ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ ಕೆಕೆಆರ್ ಸ್ಟಾರ್ ಆ್ಯಂಡ್ರೆ ರಸೆಲ್

IPL 2021: KKR star Andre Russell resumes training after completing quarantine

ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಟಾರ್ ಬ್ಯಾಟ್ಸ್‌ಮನ್, ವೆಸ್ಟ್‌ ಇಂಡೀಸ್‌ನ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಸೆಪ್ಟೆಂಬರ್‌ 18ರಂದು ಅಭ್ಯಾಸ ಆರಂಭಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಗೆ ಬಂದಿರುವ ರಸೆಲ್ ನೆಟ್ ಅಭ್ಯಾಸ ನಡೆಸಿದ್ದಾರೆ.

 ಭಾರತದ ಮುಖ್ಯಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್ ಅರ್ಜಿ? ಭಾರತದ ಮುಖ್ಯಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್ ಅರ್ಜಿ?

"ರಸೆಲ್ ಮೇನಿಯಾ ಮತ್ತೆ ಬಂದಿದೆ. ನಿಮ್ಮ ಉತ್ಸಾಹ ಹೇಗಿದೆ ಅನ್ನೋದನ್ನು ಕಾಮೆಂಟ್ ಮೂಲಕ ತಿಳಿಸಿ," ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ. ಟ್ವೀಟ್‌ ಜೊತೆ ರಸೆಲ್ ಅಭ್ಯಾಸ ನಡೆಸುತ್ತಿರುವ ಚಿತ್ರಗಳೂ ಇವೆ.

ಇದಕ್ಕೂ ಮುನ್ನ ಕೆಕೆಆರ್‌ನ ನಾಯಕ, ಇಂಗ್ಲೆಂಡ್‌ನ ಇಯಾನ್ ಮಾರ್ಗನ್ ಮಾತನಾಡಿ, "ಅಭಿಮಾನಿಗಳು ಮೈದಾನಕ್ಕೆ ಬರುತ್ತಿರುವುದರಿಂದ ಅವರನ್ನು ಸ್ವಾಗತಿಸಲು ನಮ್ಮ ತಂಡ ಉತ್ಸಾಹದಲ್ಲಿದೆ," ಎಂದಿದ್ದರು. ಐಪಿಎಲ್ ಆರಂಭಿಕ ಹಂತದಲ್ಲಿ ಅಭಿಮಾನಿಗಳಿಗೆ ಪ್ರವೇಶ ಇರಲಿಲ್ಲ. ಆದರೆ ದ್ವಿತೀಯ ಹಂತದಲ್ಲಿ 50 ಶೇಕಡಾ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಟೀಮ್ ಇಂಡಿಯಾ ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ ಸರಿಯೇ?; ತುಟಿ ಬಿಚ್ಚಿದ ವಿರೇಂದ್ರ ಸೆಹ್ವಾಗ್ಟೀಮ್ ಇಂಡಿಯಾ ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ ಸರಿಯೇ?; ತುಟಿ ಬಿಚ್ಚಿದ ವಿರೇಂದ್ರ ಸೆಹ್ವಾಗ್

ಐಪಿಎಲ್ ಆರಂಭಿಕ ಹಂತದಲ್ಲಿ ಕೆಕೆಆರ್ ನೀರಸ ಪ್ರದರ್ಶನ ನೀಡಿತ್ತು. ಆಡಿದ್ದ ಏಳು ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆದ್ದು 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿತ್ತು. ಈ ಬಾರಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿ ಕೆಕೆಆರ್ ಇದೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್‌ 15ರ ವರೆಗೆ ಐಪಿಎಲ್ ದ್ವಿತೀಯ ಹಂತದ ಸ್ಪರ್ಧೆಗಳು ನಡೆಯಲಿವೆ.

Story first published: Saturday, September 18, 2021, 17:38 [IST]
Other articles published on Sep 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X