ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ರಾಜಸ್ಥಾನ್ ವಿರುದ್ಧ ಚೆನ್ನೈಗೆ 45 ರನ್‌ಗಳ ರಾಯಲ್ ಗೆಲುವು

ipl 2021, match 12, Chennai Super Kings won the match by 45 runs, highlights

ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಉತ್ತಮ ಆರಂಭವನ್ನು ಪಡೆದುಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಸಾಧಾರಣ ಆರಂಭವನ್ನು ಪಡೆಯಿತು. ಆದರೆ ಮಧ್ಯಮ ಕ್ರಮಾಂಕದ ಆಟಗಾರರ ಹೀನಾಯ ಪ್ರದರ್ಶನದ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸುಲಭ ತುತ್ತಾಯಿತು.

ಕೊಹ್ಲಿ, ಗೈಲ್, ರೈನಾ ಅಲ್ಲ.. ಶ್ರೀಕಾಂತ್ ಪ್ರಕಾರ ಐಪಿಎಲ್‌ನ ಮೌಲ್ಯಯುತ ಆಟಗಾರ ಯಾರು ಗೊತ್ತಾ!ಕೊಹ್ಲಿ, ಗೈಲ್, ರೈನಾ ಅಲ್ಲ.. ಶ್ರೀಕಾಂತ್ ಪ್ರಕಾರ ಐಪಿಎಲ್‌ನ ಮೌಲ್ಯಯುತ ಆಟಗಾರ ಯಾರು ಗೊತ್ತಾ!

ಮಿಂಚಿದ ಜೋಸ್ ಬಟ್ಲರ್

ಮಿಂಚಿದ ಜೋಸ್ ಬಟ್ಲರ್

ರಾಯಲ್ ಚಾಲೆಂಜರ್ಸ್ ಪರವಾಗಿ ಜೋಸ್ ಬಟ್ಲರ್ ಮಾತ್ರವೇ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲರಾದರು. ಉಳಿದಂತೆ ಎಲ್ಲಾ ಆಟಗಾರರು ನೀರಸ ಪ್ರದರ್ಶನ ನೀಡಿದರು. ನಾಯಕ ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಬಳಿಕ ಉಳಿದ ಎರಡು ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದು ಇಂದು ಕೇವಲ ಒಂದು ರನ್‌ಗಳಿಸಲು ಮಾತ್ರವೇ ಶಕ್ತರಾದರು.

ಹಠಾತ್ ಕುಸಿತ

ಹಠಾತ್ ಕುಸಿತ

ಮನನ್ ವೋಹ್ರಾ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್‌ಅನ್ನು 45 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿದ್ದ ಆರ್‌ಆರ್ ತಂಡಕ್ಕೆ ಬಟ್ಲರ್ ಚೇತರಿಕೆ ನೀಡುವ ಯತ್ನ ನಡೆಸಿದರು. ಆದರೆ ರವೀಂದ್ರ ಜಡೇಜಾ ಎಸೆದ ಅದ್ಭುತ ಎಸೆತಕ್ಕೆ ಬೌಲ್ಡ್ ಆಗುವ ಮೂಲಕ ಬಟ್ಲರ್ ವಿಕೆಟ್ ಕಳೆದುಕೊಂಡರು. 49 ರನ್‌ಗಳಿಸಿದ್ದ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ರಾಜಸ್ಥಾನ್ ರಾಯಲ್ಸ್ ತಂಡ ಹಠಾತ್ ಕುಸಿತವನ್ನು ಕಂಡಿತು.

8 ರನ್‌ಗೆ 5 ವಿಕೆಟ್

8 ರನ್‌ಗೆ 5 ವಿಕೆಟ್

ಕೇವಲ 8 ರನ್‌ಗಳ ಅಂತರದಲ್ಲಿ ಸಂಜು ಸ್ಯಾಮ್ಸನ್ ಬಳಗ ಮಧ್ಯಮ ಕ್ರಮಾಂಕದ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರವೀಂದ್ರ ಜಡೇಜಾ ಹಾಗೂ ಮೊಯೀನ್ ಅಲಿ ರಾಜಸ್ಥಾನ್ ರಾಯಲ್ಸ್ ಮಧ್ಯಮ ಕ್ರಮಾಂಕವನ್ನು ಅಕ್ಷರಶಃ ಪುಡಿಗಟ್ಟಿದರು. ಅಲ್ಲಿಂದ ರಾಜಸ್ಥಾನ್ ಯಾವ ಹಂತದಲ್ಲಿಯೂ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಂತರ ರಾಹುಲ್ ತೆವಾಟಿಯಾ ಹಾಗೂ ಜಯದೇವ್ ಉನಾದ್ಕಟ್ ಉತ್ತಮ ಜೊತೆಯಾಟ ನೀಡಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಇದರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ 143 ರನ್‌ಗಳಿಗೆ ರಾಜಸ್ಥಾನ್ ರಾಯಲ್ಸ್ ತನ್ನ ಆಟವನ್ನು ಮುಗಿಸಿತು.

ಸವಾಲಿನ ಗುರಿ ನೀಡಿದ್ದ ಚೆನ್ನೈ

ಸವಾಲಿನ ಗುರಿ ನೀಡಿದ್ದ ಚೆನ್ನೈ

ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ 188 ರನ್‌ಗಳನ್ನು ಗಳಿಸಿತು. ಫಾಪ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಮೊಯೀನ್ ಅಲಿ, ಡ್ವೇಯ್ನ್ ಬ್ರಾವೋ ಅವರ ಸಾಹಸದಿಂದಾಗಿ ಸವಾಲಿನ ಮೊತ್ತವನ್ನು ಪೇರಿಸಲು ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿಯಾಗಿತ್ತು.

Story first published: Tuesday, April 20, 2021, 8:33 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X