ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿ ಆಕ್ರಮಣಕಾರಿ ರಾಹುಲ್‌ರನ್ನು ನೋಡಲಿದ್ದೀರಿ: ಪಂಜಾಬ್ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್

IPL 2021: KL Rahul will be more aggressive in this season says Wasim Jaffer

ಕಳೆದ ಬಾರಿಯ ಆವೃತ್ತಿಯಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಲ್ಲದೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿಯೂ ಮಿಂಚಿದ್ದರು. ಆದರೂ ತಂಡವನ್ನು ಪ್ಲೇ ಆಫ್ ಹಂತಕ್ಕೇರಿಸುವಲ್ಲಿ ಅವರು ವಿಫಲರಾಗಿದ್ದರು. 14 ಪಂದ್ಯಗಳನ್ನು ಆಡಿದ್ದ ಕೆಎಲ್ ರಾಹುಲ್ 56ರ ಸರಾಸರಿಯಲ್ಲಿ 670 ರನ್ ಬಾರಿಸಿ ಮಿಂಚಿದ್ದರು. ಆದರೆ 129.35ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು ತಂಡ ದೊಡ್ಡ ಮೊತ್ತ ಗಳಿಸುವಲ್ಲಿ ಹಿಂದುಳಿಯಲು ಕಾರಣವಾಯಿತು ಎಂಬ ವಾದಗಳನ್ನು ಅಭಿಮಾನಿಗಳು ಮುಂದಿಟ್ಟಿದ್ದರು.

ಆದರೆ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಈ ಬಾರಿಯ ಆವೃತ್ತಿಯಲ್ಲಿ ಕೆಎಲ್ ರಾಹುಲ್ ವಿಭಿನ್ನವಾದ ರೀತಿಯಲ್ಲಿ ಕಾಣಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಪಂಜಾಬ್ ಕಿಂಗ್ಸ್ ನಾಯಕ ಕಾಣಿಸಿಕೊಳ್ಳಲಿದ್ದಾರೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ.

ಐಪಿಎಲ್: ಆರ್‌ಸಿಬಿಯ ಪ್ರಭಾವಿ ಆಟಗಾರನ ಹೆಸರಿಸಿದ ಮೈಕ್ ಹೆಸನ್ಐಪಿಎಲ್: ಆರ್‌ಸಿಬಿಯ ಪ್ರಭಾವಿ ಆಟಗಾರನ ಹೆಸರಿಸಿದ ಮೈಕ್ ಹೆಸನ್

ರಾಹುಲ್ ವಿಧಾನ ಸಮರ್ಥಿಸಿದ ಜಾಫರ್

ರಾಹುಲ್ ವಿಧಾನ ಸಮರ್ಥಿಸಿದ ಜಾಫರ್

ಇನ್ನು ಕಳೆದ ಬಾರಿಯ ಆವೃತ್ತಿಯಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಬ್ಯಾಟಿಂಗ್ ವಿಧಾನವನ್ನು ಸಮರ್ಥನೆ ಮಾಡಿಕೊಂಡರು. ಕಳೆದ ಆವೃತ್ತಿಯಲ್ಲಿ ಐದನೇ ಕ್ರಮಾಂಕದ ನಂತರ ಬಲಿಷ್ಠ ಆಟಗಾರರು ಇರಲಿಲ್ಲ. ಹಾಗಾಗಿ ಅವರು ದೀರ್ಘ ಕಾಲ ಆಡಬೇಕಾಗಿತ್ತು ಎಂದು ವಾಸಿಂ ಜಾಫರ್ ವಿವರಿಸಿದ್ದಾರೆ.

ಅಂಜಿಕೆಯಿಂದ ಬ್ಯಾಟಿಂಗ್ ಮಾಡಿದ್ದರು

ಅಂಜಿಕೆಯಿಂದ ಬ್ಯಾಟಿಂಗ್ ಮಾಡಿದ್ದರು

"ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಅಂಜಿಕೆಯಿಂದಲೇ ಬ್ಯಾಟಿಂಗ್ ಮಾಡಿದ್ದರು. ಐದನೇ ಕ್ರಮಾಂಕದ ನಂತರ ಹೆಚ್ಚಿನ ಬ್ಯಾಟಿಂಗ್ ಸಾಮರ್ಥ್ಯ ತಂಡದಲ್ಲಿ ಇಲ್ಲವಾಗಿದ್ದ ಕಾರಣ ಹಾಗೂ ಮ್ಯಾಕ್ಸ್‌ವೆಲ್ ಫಾರ್ಮ್‌ನಲ್ಲಿ ಇಲ್ಲದ ಕಾರಣದಿಂದಾಗಿ ಅವರು ಸುದೀರ್ಘ ಕಾಲ ಕ್ರೀಸ್‌ನಲ್ಲಿ ಇರಬೇಕಾಗಿತ್ತು. ಹೀಗಾಗಿ ಅವರು ಆ ಜವಾಬ್ಧಾರಿಯನ್ನು ವಹಿಸಿಕೊಂಡು ಆದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಆದರೆ ಈ ಬಾರಿ ಆಕ್ರಮಣಕಾರಿ ಕೆಎಲ್ ರಾಹುಲ್ ಅವರನ್ನು ನೀವು ಖಂಡಿತವಾಗಿಯೂ ನೋಡಲಿದ್ದೀರಿ" ಎಂದು ವಾಸಿಂ ಜಾಫರ್ ಹೇಳಿದ್ದಾರೆ.

ಒಂದು ಸರಣಿಯಿಂದ ಕೆಟ್ಟ ಆಟಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ

ಒಂದು ಸರಣಿಯಿಂದ ಕೆಟ್ಟ ಆಟಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ

ಇನ್ನು ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅವರ ಕಳಪೆ ಪ್ರದರ್ಶನವನ್ನು ಉಲ್ಲೇಖಿಸಿ ಮಾತನಾಡಿದ ಜಾಫರ್ ಒಂದು ಕೆಟ್ಟ ಟಿ20 ಸರಣಿ ಅವರನ್ನು ಕೆಟ್ಟ ಆಟಗಾರ ಎಂದು ಪರಿಗಣಿಸುವಂತೆ ಮಾಡಲಾರದು. ಆತ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಶತಕವನ್ನು ಬಾರಿಸಿದ ಆಟಗಾರ. ಆತನ ಆಟ ಹೇಗಿದೆ ಎಂಬುದನ್ನು ಎಲ್ಲರಿಗಿಂತಲೂ ಚೆನ್ನಾಗಿ ಆರಿತುಕೊಂಡಿದ್ದಾರೆ" ಎಂದು ಕೆಎಲ್ ರಾಹುಲ್‌ಗೆ ಬೆಂಬಲಿಸಿ ಮಾತನಾಡಿದರು.

Story first published: Thursday, April 1, 2021, 16:15 [IST]
Other articles published on Apr 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X