ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ರಾಜಸ್ಥಾನ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯ

IPL 2021: Kolkata Knight Riders vs Rajasthan Royals, 54th Match report

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 7) ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 54ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ 86 ರನ್ ಜಯ ಗಳಿಸಿದೆ. ಶುಬ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್, ಶಿವಂ ಮಾವಿ ಮತ್ತು ಲಾಕಿ ಫಾರ್ಗುಸನ್ ಮಾರಕ ಬೌಲಿಂಗ್‌ನೊಂದಿಗೆ ಕೆಕೆಆರ್ ಪ್ಲೇ ಆಫ್ಸ್‌ ದಾರಿ ಸುಲಭವಾಗಿಸಿಕೊಂಡಿದೆ.

ಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 56 (44 ಎಸೆತ), ವೆಂಕಟೇಶ್ ಅಯ್ಯರ್ 38 (35 ಎಸೆತ), ನಿತೀಶ್ ರಾಣಾ 12, ರಾಹುಲ್ ತ್ರಿಪಾಠಿ 21, ಇಯೋನ್ ಮಾರ್ಗನ್ 13, ದಿನೇಶ್ ಕಾರ್ತಿಕ್ 14 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 171 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಯಶಸ್ವಿ ಜೈಸ್ವಾಲ್ 0, ಲಿಯಾಮ್ ಲಿವಿಂಗ್ಸ್ಟೋನ್ 6, ಸಂಜು ಸ್ಯಾಮ್ಸನ್ 1, ಗ್ಲೆನ್ ಫಿಲಿಪ್ಸ್ 8, ಅನುಜ್ ರಾವತ್ 0, ಶಿವಂ ದೂಬೆ 18, ಕ್ರಿಸ್ ಮೋರಿಸ್ 0, ರಾಹುಲ್ ತೆವಾಟಿಯಾ 44, ಚೇತನ್ ಸಕಾರಿಯಾ 1, ಜಯದೇವ್ ಉನದ್ಕತ್ 6, ಮುಸ್ತಫಿಜುರ್ ರೆಹಮಾನ್ 0 ರನ್‌ನೊಂದಿಗೆ 16.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 85 ರನ್ ಬಾರಿಸಿ ಶರಣಾಯಿತು.

ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!

ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್ ತಲಾ 1 ವಿಕೆಟ್ ಪಡೆದರೆ, ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌ನ ಶಿವಂ ಮಾವಿ 21 ರನ್‌ಗೆ 4, ಲಾಕಿ ಫಾರ್ಗುಸನ್ 18 ರನ್‌ಗೆ 3, ವರುಣ್ ಚಕ್ರವರ್ತಿ 1 ವಿಕೆಟ್‌ನಿಂದ ಗಮನ ಸೆಳೆದರು. ಶಿವಂ ಮಾವಿ ಪಂದ್ಯಶ್ರೇಷ್ಠರೆನಿಸಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯೋನ್ ಮಾರ್ಗನ್ (ಸಿ), ದಿನೇಶ್ ಕಾರ್ತಿಕ್ (wk), ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ.
ಬೆಂಚ್: ಹರ್ಭಜನ್ ಸಿಂಗ್, ಟಿಮ್ ಸೌಥಿ, ಆಂಡ್ರೆ ರಸೆಲ್, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ, ಟಿಮ್ ಸೀಫರ್ಟ್.

ಪಂದ್ಯ ಸೋತ ನಂತರ RCB coach ಹೇಳಿದ್ದೇನು | Oneindia Kannada

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ಲಿಯಾಮ್ ಲಿವಿಂಗ್ಸ್ಟೋನ್, ಸಂಜು ಸ್ಯಾಮ್ಸನ್ (c & wk), ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಶಿವಂ ದೂಬೆ, ಕ್ರಿಸ್ ಮೋರಿಸ್, ರಾಹುಲ್ ತೆವಾಟಿಯಾ, ಚೇತನ್ ಸಕಾರಿಯಾ, ಜಯದೇವ್ ಉನದ್ಕತ್, ಮುಸ್ತಫಿಜುರ್ ರೆಹಮಾನ್.
ಬೆಂಚ್: ಮನನ್ ವೊಹ್ರಾ, ತಬ್ರೇಜ್ ಶಮ್ಸಿ, ಕೆಸಿ ಕರಿಯಪ್ಪ, ಮಹಿಪಾಲ್ ಲೊಮರ್, ಓಶಾನೆ ಥಾಮಸ್, ರಿಯಾನ್ ಪರಾಗ್, ಮಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಜೆರಾಲ್ಡ್ ಕೋಟ್ಜಿ, ಆಕಾಶ್ ಸಿಂಗ್, ಎವಿನ್ ಲೂಯಿಸ್, ಶ್ರೇಯಸ್ ಗೋಪಾಲ್, ಡೇವಿಡ್ ಮಿಲ್ಲರ್, ಕುಲ್ದಿಪ್ ಯಾದವ್.

Story first published: Friday, October 8, 2021, 9:58 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X