ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಸನ್‌ರೈಸರ್ಸ್‌ಗೆ 121 ರನ್‌ಗಳ ಸುಲಭ ಸವಾಲು ನೀಡಿದ ಪಂಜಾಬ್

IPL 2021, match 14: Hyderabad need 121 runs to win against Punjab

ಪಂಜಾಬ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಸುಲಭ ಸವಾಲನ್ನು ಮುಂದಿಟ್ಟಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಕೇವಲ 120 ರನ್‌ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸುಲಭ ಸವಾಲನ್ನು ನೀಡಿದೆ ಪಂಜಾಬ್

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದೆ. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಈ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ಪಂಜಾಬ್‌ನ ಯಾವ ಬ್ಯಾಟ್ಸ್‌ಮನ್ ಕೂಡ ಪ್ರದರ್ಶನ ನೀಡಲಿಲ್ಲ. ಮಯಾಂಕ್ ಅಗರ್ವಾಲ್ ಹಾಗೂ ಶಾರೂಖ್ ಖಾನ್ ಗಳಿಸಿದ ತಲಾ 22 ರನ್‌ಗಳು ಪಂಜಾಬ್ ಪಾಲಿನ ಹೈಯೆಸ್ಟ್ ಸ್ಕೋರ್ ಎನಿಸಿತು.

ಐಪಿಎಲ್ 2021: ಪಂಜಾಬ್ vs ಹೈದರಾಬಾದ್, ಪ್ಲೇಯಿಂಗ್ ‍XI, ಅಪ್‌ಡೇಟ್ಸ್ಐಪಿಎಲ್ 2021: ಪಂಜಾಬ್ vs ಹೈದರಾಬಾದ್, ಪ್ಲೇಯಿಂಗ್ ‍XI, ಅಪ್‌ಡೇಟ್ಸ್

ಸ್ವತಃ ನಾಯಕ ಕೆಎಲ್ ರಾಹುಲ್ ಇಂದು ಕೇವಲ 4 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಂಜಾಬ್ ತಂಡದ ಕುಸಿತಕ್ಕೆ ಚಾಲನೆ ನೀಡಿದರು. ನಂತರ ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಕ್ರಿಸ್ ಗೇಲ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಹೆನ್ರಿಕ್ಯೂಸ್ ಒಬ್ಬರ ಹಿಂದಿಬ್ಬರಂತೆ ಫೆವಿಲಿಯನ್ ಸೇರಿಕೊಳ್ಳ ತೊಡಗಿದರು.

ಯುವ ಆಟಗಾರ ಶಾರೂಖ್ ಖಾನ್ ಸಣ್ಣ ಮಟ್ಟಿಗೆ ಹೈದರಾಬಾದ್‌ಗೆ ಪ್ರತಿರೋಧವನ್ನು ಒಡ್ಡಿದರು. ಆದರೆ ಅವರ ಆಟವೂ 22 ರನ್‌ಗಳಿಗೆ ಅಂತ್ಯವಾದ ನಂತರ ಎಂ ಅಶ್ವಿನ್ ಹಾಗೂ ಶಮಿ ಕೂಡ ಶೀಘ್ರವಾಗಿ ವಿಕೆಟ್ ಒಪ್ಪಿಸಿ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.

ಸಹ ಆಟಗಾರರಿಗೆ ಧೋನಿ ಗುಡ್ ಲಕ್ ಹೇಳೋದೇ ಇಲ್ಲ ; ರಹಸ್ಯ ಬಿಚ್ಚಿಟ್ಟ ಓಝಾ!ಸಹ ಆಟಗಾರರಿಗೆ ಧೋನಿ ಗುಡ್ ಲಕ್ ಹೇಳೋದೇ ಇಲ್ಲ ; ರಹಸ್ಯ ಬಿಚ್ಚಿಟ್ಟ ಓಝಾ!

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಖಲೀಲ್ ಅಹ್ಮದ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಖಲೀಲ್ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ 3 ವಿಕೆಟ್ ಪಡೆದಿದ್ದಾರೆ. ಅಭಿಶೇಕ್ ಶರ್ಮಾ ಎರಡು ವಿಕೆಟ್ ಕಬಳಿಸಿದರೆ ರಶೀದ್ ಖಾನ್, ಸಿದ್ಧಾರ್ಥ್ ಕೌಲ್ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

Story first published: Wednesday, April 21, 2021, 17:51 [IST]
Other articles published on Apr 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X