ಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳು

ಐಪಿಎಲ್‌ನ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ. ಮೊದಲಾರ್ಧದ ಐಪಿಎಲ್‌ನ ಬಳಿಕ ಕೊರೊನಾವೈರಸ್‌ ಕಾರಣದಿಂದಾಗಿ ಮುಂದೂಡಲ್ಪಟ್ಟ ಟೂರ್ನಿ ಈಗ ಯುಎಇಗೆ ಸ್ಥಳಾಂತರವಾಗಿದ್ದು ಪುನಾರಂಭಕ್ಕೆ ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಅಂತಿಮ ಹಂತದಲ್ಲಿ ಮೊಟಕುಗೊಂಡ ನಂತರ ಇದೀಗ ಕ್ರಿಕೆಟ್ ಪ್ರೇನಿಗಳ ಚಿತ್ತ ಚುಟುಕು ಕ್ರಿಕೆಟ್ ಸಮರದತ್ತ ನೆಟ್ಟಿದೆ. ಅರಬರ ನಾಡಿನಲ್ಲಿ ವರ್ಣರಂಜಿತ ಟೂರ್ನಿಗೆ ಸಿದ್ಧತೆಗಳು ನಡೆದಿದೆ.

ಐಪಿಎಲ್ ಟೂರ್ನಿಯ ಕಳೆದ 13 ಆವೃತ್ತಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಅದ್ಭುತ ಮನರಂಜನೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯ ರೋಮಾಂಚನಕಾರಿ ಅನುಭವ ಈ ಬಾರಿಯೂ ಅಭಿಮಾನಿಗಳಿಗೆ ಖಂಡಿತಾ ದೊರೆಯುವುದರಲ್ಲಿ ಅನುಮಾನವೇ ಇಲ್ಲ. ಮೊದಲಾರ್ಧದ ಪಂದ್ಯಗಳಲ್ಲಿ ಸಾಕಷ್ಟು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಅನುಭವಿಸಿದ ಕ್ರಿಕೆಟ್ ಅಭಿಮಾನಿಗಳು ಈಗ ಇನ್ನುಳಿದ ಪಂದ್ಯಗಳು ಹಾಗೂ ಫ್ಲೇಆಫ್ ಮತ್ತು ಫೈನಲ್‌ನ ಪಂದ್ಯಗಳ ಕ್ಷಣಗಳನ್ನು ಅನುಭವಿಸಲು ಎದುರಿ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ದಾಖಲೆಗಳು ಕೂಡ ಸೃಷ್ಟಿಯಾಗುವ ಸಾಧ್ಯತೆಯಿದೆ. ಆಟಗಾರರು ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗದಂತೆ ಪ್ರದರ್ಶನ ನೀಡಲು ಸಿಉದ್ಧತೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್ ಇತಿಹಾಸದಲ್ಲಿ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದ ಬಿರುಗಾಳಿಯಂತಾ ಇನ್ನಿಂಗ್ಸ್‌ಗಳ ವರದಿಯನ್ನು ನೋಡೋಣ

18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್!18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್!

ಐಪಿಎಲ್ ಇತಿಹಾಸದಲ್ಲಿ ಅನೇಕ ಶತಕಗಳು ದಾಖಲಾಗಿದೆ. ಅತ್ಯಂತ ವೇಗವಾಗಿ ಶತಕವನ್ನು ಗಳಿಸಿದ ಅಗ್ರ ಐದು ಆಟಗಾರರು ಹಾಗೂ ಎದುರಿಸಿದ ಎಸೆತಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ಓದಿ..

1. ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್- 30 ಎಸೆತ

1. ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್- 30 ಎಸೆತ

ಟಿ20 ಕ್ರಿಕೆಟ್‌ನ ಅತ್ಯಂತ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಐಪಿಎಲ್ ಇತಿಹಾಸದ ಸ್ಪೋಟಕ ಶತಕಗಳಿಸಿದ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2013ರಲ್ಲಿ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದಿದ್ದ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ಕೇವಲ 66 ಎಸೆತಗಳಲ್ಲಿ 175 ರನ್ ಸಿಡಿಸಿದ ದಾಖಲೆ ಸೃಷ್ಟಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗೇಲ್ ತಮ್ಮ ಶತಕವನ್ನು ಸಂಪೂರ್ಣಗೊಳಿಸಲು ತೆಗೆದುಕೊಂಡಿದ್ದು ಕೇವಲ 30 ಎಸೆತಗಳನ್ನು ಮಾತ್ರ. ಈ ಇನ್ನಿಂಗ್ಸ್‌ನಲ್ಲಿ 17 ಸಿಕ್ಸರ್ ಹಾಗೂ 13 ಬೌಡರಿಗಳನ್ನು ಬಾರಿಸಿದ್ದರು ಬ್ಯಾಟಿಂಗ್ ದೈತ್ಯ ಗೇಲ್. ಈ ಪಂದ್ಯದಲ್ಲಿ ಆರ್‌ಸಿಬಿ ಐದು ವಿಕೆಟ್ ಕಳೆದುಕೊಂಡು ಭರ್ಜರಿ 263 ರನ್‌ಗಳನ್ನು ಗಳಿಸಿತ್ತು. 130 ರನ್‌ಗಳ ಬೃಹತ್ ಅಂತರದಿಂದ ಈ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಂಡಿತ್ತು.

2. ಯೂಸುಫ್ ಪಠಾಣ್- 37 ಎಸೆತ

2. ಯೂಸುಫ್ ಪಠಾಣ್- 37 ಎಸೆತ

2010ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 212/6 ರನ್‌ಗಳ ದೊಡ್ಡ ಗುರಿಯನ್ನು ರಾಜಸ್ಥಾನ ರಾಯಲ್ಸ್‌ಗೆ ನೀಡಿತ್ತು. ಇದನ್ನು ಬೆನ್ನತ್ತಿದ ಆರ್‌ಆರ್ ತಂಡ 9.2 ಓವರ್‌ಗಳಲ್ಲಿ 66/4 ಗಳಿಸಿ ಸೋಲಿನತ್ತ ಮುಖಮಾಡಿತ್ತು. ಆದರೆ ಬಳಿಕ ಕಣಕ್ಕಿಳಿದ ಯುಸೂಫ್ ಪಠಾಣ್ ಮೈದಾನದಲ್ಲಿ ರುದ್ರಾವತಾರ ತಾಳಿದರು. 37 ಎಸೆತಗಳಲ್ಲಿ ಶತಕವನ್ನು ಗಳಿಸಿದ ಯುಸೂಫ್ ಪಠಾಣ್ ತಂಡವನ್ನು ಗೆಲ್ಲಿಸಲು ಕಠಿಣ ಸಾಹಸ ಮಾಡಿದರಾದರೂ ಕೇವಲ 4 ರನ್‌ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ಸೋಲು ಕಂಡಿತ್ತು.

3. ಡೇವಿಡ್ ಮಿಲ್ಲರ್- 38 ಎಸೆತ

3. ಡೇವಿಡ್ ಮಿಲ್ಲರ್- 38 ಎಸೆತ

2013ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಪರವಾಗಿ ಡೇವಿಡ್ ಮಿಲ್ಲರ್ ಸ್ಪೋಟಕ ಶತಕವನ್ನು ಬಾರಿಸಿ ಮಿಂಚಿದ್ದರು. ಆರ್‌ಸಿಬಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಕೇವಲ 38 ಎಸೆತಗಳಲ್ಲಿ ಮೂರಂಕಿ ದಾಟಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 190 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಇದಕ್ಕೆ ಪ್ರತಿಯಾಗಿ ಪಂಜಾಬ್ ಮೊದಲ 10 ಓವರ್‌ಗಳಲ್ಲಿ 64 ರನ್‌ಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯನ್ನು ಎದುರಿಸಿತ್ತು. ಆದರೆ ಡೇವಿಡ್ ಮಿಲ್ಲರ್ ಬ್ಯಾಟಿಂಗ್‌ಗೆ ಇಳಿದ ನಂತರ ಪಂದ್ಯದ ಪಲಿತಾಂಶವೇ ಬದಲಾಗಿ ಬಿಟ್ಟಿತು. ರಾಜ್‌ಗೋಪಾಲ್ ಸತೀಶ್ ಜೊತೆಗೆ ಸೇರಿಕೊಂಡ ಡೇವಿಡ್ ಮಿಲ್ಲರ್ ಮುಂದಿನ 8 ಓವರ್‌ಗಳಲ್ಲಿ 130 ರನ್ ಸೂರೆಗೈದರು. ಇನ್ನೂ ಎರಡು ಓವರ್‌ಗಳು ಉಳಿದಿರುವಂತೆಯೇ ಕಿಂಗ್ಸ್ ವಿಜಯವನ್ನಾಚರಿಸಿತು.

4. ಆಡಂ ಗಿಲ್‌ಕ್ರಿಸ್ಟ್- 42 ಎಸೆತ

4. ಆಡಂ ಗಿಲ್‌ಕ್ರಿಸ್ಟ್- 42 ಎಸೆತ

ಐಪಿಎಲ್‌ನ ಆರಂಭಿಕ ಆವೃತ್ತಿಯಲ್ಲಿ ಈ ವೇಗದ ಶತಕವನ್ನು ಸಿಡಿಸಿದ ಸಾಧನೆಯನ್ನು ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಗಿಲ್‌ಕ್ರಿಸ್ಟ್ ಮಾಡಿದ್ದಾರೆ. ಡಿವೈ ಪಾಟೀಲ್ ಸ್ಟೇಡಿಯಮ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ XI ಪಂಜಾಬ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 154 ರನ್‌ಗಳಿಸಿತ್ತು. ಇದನ್ನು ಬೆನ್ನತ್ತಿದ ಪಂಜಾಬ್ ಗಿಲ್‌ಕ್ರಿಸ್ಟ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 42 ಎಸೆತಗಳಲ್ಲಿ ಗಿಲ್‌ಕ್ರಿಸ್ ಶತಕವನ್ನು ಬಾರಿಸಿದರು. 10 ಸಿಕ್ಸರ್ ಹಾಗೂ 9 ಬೌಂಡರಿ ಸಿಡಿಸಿ 12 ಓವರ್‌ಗಳಲ್ಲಿ 10 ವಿಕೆಟ್‌ಗಳ ಗೆಲುವು ದಾಖಲಾಗಲು ಕಾರಣರಾದರು. ಆರಂಭಿಕರಾಗಿ ಇನ್ನೊಂದು ತುದಿಯಲ್ಲಿ ಸಾಥ್ ನೀಡಿದ ವಿವಿಎಸ್ ಲಕ್ಷ್ಮಣ್ 26 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದ್ದರು.

5. ಎಬಿ ಡಿವಿಲಿಯರ್ಸ್- 43 ಎಸೆತ

5. ಎಬಿ ಡಿವಿಲಿಯರ್ಸ್- 43 ಎಸೆತ

ಗುಜರಾತ್ ಲಯನ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡದ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಶತಕಗಳ ನೆರವಿನಿಂದ ಆರ್‌ಸಿಬಿ 248/3 ರನ್ ಗಳಿಸಿತ್ತು. ಎಬಿಡಿ ಈ ಪಂದ್ಯದಲ್ಲಿ 52 ಎಸತಗಳಲ್ಲಿ 129 ರನ್ ಚಚ್ಚಿದ್ದರು. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್ ಹಾಗೂ 10 ಬೌಂಡರಿ ಸೇರಿತ್ತು. ಈ ಪಂದ್ಯದಲ್ಲಿ ನೂರು ರನ್‌ಗಳ ಗಡಿ ದಾಟಲು ಎಬಿಡಿ ತೆಗೆದುಕೊಂಡಿದ್ದು 43 ಎಸೆತಗಳನ್ನು ಮಾತ್ರ. 248.07ರ ಸ್ಟ್ರೈಕ್‌ರೇಟ್‌ನಲ್ಲಿ ಎಬಿಡಿ ಬ್ಯಾಟ್ ಬೀಸಿದ್ದರು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಐವತ್ತೈದು ಎಸೆತದಲ್ಲಿ 109 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Sunday, September 12, 2021, 17:29 [IST]
Other articles published on Sep 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X