ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR Preview : ಬೆಂಗಳೂರು vs ರಾಜಸ್ಥಾನ್ : ಸಂಭಾವ್ಯ ತಂಡ, ಹವಾಮಾನ, ಪಿಚ್ ರಿಪೋರ್ಟ್, ಡ್ರೀಮ್ 11 ಟಿಪ್ಸ್

IPL 2021, Match 16, RCB vs RR Preview, Mumbai Weather Forecast, Pitch Report, Playing XIs,

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ( ಏಪ್ರಿಲ್ 22 ) ನಡೆಯಲಿದೆ. ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿ ಮೂರರಲ್ಲಿಯೂ ಜಯಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 3 ಪಂದ್ಯಗಳನ್ನಾಡಿ ಒಂದರಲ್ಲಿ ಗೆದ್ದು, ಎರಡರಲ್ಲಿ ಸೋತಿರುವ ರಾಜಸ್ಥಾನ್ ರಾಯಲ್ಸ್ ತಂಡ ಎದುರಿಸಲಿದೆ.

ಪಂದ್ಯದ ಆರಂಭ : ಪಂದ್ಯ ಸಂಜೆ 7.30ಕ್ಕೆ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಲಭ್ಯವಿರಲಿದ್ದು ಡಿಸ್ನಿ + ಹಾಟ್‌ಸ್ಟಾರ್ VIP ಚಂದಾದಾರರು ಸಹ ಪಂದ್ಯವನ್ನು ವೀಕ್ಷಿಸಬಹುದು.

ಹವಾಮಾನ ವರದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. 31° ಸೆಲ್ಸಿಯಸ್ ಉಷ್ಣಾಂಶವಿರಲಿದ್ದು, ಈ ಪಂದ್ಯಕ್ಕೆ ಇಬ್ಬನಿಯ ಕಾಟ ಕೂಡ ಇರಲಿದೆ.

ಪಿಚ್ ರಿಪೋರ್ಟ್ :

ಮುಂಬೈನ ವಾಂಖೆಡೆ ಸ್ಟೇಡಿಯಂನ ಪಿಚ್ ವೇಗದ ಬೌಲರ್‌ಗಳಿಗೆ ತುಸು ಸಹಕಾರಿ. ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ರನ್ ಗಳಿಸಲು ಈ ಪಿಚ್ ನೆರವಾಗಲಿದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ತಂಡ ತಪ್ಪದೇ 190+ ರನ್ ಗಳಿಸಿದರೆ ಮಾತ್ರ ಪಂದ್ಯ ಸ್ಮರ್ಧಾತ್ಮಕವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ :

ವಿರಾಟ್ ಕೊಹ್ಲಿ ( ನಾಯಕ ), ದೇವದತ್ ಪಡಿಕ್ಕಲ್, ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಕೈಲ್ ಜೆಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗೂ ಯುಜ್ವೇಂದ್ರ ಚಹಾಲ್.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ :

ಜೋಸ್ ಬಟ್ಲರ್ (ವಿ.ಕೀ), ಮನನ್ ವೊಹ್ರಾ, ಸಂಜು ಸ್ಯಾಮ್ಸನ್, ಶಿವಮ್ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೊರಿಸ್, ಜಯದೇವ್ ಉನಾದ್ಕತ್, ಚೇತನ್ ಸಕಾರಿಯಾ ಮತ್ತು ಮುಸ್ತಫಿಜರ್ ರೆಹಮಾನ್.

Story first published: Thursday, April 22, 2021, 13:29 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X