಗುರಿಯನ್ನು ತಲುಪಲು ಸಾಧ್ಯವಾಯಿತು' ಎಂದು ಕೀರನ್ ಪೊಲಾರ್ಡ್ ಚೆನ್ನೈ ವಿರುದ್ಧದ ಅಮೋಘ ಗೆಲುವಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು.

Story first published: Sunday, May 2, 2021, 8:56 [IST]
Other articles published on May 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X