ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಧೋನಿಯ ಈ ದಾಖಲೆ ಮುರಿಯುವುದು ಸುಲಭದ ಮಾತಲ್ಲ!

IPL 2021 : List of captains who have most IPL wins
ನೆಟ್ ಅಭ್ಯಾಸದ ವೇಳೆ ರೊಚ್ಚಿಗೆದ್ದ ಕೂಲ್ ಕ್ಯಾಪ್ಟನ್ ಧೋನಿ | Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಇದೇ ತಿಂಗಳ 9ರಿಂದ ಆರಂಭವಾಗುತ್ತಿತ್ತು ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗಲಿವೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಈ ಬಾರಿ ಹೇಗಾದರೂ ಮಾಡಿ ಮೇಲೆತ್ತಬೇಕೆಂಬ ಪಣತೊಟ್ಟಿರುವ ಎಂಎಸ್ ಧೋನಿ ಸತತವಾಗಿ ನೆಟ್ ಪ್ರಾಕ್ಟಿಸ್‌ನಲ್ಲಿ ಬೆವರು ಹರಿಸಿದ್ದಾರೆ.

ಕ್ಯಾಪ್ಟನ್ ಕೂಲ್ ಎಂದೇ ಹೆಸರು ಮಾಡಿರುವ ಎಂ ಎಸ್ ಧೋನಿ ಅವರ ನಾಯಕತ್ವದ ಬಗ್ಗೆ ಎರಡು ಮಾತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸ ಕಂಡ ಅತ್ಯದ್ಭುತ ಮತ್ತು ಅತ್ಯುತ್ತಮ ನಾಯಕ ಯಾರು ಎಂದು ಕೇಳಿದರೆ ಎಲ್ಲರ ಬಾಯಲ್ಲಿ ಬರುವುದು ಎಂಎಸ್ ಧೋನಿ ಎಂಬ ಉತ್ತರ. ಐಪಿಎಲ್ ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ ಸಹ ಚೆನ್ನೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಧೋನಿ ಅವರ ವಿರುದ್ಧ ಕಳೆದ ಆವೃತ್ತಿಯ ವೇಳೆ ಸಾಕಷ್ಟು ಟೀಕೆಗಳು ಕೇಳಿಬಂದವು.

ಕೇವಲ ಒಂದು ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಎಂಎಸ್ ಧೋನಿ ಅವರ ನಾಯಕತ್ವದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಎದುರಾದವು. ಆದರೆ ಧೋನಿ ಅವರು ಐಪಿಎಲ್ ಇತಿಹಾಸದಲ್ಲಿ ಸ್ಥಾಪಿಸಿರುವ ದಾಖಲೆಗಳನ್ನು ಟೀಕಾಕಾರರು ಮರೆತಿರಬಹುದು. ಧೋನಿ ನಿರ್ಮಿಸಿರುವ ಈ ಒಂದು ರೆಕಾರ್ಡ್ ಮುರಿಯುವುದು ಸುಲಭದ ಮಾತಲ್ಲ. ಇದುವರೆಗೂ ನಡೆದಿರುವ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಗೆಲುವು ಸಾಧಿಸಿರುವ ನಾಯಕ ಎಂಬ ಹೆಗ್ಗಳಿಕೆಯನ್ನು ಧೋನಿ ಹೊಂದಿದ್ದಾರೆ. ಧೋನಿ ನಾಯಕತ್ವದಲ್ಲಿ 110 ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿದ್ದಾರೆ , ಇದು ಐಪಿಎಲ್ ಇತಿಹಾಸದಲ್ಲಿಯೇ ನಾಯಕನೊಬ್ಬ ಗೆಲ್ಲಿಸಿರುವ ಅತಿ ಹೆಚ್ಚು ಪಂದ್ಯ. ಇಷ್ಟು ಪಂದ್ಯಗಳನ್ನು ಗೆಲ್ಲಿಸುವ ಸಾಹಸವನ್ನು ಇದುವರೆಗೂ ಬೇರೆ ಯಾವ ನಾಯಕನೂ ಮಾಡಿಲ್ಲ , ಈ ದಾಖಲೆಯನ್ನು ಮುರಿಯುವುದಿರಲಿ ಇದರ ಹತ್ತಿರಕ್ಕೂ ಸಹ ಯಾರೂ ಬಂದಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಾಯಕನಾಗಿ ಇದುವರೆಗೂ 188 ಪಂದ್ಯಗಳನ್ನು ಆಡಿದ್ದಾರೆ , ಇದರಲ್ಲಿ 110 ಪಂದ್ಯಗಳಲ್ಲಿ ಧೋನಿ ತಂಡ ಜಯಗಳಿಸಿದ್ದು 77 ಪಂದ್ಯಗಳಲ್ಲಿ ಸೋಲುಂಡಿದೆ ಮತ್ತು ಫಲಿತಾಂಶ ದೊರಕದ ಪಂದ್ಯದ ಸಂಖ್ಯೆ 1. ಐಪಿಎಲ್ ತಂಡವೊಂದರ ನಾಯಕನಾಗಿ ಧೋನಿ ಮಾಡಿರುವ ಈ ಸಾಧನೆಯನ್ನು ಬೇರೆ ಯಾವ ನಾಯಕರೂ ಸಹ ಮಾಡಲಾಗಿಲ್ಲ. ಹೀಗಾಗಿ ಎಂಎಸ್ ಧೋನಿ ಐಪಿಎಲ್ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

1. ಎಂಎಸ್ ಧೋನಿ

1. ಎಂಎಸ್ ಧೋನಿ

ಎಂ ಎಸ್ ಧೋನಿ ನಾಯಕನಾಗಿ 188 ಪಂದ್ಯಗಳನ್ನಾಡಿದ್ದು ಇದರಲ್ಲಿ 110 ಜಯ & 77 ಸೋಲುಗಳಿವೆ. ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ.

 2. ಗೌತಮ್ ಗಂಭೀರ್

2. ಗೌತಮ್ ಗಂಭೀರ್

ಧೋನಿ ಬಿಟ್ಟರೆ ಗೌತಮ್ ಗಂಭೀರ್ ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದಿದ್ದಾರೆ. 129 ಪಂದ್ಯಗಳನ್ನು ನಾಯಕನಾಗಿ ಆಡಿರುವ ಗಂಭೀರ್ 71 ಪಂದ್ಯಗಳಲ್ಲಿ ಗೆದ್ದು 57 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ ಮತ್ತು ಒಂದು ಪಂದ್ಯ ಡ್ರಾ ಆಗಿದೆ.

3. ರೋಹಿತ್ ಶರ್ಮಾ

3. ರೋಹಿತ್ ಶರ್ಮಾ

5 ಐಪಿಎಲ್ ಟ್ರೋಫಿಗಳನ್ನು ಹೊಂದಿರುವ ಏಕೈಕ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ರೋಹಿತ್ ಶರ್ಮಾ 116 ಪಂದ್ಯಗಳನ್ನು ನಾಯಕನಾಗಿ ಆಡಿದ್ದಾರೆ. ಇದರಲ್ಲಿ 68 ಪಂದ್ಯಗಳಲ್ಲಿ ಜಯಿಸಿ , 44 ಪಂದ್ಯಗಳಲ್ಲಿ ಸೋಲನ್ನುಂಡಿದ್ದಾರೆ ಮತ್ತು 4 ಪಂದ್ಯಗಳು ಡ್ರಾ ಆಗಿವೆ.

4. ವಿರಾಟ್ ಕೊಹ್ಲಿ

4. ವಿರಾಟ್ ಕೊಹ್ಲಿ

ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯ ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇದುವರೆಗೂ 125 ಐಪಿಎಲ್ ಪಂದ್ಯಗಳನ್ನಾಡಿರುವ ಕೊಹ್ಲಿ 55 ಪಂದ್ಯಗಳಲ್ಲಿ ಜಯಗಳಿಸಿ, 63 ಪಂದ್ಯಗಳಲ್ಲಿ ಸೋಲನ್ನುಂಡಿದ್ದಾರೆ ಹಾಗೂ 3 ಪಂದ್ಯಗಳು ಡ್ರಾ ಆಗಿದ್ದು 4 ಪಂದ್ಯಗಳಲ್ಲಿ ಫಲಿತಾಂಶ ಸಿಕ್ಕಿಲ್ಲ.

Story first published: Tuesday, April 6, 2021, 14:21 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X