ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮನೀಶ್ ಪಾಂಡೆಗೆ ಒಂದೆರಡು ಪಂದ್ಯಗಳ ವಿಶ್ರಾಂತಿ ಅಗತ್ಯವಿದೆ: ಪ್ರಗ್ಯಾನ್ ಓಜಾ

IPL 2021: Manish pandey need to take break for couple pf games said Pragyan Ojha

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ರೀತಿಗೆ ಟೀಕೆಗೆ ಒಳಗಾಗುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಉತ್ತಮ ರನ್ ಗಳಿಸಿದರೂ ನಿಧಾನವಾಗಿ ಬ್ಯಾಟಿಂಗ್ ಮಾಡಿ ತಂಡದ ಸೋಲಿಗೆ ಕಾರಣರಾದರು ಎಂಬ ಮಾತುಗಳು ಕೇಳಿ ಬಂದಿತ್ತು. ಮೂರನೇ ಪಂದ್ಯದಲ್ಲಿ ಪಾಂಡೆ ಬ್ಯಾಟ್‌ನಿಂದ ಹೆಚ್ಚಿನ ರನ್ ಬರಲಿಲ್ಲ. ಹೀಗಾಗಿ ಮನೀಶ್ ಪಾಂಡೆಗೆ ಒಂದೆರಡು ಪಂದ್ಯಗಳ ವಿಶ್ರಾಂತಿಯ ಅಗತ್ಯವಿದೆ ಎಂಬ ಮಾತನ್ನು ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಹೇಳಿದ್ದಾರೆ.

ಸ್ಪೋರ್ಟ್ಸ್ ಟುಡೇ ಜೊತೆಗೆ ಮಾತನಾಡಿದ ಪ್ರಗ್ಯಾನ್ ಓಜಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 2021ರ ಐಪಿಎಲ್ ಆವೃತ್ತಿ ಉತ್ತಮವಾಗಿ ಸಾಗಬೇಕಾದರೆ ಮನೀಶ್ ಪಾಂಡೆ ಹಿಂಬದಿಯ ಸೀಟ್‌ನಲ್ಲಿ ಕುಳಿದು ಆಟದ ಬಗ್ಗೆ ಪರಾಮರ್ಶೆ ಮಾಡುವುದು ಉತ್ತಮ ಎಂದಿದ್ದಾರೆ.

ಐಪಿಎಲ್ 2021: ಬೆಂಗಳೂರು vs ಕೊಲ್ಕತ್ತಾ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?ಐಪಿಎಲ್ 2021: ಬೆಂಗಳೂರು vs ಕೊಲ್ಕತ್ತಾ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅತ್ಯುತ್ತಮ ಆರಂಭದ ಹೊರತಾಗಿಯೂ 151 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರರಿಬ್ಬರು 67 ರನ್‌ಗಳ ಜೊತೆಯಾಟವನ್ನು ನೀಡಿದ ನಂತರವೂ ಹೈದರಾಬಾದ್ 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಈ ಬಾರಿಯ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳಲ್ಲೂ ಸೋಲು ಕಂಡಿದೆ.

"ಮೂರನೇ ಕ್ರಮಾಂಕ ಅತ್ಯಂತ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೆ. ಅಲ್ಲಿ ಆತ ಅತ್ಯುತ್ತಮ ಪ್ರದರ್ಶನವನ್ನು ನೀಡಲೇಬೇಕಾಗುತ್ತದೆ. ಪಂದ್ಯದಿಂದ ಪಂದ್ಯಕ್ಕೆ ಒತ್ತಡಗಳು ಹೆಚ್ಚಾಗುತ್ತದೆ. ಆಟವನ್ನು ವೀಕ್ಷಿಸುತ್ತಿರುವವರಿಗೆ ಮನೀಶ್ ಪಾಂಡೆಯಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ ಎನಿಸಬಹುದು. ಆಗ ನೀವು ಹಿಂಬದಿಯ ಸೀಟ್ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಎರಡು ಪಂದ್ಯಗಳಿಂದ ವಿಶ್ರಾಂತಿ ಪಡೆದು ನಿಮ್ಮ ಆಟದ ಬಗ್ಗೆ ಯೋಚಿಸಿ" ಎಂದು ಪ್ರಗ್ಯಾನ್ ಓಜಾ ಹೇಳಿದ್ದಾರೆ.

ಸತತ ಮೂರನೇ ಸೋಲಿಗೆ ಬೇಸತ್ತ ಡೇವಿಡ್ ವಾರ್ನರ್ ಹೇಳಿದ್ದೇನು?ಸತತ ಮೂರನೇ ಸೋಲಿಗೆ ಬೇಸತ್ತ ಡೇವಿಡ್ ವಾರ್ನರ್ ಹೇಳಿದ್ದೇನು?

"ನೀವು ಸತತವಾಗಿ ಆಡುತ್ತಿರುವಾಗ ಮತ್ತು ನೀವು ಚೆನ್ನಾಗಿ ಪ್ರದರ್ಶನ ನೀಡದಿರುವ ಸಂದರ್ಭದಲ್ಲಿ ಏನಾಗುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಾರದೆಯಿರಬಹುದು. ಆಗ ನೀವು ಸಣ್ಣ ವಿರಾಮವನ್ನು ಪಡೆಯಬೇಕಾಗುತ್ತದೆ"ಎಂದು ಪ್ರಗ್ಯಾನ್ ಓಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Sunday, April 18, 2021, 12:42 [IST]
Other articles published on Apr 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X