ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡವನ್ನು ಅತಿ ಹೆಚ್ಚು ಕಾಡಿದ 5 ಬೌಲರ್‌ಗಳು ಇವರು!

IPL 2021: List of 5 bowlers who have always harmed RCB batsmen

ಬೆಂಗಳೂರು, ಸೆಪ್ಟೆಂಬರ್ 13: ಐಪಿಎಲ್‌ನಲ್ಲಿ ಬೆಂಗಳೂರು ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿಲ್ಲ. ಹಾಗಿದ್ದರೂ ಆರ್‌ಸಿಬಿ ಯಾವತ್ತಿಗೂ ಅಪಾಯಕಾರಿ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಭಯಾನಕವಾದ ಲೈನ್‌ಅಪ್‌ಅನ್ನು ಹೊಂದಿದೆ. ಒಂದು ಸಂದರ್ಭದಲ್ಲಿ ಆರ್‌ಸಿಬಿ ತಂಡದಲ್ಲಿ ಕ್ರಿಸ್ ಗೇಲ್, ದಿಲ್ಶನ್, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರಂತಾ ದಿಗ್ಗಜ ಆಟಗಾರರು ಸರದಿಯಲ್ಲಿದ್ದರು. ಈ ಎಲ್ಲರೂ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲಂತಾ ಸಮರ್ಥ್ಯ ಹೊಂದಿದ ಆಟಗಾರರು ಎಂಬುದರಲ್ಲಿ ಅನುಮಾನವಿಲ್ಲ.

ಇವರನ್ನು ಹೊರತು ಪಡಿಸಿಯೂ ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್, ಬ್ರೆಂಡನ್ ಮೆಕಲಮ್, ಜಾಕ್ ಕಾಲಿಸ್, ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ, ರಾಸ್ ಟೇಲರ್, ಪಾರ್ಥಿವ್ ಪಟೇಲ್, ಕೆಎಲ್ ರಾಹುಲ್, ಮನೀಶ್ ಪಾಂಡೆ, ಶೇನ್ ವಾಟ್ಸನ್, ಕ್ವಿಂಟನ್ ಡಿ ಕಾಕ್, ದಿನೇಶ್ ಕಾರ್ತಿಕ್ ಮತ್ತು ಇಯೋನ್ ಮೋರ್ಗನ್ ಅವರಂತಾ ಆಟಗಾರರು ಕಳೆದ 13 ವರ್ಷಗಳಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳುಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳು

ಒಂದೆಡೆ ಅದ್ಭುತವಾದ ಬ್ಯಾಟಿಂಗ್ ಪಡೆಯನ್ನು ಇತಿಹಾಸದುದ್ದಕ್ಕೂ ಹೊಂದಿದ್ದ ಆರ್‌ಸಿಬಿಯ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ. ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ ಈ ಕ್ರೀಡಾಂಗಣದಲ್ಲಿ ಬೌಲರ್‌ಗಳು ಆರ್‌ಸಿಬಿ ತಂಡದ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಕಂಗೆಟ್ಟ ಹೆಚ್ಚಿನ ಉದಾಹರಣೆಗಳಿವೆ. ಹಾಗಿದ್ದರೂ ಕೆಲ ಬೌಲರ್‌ಗಳು ಆರ್‌ಸಿಬಿ ವಿರುದ್ಧ ಅದ್ಭುತವಾದ ದಾಖಲೆಯನ್ನು ಹೊಂದಿದ್ದಾರೆ. ಆರ್‌ಸಿಬಿ ತಂಡಕ್ಕೆ ಅತಿ ಹೆಚ್ಚು ಕಾಡಿದ್ದಾರೆ. ಅಂತಾ ಐವರು ಬೌಲರ್‌ಗಳು ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ. ಮುಂದೆ ಓದಿ..

1. ಆಶಿಶ್ ನೆಹ್ರಾ

1. ಆಶಿಶ್ ನೆಹ್ರಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಹೊಂದಿದ ಆಟಗಾರರಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಬೌಲರ್ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ. ಭಾರತ ಕ್ರಿಕೆಟ್ ತಂಡದ ಈ ಮಾಜಿ ವೇಗದ ಬೌಲರ್ ಆರ್‌ಸಿಬಿ ವಿರುದ್ಧ 12.8 ಸ್ಟ್ರೈಕ್ ರೇಟ್‌ನ ದಾಖಲೆಯನ್ನು ಹೊಂದಿದ್ದಾರೆ. ಎಡಗೈ ವೇಗದ ಬೌಲರ್ ಒಟ್ಟು ಐದು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಪುಣೆ ವಾರಿಯರ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪರವಾಗಿ ಕಣಕ್ಕಿಳಿದು ಆರ್‌ಸಿಬಿ ವಿರುದ್ಧ ಈ ಅದ್ಭುತವಾದ ಬೌಲಿಂಗ್ ದಾಖಲೆಯನ್ನು ಹೊಂದಿದ್ದಾರೆ.

ಒಟ್ಟಾರೆಯಾಗಿ ಆಶಿಶ್ ನೆಹ್ರಾ ಬೆಂಗಳೂರು ಮೂಲದ ಫ್ರಾಂಚೈಸಿ ವಿರುದ್ಧ 13 ಪಂದ್ಯಗಳನ್ನು ಆಡಿದ್ದು 23 ವಿಕೆಟ್ ಪಡೆದಿದ್ದಾರೆ. ಆರ್‌ಸಿಬಿ ವಿರುದ್ಧ ಪ್ರತಿ ಓವರ್‌ಗೆ ಎಂಟು ರನ್‌ಗಿಂತ ಕಡಿಮೆ ಎಕಾನಮಿ ರೇಟ್ ಹೊಂದಿದ್ದಾರೆ ನೆಹ್ರಾ. 2015 ರಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ 10 ರನ್‌ಗಳಿಗೆ 4 ವಿಕೆಟ್ ಪಡೆಯುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದ್ದರು.

2. ಸಂದೀಪ್ ಶರ್ಮಾ

2. ಸಂದೀಪ್ ಶರ್ಮಾ

ಆರ್‌ಸಿಬಿ ವಿರುದ್ಧ ಹೆಚ್ಚಿನ ಯಶಸ್ಸು ಸಾಧಿಸಿದ ಪಟ್ಟಿಯಲ್ಲಿರುವ ಇನ್ನೊಬ್ಬ ಭಾರತೀಯ ವೇಗದ ಬೌಲರ್ ಸಂದೀಪ್ ಶರ್ಮಾ. ಈ ಬಲಗೈ ಪ್ರತಿಭಾನ್ವಿತ ವೇಗಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆ ಹೊಂದಿದ್ದಾರೆ. ಕೊಹ್ಲಿ ಸಂದೀಪ್ ಶರ್ಮಾ ಬಲೆಗೆ ಐಪಿಎಲ್‌ನಲ್ಲಿ ಒಟ್ಟು 7 ಬಾರಿ ಬಿದ್ದಿದ್ದಾರೆ.

2013ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾಗುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸಂದೀಪ್ ಶರ್ಮಾ ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ. ಆರ್‌ಸಿಬಿ ತಂಡದ ವಿರುದ್ಧ ಸಂದೀಪ್ ಶರ್ಮಾ ಒಟ್ಟು 15 ಪಂದ್ಯಗಳನ್ನು ಆಡಿದ್ದು ಇದರಲ್ಲಿ 14.5 ಸ್ಟ್ರೈಕ್ ರೇಟ್‌ನಲ್ಲಿ 23 ವಿಕೆಟ್ ಸಂಪಾದಿಸಿದ್ದಾರೆ. 15 ರನ್‌ಗಳಿಗೆ 3 ವಿಕೆಟ್ ಕಬಳಿಸಿರುವುದು ಆರ್‌ಸಿಬಿ ವಿರುದ್ಧ ಸಂದೀಪ್ ಶರ್ಮಾ ಅವರ ಅತ್ಯುತ್ತಮ ಸಾಧನೆಯಾಗಿದೆ. ಬೆಂಗಳೂರು ಮೂಲದ ಫ್ರಾಂಚೈಸಿ ವಿರುದ್ಧ ಸಂದೀಪ್ ಶರ್ಮಾ 7.5ರಷ್ಟು ಎಕಾನಮಿ ಹೊಂದಿದ್ದಾರೆ

3. ಜಸ್ಪ್ರೀತ್ ಬೂಮ್ರಾ

3. ಜಸ್ಪ್ರೀತ್ ಬೂಮ್ರಾ

ಮುಂಬೈ ಇಂಡಿಯನ್ಸ್‌ನ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಪದಾರ್ಪಣಾ ಪಂದ್ಯದಲ್ಲಿಯೇ ಈ ಯುವ ವೇಗಿ 32 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚು ಹರಿಸಿದ್ದರು. ವಿಭಿನ್ನ ಬೌಲಿಂಗ್ ಶೈಲಿಯ ಈ ಬಲಗೈ ವೇಗಿ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಅವರನ್ನು ಔಟ್ ಮಾಡಿ ಆರ್‌ಸಿಬಿ ತಂಡಕ್ಕೆ ಆಘಾತ ನೀಡಿದ್ದರು.

ಅಂದಿನಿಂದ ಬೂಮ್ರಾ 16 ಪಂದ್ಯಗಳಲ್ಲಿ ಆರ್‌ಸಿಬಿ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದು 21 ವಿಕೆಟ್ ಪಡೆದರು. ಆರ್‌ಸಿಬಿ ತಂಡದ ವಿರುದ್ಧ 14 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ಸೆಪ್ಟೆಂಬರ್ 26 ರಂದು ರಾಯಲ್ ಚಾಲೆಂಜರ್ಸ್ ವಿರುದ್ಧ ಮತ್ತೊಂದು ಅದ್ಭುತ ಪ್ರದರ್ಶನ ನೀಡಲು ಬೂಮ್ರಾ ಎದುರು ನೋಡುತ್ತಿದ್ದಾರೆ.

4. ಸುನಿಲ್ ನರೈನ್

4. ಸುನಿಲ್ ನರೈನ್

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಿಸ್ಟರಿ ಸ್ಪಿನ್ನರ್ ಖ್ಯಾತಿಯ ಸುನೀಲ್ ನರೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯುತ್ತಮ ಎಕಾನಮಿ ದರ ಹೊಂದಿದ ಬೌಲರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಆರ್‌ಸಿಬಿ ವಿರುದ್ಧ ನರೈನ್ 6.75 ಎಕಾನಮಿ ರೇಟ್‌ನೊಂದಿಗೆ ಬೌಲಿಂಗ್ ದಾಳಿ ನಡೆಸಿದ್ದಾರೆ. ಆರ್‌ಸಿಬಿ ವಿರುದ್ಧ ಸುನಿಲ್ ನರೈನ್ ವಿರುದ್ಧ 14 ಪಂದ್ಯಗಳನ್ನು ಆಡಿದ್ದು 16 ವಿಕೆಟ್ ಪಡೆದಿದ್ದಾರೆ.

ಸುನಿಲ್ ನರೈನ್ ಅವರು ವಿರಾಟ್ ಕೊಹ್ಲಿ ನೇತೃತ್ವದ ತಂಡದ ವಿರುದ್ಧ ಎರಡು ಬಾರಿ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಐಪಿಎಲ್ ಎರಡನೇ ಚರಣದ ಟೂರ್ನಿಯಲ್ಲಿ ಕೆಕೆಆರ್ ಸೆಪ್ಟೆಂಬರ್ 20 ಆರ್‌ಸಿಬಿಗೆ ಮುಖಾಮುಖಿಯಾಗಲಿದ್ದು ಈ ಸಂದರ್ಭದಲ್ಲಿ ಮತ್ತೊಮ್ಮೆ ಈ ಅತ್ಯುತ್ತಮ ಪ್ರದರ್ಶನ ನೀಡಲು ಈ ಅನುಭವಿ ಆಲ್‌ರೌಂಡರ್ ಸಜ್ಜಾಗಿದ್ದಾರೆ.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada
5. ಅಕ್ಷರ್ ಪಟೇಲ್

5. ಅಕ್ಷರ್ ಪಟೇಲ್

ಆಲ್ ರೌಂಡರ್ ಅಕ್ಷರ್ ಪಟೇಲ್ ಐಪಿಎಲ್ ನಲ್ಲಿ ಆರ್‌ಸಿಬಿ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಅಕ್ಷರ್ ಪಟೇಲ್ ಈವರೆಗೆ ಐಪಿಎಲ್‌ನಲ್ಲಿ ಒಟ್ಟು ಐದು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅದರಲ್ಲಿ ಮೂರು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೇ ಬಂದಿರುವುದು ಗಮನಾರ್ಹ ಸಂಗತಿ. ಟೀಮ್ ಇಂಡಿಯಾದ ಈ ಎಡಗೈ ಸ್ಪಿನ್ನರ್ ಆರ್‌ಸಿಬಿ ವಿರುದ್ಧ 15 ಪಂದ್ಯಗಳಲ್ಲಿ ಆಡಿದ್ದು 16 ವಿಕೆಟ್ ಸಂಪಾದಿಸಿದ್ದಾರೆ.

ಆಡಿದ 15 ಪಂದ್ಯಗಳಲ್ಲಿ ಅಕ್ಷರ್ ಪಟೇಲ್ 6.88 ಎಕಾನಮಿ ದರದಂತೆ ಬೌಲಿಂಗ್ ಮಾಡಿದ್ದು ಬೌಲಿಂಗ್ ಸ್ಟ್ರೈಕ್ ರೇಟ್ 18.7 ಆಗಿದೆ. ಯುಎಇಯಲ್ಲಿ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಅಕ್ಷರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್‌ಸಿಬಿ ವಿರುದ್ಧ ಅಕ್ಟೋಬರ್ 8 ರಂದು ಮುಖಾಮುಖಿಯಾಗಲಿದ್ದು ಈ ಸಂದರ್ಭದಲ್ಲಿ ಮತ್ತೊಂದು ಅಮೋಘ ಪ್ರದರ್ಶನವನ್ನು ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆರ್‌ಸಿಬಿ ದಾಂಡಿಗರು ಈ ದಾಳಿಯನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲದ ಅಂಶವಾಗಿದೆ.

Story first published: Monday, September 13, 2021, 21:00 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X