ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯ ಗೆದ್ದಿರುವ ತಂಡಗಳ ಪಟ್ಟಿ

IPL 2021: List Of Highest winning % against an opponent in IPL

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 44ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 6 ವಿಕೆಟ್‌ ಜಯ ಗಳಿಸಿದೆ. ಇದರೊಂದಿಗೆ ಹೈದರಾಬಾದ್ ಎದುರು ಹೆಚ್ಚು ಶೇಕಡಾ ಗೆಲುವಿನ ಶೇಕಡಾವಾರು ಪಟ್ಟಿಯಲ್ಲಿ ಸಿಎಸ್‌ಕೆ ದಾಖಲೆ ಬರೆದಿದೆ. ಗುರುವಾರದ ಪಂದ್ಯದಲ್ಲಿ ಸಿಎಸ್‌ಕೆ ಈ ವಿಶೇಷ ದಾಖಲೆ ನಿರ್ಮಿಸಿದೆ.

ಆರ್‌ಸಿಬಿ ಗೆಲ್ಲುತ್ತಿರುವುದರ ಹಿಂದಿನ ಗುಟ್ಟು ಬಿಚ್ಚಿಟ್ಟ ನಾಯಕ ವಿರಾಟ್ ಕೊಹ್ಲಿಆರ್‌ಸಿಬಿ ಗೆಲ್ಲುತ್ತಿರುವುದರ ಹಿಂದಿನ ಗುಟ್ಟು ಬಿಚ್ಚಿಟ್ಟ ನಾಯಕ ವಿರಾಟ್ ಕೊಹ್ಲಿ

ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್‌ 30) ಐಪಿಎಲ್ 44ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ ಸುಲಭ ಗೆಲುವು ದಾಖಲಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆದುಕೊಂಡಿದೆ. ಅಲ್ಲದೆ ಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಸಿಎಸ್‌ಕೆ ದ್ವಿತೀಯ ಸ್ಥಾನಕ್ಕೇರಿದೆ.

ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಎಸ್‌ಆರ್‌ಎಚ್, ಜೇಸನ್ ರಾಯ್ 2, ವೃದ್ಧಿಮಾನ್ ಸಹಾ 44, ಕೇನ್ ವಿಲಿಯಮ್ಸನ್ 11, ಪ್ರಿಯಂ ಗರ್ಗ್ 7, ಅಭಿಷೇಕ್ ಶರ್ಮಾ 18, ಅಬ್ದುಲ್ ಸಮದ್ 18, ಜೇಸನ್ ಹೋಲ್ಡರ್ 5, ರಶೀದ್ ಖಾನ್ 17, ಭುವನೇಶ್ವರ್ ಕುಮಾರ್ 2 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 134 ರನ್ ಗಳಿಸಿತ್ತು.

ಐಪಿಎಲ್ 2021: ಪ್ಲೇಆಫ್‌ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ ಆಕಾಶ್ ಚೋಪ್ರಐಪಿಎಲ್ 2021: ಪ್ಲೇಆಫ್‌ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ ಆಕಾಶ್ ಚೋಪ್ರ

ಗುರಿ ಬೆನ್ನಟ್ಟಿದ ಚೆನ್ನೈ, ರುತುರಾಜ್ ಗಾಯಕವಾಡ್ 45, ಫಾಫ್ ಡು ಪ್ಲೆಸಿಸ್ 41, ಮೊಯೀನ್ ಅಲಿ 17, ಅಂಬಾಟಿ ರಾಯುಡು 17, ಸುರೇಶ್ ರೈನಾ 2, ಎಂಎಸ್ ಧೋನಿ 14 ರನ್ನೊಂದಿಗೆ 19.4 ಓವರ್‌ಗೆ 4 ವಿಕೆಟ್ ಕಳೆದು 139 ರನ್ ಗಳಿಸಿ ಗೆಲುವನ್ನಾಚರಿಸಿತು.

ಒಂದು ಐಪಿಎಲ್ ತಂಡದೆದುರು ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಶೇಕಡಾವಾರು ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದೆ. ಎಂಐ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 75.86 ಶೇ. ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ. ಹೈದರಾಬಾದ್ ವಿರುದ್ಧ 75.00 ಶೇ. ಪಂದ್ಯಗಳನ್ನು ಗೆದ್ದಿರುವ ಸಿಎಸ್‌ಕೆ ದ್ವಿತೀಯ ಸ್ಥಾನದಲ್ಲಿದೆ.

ಕೊಹ್ಲಿ ನಾಯಕತ್ವದ ವಿರುದ್ಧ ಅಶ್ವಿನ್ ಬಿಸಿಸಿಐಗೆ ದೂರು ನೀಡಿದ್ದು ನಿಜಾನಾ?; ಕೊನೆಗೂ ಮೌನ ಮುರಿದ ಅಶ್ವಿನ್ಕೊಹ್ಲಿ ನಾಯಕತ್ವದ ವಿರುದ್ಧ ಅಶ್ವಿನ್ ಬಿಸಿಸಿಐಗೆ ದೂರು ನೀಡಿದ್ದು ನಿಜಾನಾ?; ಕೊನೆಗೂ ಮೌನ ಮುರಿದ ಅಶ್ವಿನ್

Dhoni ಅವರ ಈ ಒಂದು ಹೊಡೆತಕ್ಕೆ ಅಭಿಮಾನಿಗಳು ಫುಲ್ ಖುಷ್ | Oneindia Kannada

ಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಗೆಲುವಿನ ಶೇ. ಹೊಂದಿರುವ ತಂಡಗಳ ಪಟ್ಟಿ (10ಕ್ಕೂ ಹೆಚ್ಚು ಪಂದ್ಯಗಳು)
* ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 75.86 ಶೇಕಡಾ
* ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, 75.00 ಶೇಕಡಾ
* ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, 67.86 ಶೇಕಡಾ
* ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 66.67 ಶೇಕಡಾ
* ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್, 66.67 ಶೇಕಡಾ

Story first published: Friday, October 1, 2021, 10:47 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X