ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಿಲ್ ದೌರ್ಬಲ್ಯತೆಯನ್ನು ಬಿಚ್ಚಿಟ್ಟ ರಾಹುಲ್ ಚಹರ್

IPL 2021, KKR vs MI : Rahul Chahar revealed the weakness of Shubman Gill

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಣಸಾಡಿದವು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 152 ರನ್‌ ಗಳಿಸಿತು. 153 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಉತ್ತಮ ಆರಂಭ ದೊರಕಿತು.

ಆರಂಭಿಕರಾಗಿ ಬಂದ ನಿತೀಶ್ ರಾಣಾ 57 ರನ್ ಮತ್ತು ಶುಬ್ಮನ್ ಗಿಲ್ 33 ರನ್ ಗಳಿಸಿದರು. ನಂತರ ಬಂದ ಬೇರೆ ಯಾವ ಆಟಗಾರರೂ ಸಹ ಒಂದಂಕಿ ದಾಟಲಿಲ್ಲ. 20 ಓವರ್‌ಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ತಂಡ 10 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮುಂಬೈ ಪರ 4 ವಿಕೆಟ್ ಪಡೆದ ರಾಹುಲ್ ಚಹರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಂದ್ಯ ಮುಗಿದ ನಂತರ ಮಾತನಾಡಿದ ರಾಹುಲ್ ಚಹರ್ ಪಂದ್ಯದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಶುಬ್ಮನ್ ಗಿಲ್ ಅವರ ದೌರ್ಬಲ್ಯವನ್ನು ಬಿಚ್ಚಿಟ್ಟಿದ್ದಾರೆ. ನಾನು ಮತ್ತು ಶುಬ್ಮನ್ ಗಿಲ್ ಇಬ್ಬರೂ ಸಹ ಅಂಡರ್19 ಸಮಯದಿಂದಲೂ ಒಟ್ಟಿಗೆ ಆಟವಾಡುತ್ತಾ ಬಂದಿದ್ದರಿಂದ ಶುಬ್ಮನ್ ಗಿಲ್ ಗೆ ಸತತವಾಗಿ ಸಿಕ್ಸ್ ಹೊಡೆಯುವ ಸಾಮರ್ಥ್ಯ ಮೊದಲಿನಿಂದಲೂ ಇಲ್ಲ ಎಂದು ನನಗೆ ತಿಳಿದಿತ್ತು ಹೀಗಾಗಿ ಗಿಲ್ ಬ್ಯಾಟಿಂಗ್ ವೇಳೆ ಪದೇಪದೆ ಟಾಸ್ ಎಸೆದು ಆತನ ವಿಕೆಟ್ ಪಡೆದೆ ಎಂದು ರಾಹುಲ್ ಚಹರ್ ತಿಳಿಸಿದ್ದಾರೆ.

ಪಂದ್ಯದ ಕುರಿತು ಅನುಭವವನ್ನು ಹಂಚಿಕೊಳ್ಳುವ ವೇಳೆ ರಾಹುಲ್ ಚಹರ್ ಗಿಲ್ ದೌರ್ಬಲ್ಯವನ್ನು ಹೊರ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಗಿಲ್ ದೌರ್ಬಲ್ಯ ತಿಳಿದುಕೊಂಡಿರುವ ಬೌಲರ್‌ಗಳು ಗಿಲ್ ವಿಕೆಟ್ ಪಡೆಯಲು ಇದೇ ತಂತ್ರವನ್ನು ಬಳಸುತ್ತಾರಾ ಕಾದು ನೋಡಬೇಕು.

Story first published: Wednesday, April 14, 2021, 20:02 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X