ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ಬ್ಯಾಟಿಂಗ್ ಹೊಗಳಿ ಕೆಕೆಆರ್ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮೆಕ್ಕಲಂ

IPL 2021: KKR Coach Brendon McCullum not happy with the team

ಈ ಬಾರಿಯ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಕಳಪೆ ಪ್ರದರ್ಶನ ಮುಂದುವರಿದಿದೆ. ಡೆಲ್ಲಿ ಪ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಕೆಕೆಆರ್ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬಳಿಕ ಕೆಕೆಆರ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಪ್ರತಿಕ್ರಿಯಿಸಿದ್ದು ತಂಡದ ಪ್ರದರ್ಶನದ ಬಗ್ಗೆ ಅತೃಪ್ತಿಯನ್ನು ಹೊರ ಹಾಕಿದ್ದಾರೆ.

"ಇದು ಬಹಳ ನಿರಾಶೆಯನ್ನು ಮೂಡಿಸುತ್ತದೆ. ಆಟಗಾರರಾಗಿ ಆಡಲು ಆಯ್ಕೆಯಾಗಲು ನೀವು ಸ್ವಾತಂತ್ರ್ಯ, ವಿಶ್ವಾಸ ಮತ್ತು ನಿಷ್ಠೆಯನ್ನು ಬಯಸುತ್ತೀರಿ. ಮೈದಾನಕ್ಕೆ ಇಳಿದ ಬಳಿಕ ಆಕ್ರಮಣಕಾರಿಯಾಗಿ ಆಡುವ ಮೂಲಕ ಪಂದ್ಯವನ್ನು ಮುಂದಕ್ಕೆ ಒಯ್ಯಬೇಕು. ಆ ಮೂಲಕ ನಿಮ್ಮ ತಂಡದ ಪರವಾಗಿ ಸಂಗತಿಗಳು ನಡೆಯುವಂತೆ ಮಾಡಬೇಕು. ಇದನ್ನು ನಾನು ಮತ್ತು ತಂಡದ ನಾಯಕ ಇಯಾನ್ ಮಾರ್ಗನ್ ಆಟಗಾರರಿಂದ ಆ ತರಹದ ಪ್ರದರ್ಶನವನ್ನು ನಿರೀಕ್ಷಿಸುತ್ತೇವೆ.

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವುಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವು

"ಆದರೆ ದುರದೃಷ್ಟವಶಾತ್ ನಾವು ಬಯಸುವುದು ನಮ್ಮ ತಂಡದಿಂದ ದೊರೆಯುತ್ತಿಲ್ಲ. ಇಂದು ಪೃಥ್ವಿ ಶಾ ಆಡಿದ್ದು ನಾವು ನಮ್ಮ ತಂಡದ ಆಟಗಾರರಿಂದ ನಿರೀಕ್ಷಿಸಿದಂತಾ ಆಟ. ನಮ್ಮ ಆಟಗಾರರಿಗೆ ಆತ ಯಾವ ರೀತಿಯ ಪ್ರದರ್ಶನ ನೀಡಬೇಕು ಎಂದು ಅದ್ಭುತವಾಗಿ ಹೇಳಿಕೊಟ್ಟಿದ್ದಾನೆ" ಎಂದು ಮೆಕ್ಕಲಂ ಪ್ರತಿಕ್ರಿಯಿಸಿದ್ದಾರೆ.

"ನೀವು ಪ್ರತಿ ಎಸೆತವನ್ನೂ ಬೌಂಡರಿಗೆ ಅಟ್ಟುವುದು ಸುಲಭವಿಲ್ಲ. ಆದರೆ ಅಂತಾ ಪ್ರಯತ್ನ, ಹಾಗೂ ತುಡಿತ ನಿಮ್ಮಲ್ಲಿರಬೇಕು. ದುರದೃಷ್ಟವಶಾತ್ ನಮ್ಮಿಂದ ಉತ್ತಮ ಹೊಡೆತಗಳು ಬರಲಿಲ್ಲ. ನಾನು ವೃತ್ತಿಯಲ್ಲಿ ಒಂದು ನಾಣ್ಣುಡಿಯನ್ನು ಪಾಲಿಸುತ್ತಾ ಬಂದಿದ್ದೇನೆ. 'ನೀನು ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ವ್ಯಕ್ತಿಯನ್ನೇ ಬದಲಾಯಿಸು' ಹಾಗಾಗಿ ನಾನು ತಂಡದಲ್ಲಿ ಕೆಲ ಬದಲಾವಣೆಗಳು ಮಾಡಿ ಹೊಸತನವನ್ನು ತರಬೇಕಾಗಿದೆ" ಎಂದು ಮೆಕ್ಕಲಂ ಹೇಳಿದ್ದಾರೆ.

Story first published: Friday, April 30, 2021, 13:07 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X