ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರ ಪಟ್ಟಿ

IPL 2021: List of Players to Win atleast 1 Man Of the Match Award in most IPL Seasons

ಬೆಂಗಳೂರು: ಏಪ್ರಿಲ್ 9 ರಿಂದ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೀಸನ್ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ದಾಖಲೆಯ 6ನೇ ಟ್ರೋಫಿ ಗೆಲ್ಲುವ ತವಕವಾದರೆ ಉಳಿದ ತಂಡಗಳಿಗೂ ಚಾಂಪಿಯನ್ಸ್ ಆಗಿ ಮಿನುಗುವ ಆಸೆ. ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಎಲ್ಲಾ ಎಂಟು ಫ್ರಾಂಚೈಸಿಗಳು ಸಿದ್ಧತೆ ನಡೆಸಿವೆ. ಏಪ್ರಿಲ್ 9 ರಿಂದ ಶುರುವಾಗುವ ಐಪಿಎಲ್ ಮೇ 30ಕ್ಕೆ ಕೊನೆಗೊಳ್ಳಲಿದೆ.

2021ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಿರ್ಮಿಸಲಿರುವ ದಾಖಲೆಗಳ ಸಂಪೂರ್ಣ ಪಟ್ಟಿ2021ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಿರ್ಮಿಸಲಿರುವ ದಾಖಲೆಗಳ ಸಂಪೂರ್ಣ ಪಟ್ಟಿ

ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. 14ನೇ ಆವೃತ್ತಿಯ ಐಪಿಎಲ್‌ನತ್ತ ಹೋಗುವ ಮುನ್ನ ಹಿಂದಿನ ಐಪಿಎಲ್‌ ಸೀಸನ್‌ಗಳಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ (ಮ್ಯಾನ್ ಆಫ್‌ ದ ಮ್ಯಾಚ್) ಪ್ರಶಸ್ತಿ ಗೆದ್ದವರ ನೋಡಿಕೊಂಡು ಬರೋಣ ಬನ್ನಿ.

ರೋಹಿತ್-ಧೋನಿ ಅಗ್ರಸ್ಥಾನಿ

ರೋಹಿತ್-ಧೋನಿ ಅಗ್ರಸ್ಥಾನಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂಎಸ್ ಧೋನಿ ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಸಾಲಿನಲ್ಲಿದ್ದಾರೆ. ರೋಹಿತ್ ಮತ್ತು ಧೋನಿ ಇಬ್ಬರೂ ತಲಾ 11 ಪಂದ್ಯಶ್ರೇಷ್ಠ ಪ್ರಶಸ್ತಿ ದಾಖಲೆಗಳನ್ನು ಹೊಂದಿದ್ದಾರೆ. 3ನೇ ಮತ್ತು 4ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್‌ನ ಬೆಂಗಳೂರಿನ ಎಬಿ ಡಿ ವಿಲಿಯರ್ಸ್ (10 ಬಾರಿ) ಮತ್ತು ಚೆನ್ನೈ ತಂಡದ ಸುರೇಶ್ ರೈನಾ (10 ಬಾರಿ) ಇದ್ದಾರೆ.

9 ಪ್ರಶಸ್ತಿ ಗೆದ್ದವರಲ್ಲಿ 3 ಜನ

9 ಪ್ರಶಸ್ತಿ ಗೆದ್ದವರಲ್ಲಿ 3 ಜನ

ಐಪಿಎಲ್‌ನಲ್ಲಿ 9 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರ ಸಾಲಿನಲ್ಲಿ ಒಟ್ಟು 3 ಜನ ಇದ್ದಾರೆ. ಸನ್ ರೈಸರ್ಸ್ ಹೈದರಾಬಾದ್‌ನ ನಾಯಕ ಡೇವಿಡ್ ವಾರ್ನರ್, ಪಂಜಾಬ್ ಕಿಂಗ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಇದ್ದಾರೆ.

ಪಟ್ಟಿಯಲ್ಲಿ ಪೊಲಾರ್ಡ್, ಯೂಸುಫ್

ಪಟ್ಟಿಯಲ್ಲಿ ಪೊಲಾರ್ಡ್, ಯೂಸುಫ್

ಅತ್ಯಧಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರ ಸಾಲಿನಲ್ಲಿ ಮುಂಬೈ ಇಂಡಿಯನ್ಸ್‌ನ ಕೀರನ್ ಪೊಲಾರ್ಡ್, ಸನ್ ರೈಸರ್ಸ್ ಹೈದರಾಬಾದ್‌ನ ಯೂಸುಫ್ ಪಠಾಣ್, ಡೆಲ್ಲಿ ಕ್ಯಾಪಿಟಲ್ಸ್‌ನ ಮಾಜಿ ನಾಯಕ ಗೌತಮ್ ಗಂಭೀರ್, ಚೆನ್ನೈ ಸೂಪರ್ ಕಿಂಗ್ಸ್‌ನ ಅಂಬಾಟಿ ರಾಯುಡು ಇದ್ದಾರೆ. ಈ ನಾಲ್ವರೂ ಐಪಿಎಲ್‌ನಲ್ಲಿ ತಲಾ 8 ಸಾರಿ ಪಂದ್ಯಶ್ರೇಷ್ಠರೆನಿಸಿದ್ದಾರೆ.

ಸೆಹ್ವಾಗ್, ಮಿಶ್ರಾ ಹೆಸರು

ಸೆಹ್ವಾಗ್, ಮಿಶ್ರಾ ಹೆಸರು

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಿಂಚಿದ್ದ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಐಪಿಎಲ್‌ನಲ್ಲಿ 7 ಸಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ಭಾರತದ ಮಾಜಿ ಬೌಲರ್ ಅಮಿತ್ ಮಿಶ್ರಾ ಕೂಡ 7 ಸಾರಿ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ.

Story first published: Wednesday, April 7, 2021, 17:28 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X