ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಅತಿ ಚಿಕ್ಕ ವಯಸ್ಸಿನಲ್ಲೇ ನಾಯಕರಾದವರ ಪಟ್ಟಿ

IPL 2021: List of 5 youngest captains in IPL history

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ಟೂರ್ನಿಯಲ್ಲಿ ಮುನ್ನಡೆಸಲು ರಿಷಭ್ ಪಂತ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಲಾಗಿದೆ. 23 ವರ್ಷ ವಯಸ್ಸಿನ ರಿಷಭ್ ಪಂತ್ ಅವರಿಗೆ ಈ ವಯಸ್ಸಿನಲ್ಲಿಯೇ ಐಪಿಎಲ್ ತಂಡವೊಂದರ ನಾಯಕತ್ವವನ್ನು ಹೊರುವ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ರಿಷಭ್ ಪಂತ್ ನಾಯಕನಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ನಾಯಕರಾಗಿದ್ದವರ ಬಗ್ಗೆ ಚರ್ಚೆಗಳು ಶುರುವಾಗಿವೆ.

ರಿಷಭ್ ಪಂತ್ ಗಿಂತಲೂ ಚಿಕ್ಕ ವಯಸ್ಸಿನಲ್ಲಿಯೇ ಐಪಿಎಲ್ ಟೂರ್ನಿಯ ತಂಡವೊಂದರ ನಾಯಕತ್ವವನ್ನು ವಹಿಸಿಕೊಂಡ ಆಟಗಾರರಿದ್ದಾರೆ. ರಿಷಭ್ ಪಂತ್‌ಗೂ ಮುನ್ನ ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್, ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಹೊತ್ತಿದ್ದರು.

ಅತಿ ಚಿಕ್ಕ ವಯಸ್ಸಿನಲ್ಲಿ ಐಪಿಎಲ್ ತಂಡವೊಂದರ ನಾಯಕತ್ವವನ್ನು ವಹಿಸಿಕೊಂಡ ಆಟಗಾರರ ಪಟ್ಟಿ ಮುಂದೆ ಇದೆ ನೋಡಿ.

5. ರಿಷಭ್ ಪಂತ್

5. ರಿಷಭ್ ಪಂತ್

23 ವರ್ಷ 6 ತಿಂಗಳ ವಯಸ್ಸಿನ ರಿಷಭ್ ಪಂತ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

4. ಶ್ರೇಯಸ್ ಅಯ್ಯರ್

4. ಶ್ರೇಯಸ್ ಅಯ್ಯರ್

2018ರಲ್ಲಿ ಗೌತಮ್ ಗಂಭೀರ್ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಾಗ ಶ್ರೇಯಸ್ ಅಯ್ಯರ್ ಅವರ ವಯಸ್ಸು 23 ವರ್ಷ 4 ತಿಂಗಳು.

3. ಸುರೇಶ್ ರೈನಾ

3. ಸುರೇಶ್ ರೈನಾ

2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಗಾಯಕ್ಕೊಳಗಾದ ಸುರೇಶ್ ರೈನಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಆ ಸಮಯದಲ್ಲಿ ರೈನಾ ಅವರ ವಯಸ್ಸು 23 ವರ್ಷ 3 ತಿಂಗಳು.

2. ಸ್ಟೀವ್ ಸ್ಮಿತ್

2. ಸ್ಟೀವ್ ಸ್ಮಿತ್

ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್ ಪುಣೆ ವಾರಿಯರ್ಸ್ ತಂಡದ ನಾಯಕನಾಗಿ 2012ರಲ್ಲಿ ಆಯ್ಕೆಯಾಗಿದ್ದರು. ಸತತ 6 ಸೋಲುಗಳನ್ನು ತಂಡ ಕಂಡ ನಂತರ ಸೌರವ್ ಗಂಗೂಲಿ ಅವರನ್ನು ಸ್ಮಿತ್ ಬದಲು ನಾಯಕರನ್ನಾಗಿ ನೇಮಿಸಲಾಯಿತು. ಸ್ಮಿತ್ ನಾಯಕತ್ವವನ್ನು ವಹಿಸಿಕೊಂಡಾಗ ಅವರ ವಯಸ್ಸು 22 ವರ್ಷ 11 ತಿಂಗಳಾಗಿತ್ತು.

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

ಐಪಿಎಲ್ ದಾಖಲೆ ಕುರಿತು ಮಾತನಾಡುವಾಗ ಬಹುತೇಕ ವಿಷಯಗಳಲ್ಲಿ ವಿರಾಟ್ ಕೊಹ್ಲಿ ಅವರ ಹೆಸರು ಕೇಳಿ ಬಂದೇ ಬರುತ್ತದೆ. ಹಾಗೆ ಅತಿ ಕಿರಿಯ ವಯಸ್ಸಿನಲ್ಲಿಯೇ ಐಪಿಎಲ್ ತಂಡವೊಂದರ ನಾಯಕತ್ವ ವಹಿಸಿಕೊಂಡವರ ದಾಖಲೆಯಲ್ಲೂ ಸಹ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. 2011ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೇನಿಯಲ್ ವೆಟ್ಟೋರಿ ಮುನ್ನಡೆಸುತ್ತಿದ್ದರು. ವೆಟ್ಟೋರಿ ಗಾಯಕ್ಕೊಳಗಾದ ತಂಡದ ಉಪನಾಯಕನಾಗಿದ್ದ ಕೊಹ್ಲಿ ಅವರಿಗೆ ನಾಯಕತ್ವವನ್ನು ವಹಿಸಲಾಯಿತು. ಆ ಸಮಯದಲ್ಲಿ ವಿರಾಟ್ ಅವರ ವಯಸ್ಸು 22 ವರ್ಷ 6 ತಿಂಗಳು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿಗೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದರು.

Story first published: Wednesday, March 31, 2021, 17:22 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X