ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

DC vs MI: Preview : ಡೆಲ್ಲಿ vs ಮುಂಬೈ, ಸಂಭಾವ್ಯ ತಂಡಗಳು, ಪಿಚ್-ಹವಾಮಾನ ವರದಿ

IPL 2021, Match 13, DC vs MI: Preview, probable XI, Chennai weather forecast, and MA Chidambaram pitch report

ಚೆನ್ನೈ: ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಏಪ್ರಿಲ್ 20ರ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ. ಡೆಲ್ಲಿ ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಕಂಡಿದ್ದರೆ, ಮುಂಬೈ ಕೂಡ ಮೂರರಲ್ಲಿ ಎರಡು ಜಯದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಐಪಿಎಲ್‌ನಲ್ಲಿ 2019ರ ವಿಶ್ವಕಪ್‌ ಘಟನೆ ನೆನಪಿಸಿದ ಎಂಎಸ್ ಧೋನಿಐಪಿಎಲ್‌ನಲ್ಲಿ 2019ರ ವಿಶ್ವಕಪ್‌ ಘಟನೆ ನೆನಪಿಸಿದ ಎಂಎಸ್ ಧೋನಿ

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದರೆ, ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಒಮ್ಮೆ ಮಾತ್ರ ಫೈನಲ್‌ಗೆ ಪ್ರವೇಶಿಸಿದೆ ಅದು ಕಳೆದ ಸೀಸನ್‌ನಲ್ಲಿ. ಇಂದು ಡೆಲ್ಲಿ-ಮುಂಬೈ ಮುಖಾಮುಖಿಗೂ ಮುನ್ನ ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಇಲ್ಲಿವೆ.

ಪಂದ್ಯದ ಪ್ರಮುಖ ಮಾಹಿತಿಗಳು

ಪಂದ್ಯದ ಪ್ರಮುಖ ಮಾಹಿತಿಗಳು

ಐಪಿಎಲ್‌ 13ನೇ ಪಂದ್ಯವಾಗಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಲಿದ್ದು, ಈ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 7:30 PMಗೆ ಆರಂಭಗೊಳ್ಳಲಿದೆ. ಟಾಸ್ ಗೆಲ್ಲುವ ತಂಡ ಬೌಲಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

ಪಿಚ್ ಮತ್ತು ಹವಾಮಾನ ವರದಿ

ಪಿಚ್ ಮತ್ತು ಹವಾಮಾನ ವರದಿ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದ ವೇಳೆ ಚೆನ್ನೈನಲ್ಲಿ 29 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇದು ಸಾಧಾರಣ ತಾಪಮಾನ. ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಚೆನ್ನೈ ಪಿಚ್‌ ಬ್ಯಾಟಿಂಗ್‌ಗೆ ಕೊಂಚ ಸವಾಲಿನದ್ದು. ಹೀಗಾಗಿ ಬ್ಯಾಟಿಂಗ್‌ ತಂಡ ಬ್ಯಾಟಿಂಗ್‌ ಪವರ್‌ಪ್ಲೇಯನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಸ್ಲೋವರ್‌ ಮತ್ತು ಕಟ್ಟರ್ ಬಾಲ್‌ಗಳನ್ನು ಬಳಸಿಕೊಳ್ಳಬೇಕು. 160-170 ಇಲ್ಲಿ ಉತ್ತಮ ಟೋಟಲ್ ಎನಿಸಲಿದೆ.

ಮುಂಬೈ ಪ್ಲೇಯಿಂಗ್ XI

ಮುಂಬೈ ಪ್ಲೇಯಿಂಗ್ XI

ಕ್ವಿಂಟನ್ ಡಿ ಕಾಕ್ (ಡಬ್ಲ್ಯೂಕೆ), ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್ /ಆಡಮ್ ಮಿಲ್ನೆ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಮತ್ತು ಜಸ್ಪ್ರೀತ್ ಬುಮ್ರಾ.

ಡೆಲ್ಲಿ ಪ್ಲೇಯಿಂಗ್ XI

ಡೆಲ್ಲಿ ಪ್ಲೇಯಿಂಗ್ XI

ಪೃಥ್ವಿ ಶಾ, ಶಿಖರ್ ಧವನ್, ಸ್ಟೀವ್ ಸ್ಮಿತ್, ರಿಷಭ್ ಪಂತ್ (ಸಿ / ಡಬ್ಲ್ಯೂಕೆ), ಮಾರ್ಕಸ್ ಸ್ಟೋಯಿನಿಸ್, ಲಲಿತ್ ಯಾದವ್, ಕ್ರಿಸ್ ವೋಕ್ಸ್ / ಅನ್ರಿಕ್ ನಾರ್ಟ್ಜೆ, ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ, ಕಾಗಿಸೊ ರಬಡಾ, ಮತ್ತು ಅವೇಶ್ ಖಾನ್.

Story first published: Tuesday, April 20, 2021, 13:32 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X