ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿ

IPL 2021: Losing seven out of the first eight matches in an IPL season-List

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇತಿಹಾಸದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಬೇಡದ ದಾಖಲೆ ನಿರ್ಮಿಸಿದೆ. ಬುಧವಾರ (ಸೆಪ್ಟೆಂಬರ್ 23) ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಈ ಸೋಲಿನ ಬೆನ್ನಲ್ಲೇ ಎಸ್‌ಆರ್‌ಎಚ್ ಬೆನ್ನಿಗೆ ಕೆಟ್ಟ ದಾಖಲೆ ಸೆರ್ಪಡೆಯಾಗಿದೆ.

ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 33ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲುವುದರೊಂದಿಗೆ ಸೀಸನ್ ಒಂದರಲ್ಲಿ ತಂಡವೊಂದು ಆರಂಭಿಕ ಎಂಟು ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತ ಕೆಟ್ಟ ದಾಖಲೆಗೆ ಕಾರಣವಾಗಿದೆ.

2021ರ ಈ ಸೀಸನ್‌ನಲ್ಲಿ ಹೈದರಾಬಾದ್ 8 ಪಂದ್ಯಗಳನ್ನು ಆಡಿದ್ದು ಇದರಲ್ಲಿ 1 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಅಂದ್ಹಾಗೆ ಈ ಕೆಟ್ಟ ದಾಖಲೆ ಪಟ್ಟಿಯಲ್ಲಿ ಬಹಳಷ್ಟು ತಂಡಗಳಿವೆ. ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಹಿಂದೆ ಇದೇ ಪರಿಸ್ಥಿತಿ ಅನುಭವಿಸಿತ್ತು.

 ಸತ್ಯ ಸ್ವೀಕರಿಸಿ ಮುಂದೆ ಸಾಗಬೇಕು; ಕೊನೆಗೂ ಪಂತ್ ನಾಯಕತ್ವದ ಬಗ್ಗೆ ಮೌನ ಮುರಿದ ಶ್ರೇಯಸ್ ಐಯ್ಯರ್ ಸತ್ಯ ಸ್ವೀಕರಿಸಿ ಮುಂದೆ ಸಾಗಬೇಕು; ಕೊನೆಗೂ ಪಂತ್ ನಾಯಕತ್ವದ ಬಗ್ಗೆ ಮೌನ ಮುರಿದ ಶ್ರೇಯಸ್ ಐಯ್ಯರ್

ಸೆಪ್ಟೆಂಬರ್‌ 25ಕ್ಕೆ ಪಂಜಾಬ್-ಹೈದರಾಬಾದ್ ಮುಖಾಮುಖಿ
ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್, ವೃದ್ಧಿಮಾನ್ ಸಾಹ 18, ಕೇನ್ ವಿಲಿಯಮ್ಸನ್ 18, ಮನೀಶ್ ಪಾಂಡೆ 17, ಅಬ್ದುಲ್ ಸಮದ್ 28, ರಶೀದ್ ಖಾನ್ 22 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 134 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 11, ಶಿಖರ್ ಧವನ್ 42, ಶ್ರೇಯಸ್ ಐಯ್ಯರ್ 47, ರಿಷಭ್ ಪಂತ್ 35 ರನ್‌ನೊಂದಿಗೆ 17.5 ಓವರ್‌ಗೆ 2 ವಿಕೆಟ್ ಕಳೆದು 139 ರನ್ ಗಳಿಸಿತು. 12 ರನ್‌ಗೆ 2 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಕ್ ನಾರ್ಟ್ಜೆ ಪಂದ್ಯಶ್ರೇಷ್ಠರೆನಿಸಿದರು. ದಕ್ಷಿಣ ಆಫ್ರಿಕಾದ ಮತ್ತೊಬ್ಬ ವೇಗಿ ಕಾಗಿಸೊ ರಬಾಡ ಕೂಡ ಪಂದ್ಯದಲ್ಲಿ ಉತ್ತಮ ಬೌಲಿಂಗ್ ನೀಡಿದ್ದರು. ರಬಾಡ 37 ಎಸೆತಗಳಲ್ಲಿ 3 ವಿಕೆಟ್ ಉರುಳಿಸಿದ್ದರು. ಮುಂದೆ ಸನ್ ರೈಸರ್ಸ್ ಹೈದರಾಬಾದ್‌ಗೆ ಸೆಪ್ಟೆಂಬರ್‌ 25ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯ ನಡೆಯಲಿದೆ.

ಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆ

ನಾಯಕತ್ವದ ಬಗ್ಗೆ ಮೌನ ಮುರಿದ Shreyas Iyer | Oneindia Kannada

ಐಪಿಎಲ್ ಸೀಸನ್ ಒಂದರಲ್ಲಿ ಆರಂಭಿಕ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತಿದ್ದ ತಂಡಗಳು
* ಕೋಲ್ಕತ್ತಾ ನೈಟ್ ರೈಡರ್ಸ್, 2009
* ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್ XI ಪಂಜಾಬ್) 2010
* ಡೆಲ್ಲಿ ಕ್ಯಾಪಿಲ್ಸ್ (ಹಿಂದಿನ ಡೆಲ್ಲಿ ಡೇರ್ ಡೆವಿಲ್ಸ್) 2013
* ಪಂಜಾಬ್ ಕಿಂಗ್ಸ್ 2019
* ಸನ್ ರೈಸರ್ಸ್ ಹೈದರಾಬಾದ್ 2021

Story first published: Thursday, September 23, 2021, 17:55 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X