ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕಿಂಗ್ಸ್ XI ಪಂಜಾಬ್ ತಂಡದ ಹೆಸರು ಹಾಗೂ ಲೋಗೋ ಬದಲಾವಣೆ ಸಾಧ್ಯತೆ

IPL 2021: Kings XI Punjab might change team name and logo for upcoming season

14ನೇ ಆವೃತ್ತಿಯ ಐಪಿಎಲ್‌ಗೆ ಪೂರಕ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ. ಮಿನಿ ಹರಾಜಿಗೆ ದಿನಗಣನೆಯೂ ಆರಂಭವಾಗಿದೆ. ಈ ಮಧ್ಯೆ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಯಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ಹೆಸರು ಹಾಗೂ ಲೋಗೋ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಅನಧಿಕೃತ ಟ್ವಿಟ್ಟರ್ ಖಾತೆಯ ರಿಪ್ಲೈ ಒಂದು ಈ ಬಗ್ಗೆ ಸುಳಿವನ್ನು ನೀಡಿದೆ.

ಟ್ವಿಟ್ಟರ್‌ನಿಂದ ವೆರಿಫೈ ಆಗದ ಖಾತೆಯೊಂದು ಹೆಸರನ್ನು ಬಹಿರಂಗೊಡಿಸದೇ ಈ ಬಗ್ಗೆ ಮೂಲಗಳ ಹೇಳಿಕೆಯೊಂದನ್ನು ಉಲ್ಲೇಖ ಮಾಡಿದೆ. ಈ ಟ್ವೀಟ್‌ನ ಪ್ರಕಾರ ಫೆಬ್ರವರಿ 17ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದಿದೆ. ಐಪಿಎಲ್‌ನ ಆರಂಭಿಕ ಆವೃತ್ತಿಯಿಂದಲೂ ಭಾಗವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈವರೆಗೂ ಪ್ರಶಸ್ತಿಯನ್ನು ಜಯಿಸುವಲ್ಲಿ ವಿಫಲವಾಗಿದೆ. ಕಳೆದ ಬಾರಿ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಮೊದಲಾರ್ಧದ ಬಳಿಕ ನೀಡಿದ ಕಳಪೆ ಪ್ರದರ್ಶನದಿಂದ ಪ್ಲೇಆಫ್ ಹಂತಕ್ಕೇ ಪ್ರವೇಶ ಪಡೆಯಲಿ ವಿಫಲವಾಗಿತ್ತು.

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಸೋತರೆ ಕೊಹ್ಲಿ ಕ್ಯಾಪ್ಟನ್ ಆಗಿ ಉಳಿಯಲ್ಲ!ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಸೋತರೆ ಕೊಹ್ಲಿ ಕ್ಯಾಪ್ಟನ್ ಆಗಿ ಉಳಿಯಲ್ಲ!

ಹರಾಜಿಗೂ ಮುನ್ನ ಬದಲಾವಣೆ?

ಹರಾಜಿಗೂ ಮುನ್ನ ಬದಲಾವಣೆ?

ಚೆನ್ನೈನಲ್ಲಿ ಫೆಬ್ರವರಿ 18ರಂದು ಐಪಿಎಲ್‌ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೂ ಒಂದು ದಿನ ಮುನ್ನ ಪಂಜಾಬ್ ತನ್ನ ಹೆಸರು ಹಾಗೂ ಲೋಗೋ ಬದಲಾವಣೆಯ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಾಹಿತಿ ನೀಡಿಲ್ಲ. ಹೀಗಾಗಿ ಈ ಬಗ್ಗೆ ಕುತೂಹಲಗಳು ಹಾಗೆಯೇ ಉಳಿದುಕೊಂಡಿದೆ.

ಕನ್ನಡಿಗರೇ ಅಧಿಕವಿರುವ ತಂಡ

ಕನ್ನಡಿಗರೇ ಅಧಿಕವಿರುವ ತಂಡ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಈ ತಂಡದ ಮಾಲೀಕತ್ವದಲ್ಲಿ ಪಾಲುಹೊಂದಿದ್ದಾರೆ.

ರೀಟೈನ್ ಮಾಡಿಕೊಂಡ ಆಟಗಾರರು

ರೀಟೈನ್ ಮಾಡಿಕೊಂಡ ಆಟಗಾರರು

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉಳಿಸಿಕೊಂಡ ಆಟಗಾರರು: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡ, ಪ್ರಭಸೀಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್‌ದೀಪ್‌ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೋರ್

ಬಿಡುಗಡೆಯಾದ ಆಟಗಾರರು

ಬಿಡುಗಡೆಯಾದ ಆಟಗಾರರು

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬಿಡುಗಡೆಗೊಳಿಸಿದ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಹರ್ದಸ್ ವಿಲ್ಜೋಯೆನ್, ಜಗದೀಶಾ ಸುಚಿತ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೃಷ್ಣಪ್ಪ ಗೌತಮ್, ತಾಜಿಂದರ್ ಸಿಂಗ್.

Story first published: Thursday, February 11, 2021, 15:13 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X