ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2021: CSK vs DC : ಪ್ರಿವ್ಯೂ, ಸಂಭಾವ್ಯ ತಂಡ, ನೇರ ಪ್ರಸಾರ, ಹವಾಮಾನ ವರದಿ, ಪಿಚ್ ರಿಪೋರ್ಟ್

 IPL 2021 Match 2, CSK vs DC: Preview, probable XI, match prediction, weather forecast, and pitch report

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 14ನೇ ಐಪಿಎಲ್ ಆವೃತ್ತಿಯ ಎರಡನೇ ಪಂದ್ಯವನ್ನಾಡಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸಜ್ಜಾಗಿವೆ. ಚೆನ್ನೈ ತಂಡವನ್ನು ಎಂಎಸ್ ಧೋನಿ ಅವರು ಮುನ್ನಡೆಸುತ್ತಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಇದೇ ಮೊದಲ ಬಾರಿಗೆ ನಾಯಕತ್ವವನ್ನು ನಿರ್ವಹಿಸಲಿರುವ ರಿಷಭ್ ಪಂತ್ ಮುನ್ನಡೆಸಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಬಾರಿಯ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠ ಪಡಿಸಲು ಕೆಲ ಹೊಸ ಆಟಗಾರರನ್ನು ಖರೀದಿಸಿತು. ಆದರೂ ಸಹ ಚೆನ್ನೈ ಬ್ಯಾಟಿಂಗ್ ಕ್ರಮವು ಇನ್ನೂ ಸ್ವಲ್ಪ ಅನುಮಾನಾಸ್ಪದವಾಗಿದೆ. ರಾಬಿನ್ ಉತ್ತಪ್ಪ ಅವರನ್ನು ಚೆನ್ನೈ ತಂಡ ಖರೀದಿಸಿತಾದರೂ ಬ್ರೆಂಡನ್ ಮೆಕ್ಕಲಂರಂತಹ ವಿನಾಶಕಾರಿ ಆಟವಾಡುವಂತಹ ಬ್ಯಾಟ್ಸ್‌ಮನ್‌ಗಳು ಚೆನ್ನೈ ತಂಡದಲ್ಲಿರುವಂತೆ ತೋರುತ್ತಿಲ್ಲ. ತಂಡದಲ್ಲಿ ಬ್ಯಾಟ್ಸ್‌ಮನ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿಭಾವಂತ ಆಟಗಾರರಾದ ಸ್ಯಾಮ್ ಕರನ್ & ರವೀಂದ್ರ ಜಡೇಜಾ ಅವರ ಕ್ರಮ ಕೆಳಕ್ಕಿಳಿಯಬಹುದು ಮತ್ತು ಅವರ ಬ್ಯಾಟಿಂಗ್ ಶಕ್ತಿ ಕುಂದಬಹುದು.

ಚೆನ್ನೈ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ಜೋಶ್ ಹೇಜಲ್​ವುಡ್ ಅನುಪಸ್ಥಿತಿಯಿರಲಿದೆ. ಜೋಶ್ ಹೇಜಲ್​ವುಡ್ ಜಾಗಕ್ಕೆ ಜೇಸನ್ ಬೆಹ್ರೆಂಡೋರ್ಫ್ ಬಂದಿದ್ದು ಯಾವ ರೀತಿ ಪ್ರದರ್ಶನ ನೀಡುತ್ತಾರೋ ಕಾದು ನೋಡಬೇಕು. ಚೆನ್ನೈ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ ಶಾರ್ದೂಲ್ ಠಾಕೂರ್ ಅವರ ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳ ಅಂಕಿಅಂಶ ಗಮನಿಸಿದರೆ ಇಂದಿನ ಪಂದ್ಯದಲ್ಲಿ ಹೆಚ್ಚಿನ ವಿಕೆಟ್ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ಶ್ರೇಯಸ್ ಐಯ್ಯರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದು ಇದೇ ಮೊದಲ ಬಾರಿಗೆ ರಿಷಭ್ ಪಂತ್ ನಾಯಕತ್ವ ವಹಿಸಿಕೊಂಡಿದ್ದಾರೆ. ತಂಡದ ವೇಗಿಗಳಾದ ಕಗಿಸೊ ರಬಾಡ ಮತ್ತು ಅನ್ರಿಕ್ ನಾರ್ಕಿಯಾ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದು ಕ್ರಿಸ್ ವೋಕ್ಸ್ ಮತ್ತು ಟಾಮ್ ಕರನ್ ಆಡುವ ಸಂಭವವಿದೆ. ನಾಯಕತ್ವದಲ್ಲಿ ಅಷ್ಟೇನೂ ಅನುಭವವಿಲ್ಲದ ರಿಷಭ್ ಪಂತ್ ಅವರ ನಾಯಕತ್ವದ ಮೇಲೆ ಎಲ್ಲರಲ್ಲಿಯೂ ದೊಡ್ಡ ಪ್ರಶ್ನೆ ಇದೆ. ಆದರೆ ತಂಡದಲ್ಲಿ ಅನುಭವವುಳ್ಳ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ ಮತ್ತು ಸ್ಟೀವ್ ಸ್ಮಿತ್ ಇರುವುದು ಪಂತ್ ಪಾಲಿಗೆ ಪ್ಲಸ್ ಪಾಯಿಂಟ್.

ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದ ಎರಡೂ ಪಂದ್ಯಗಳಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯಗಳಿಸಿದ್ದರಿಂದ ಇದೊಂದು ಒನ್ ಸೈಡೆಡ್ ಪಂದ್ಯವಾಗಬಹುದು.

ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಮಾಹಿತಿ ಮತ್ತು ನೇರ ಪ್ರಸಾರ

ದಿನಾಂಕ : 10 ಏಪ್ರಿಲ್ 2021 , ಶನಿವಾರ

ಸಮಯ : ಭಾರತೀಯ ಕಾಲಮಾನ ಸಂಜೆ 7:30

ಸ್ಥಳ : ವಾಂಖೆಡೆ ಸ್ಟೇಡಿಯಂ , ಮುಂಬೈ.

ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್, ಡಿಸ್ನಿ + ಹಾಟ್‌ಸ್ಟಾರ್ VIP

ಹವಾಮಾನ ವರದಿ

ಇಂದಿನ ಪಂದ್ಯ ನಡೆಯುವ ಮುಂಬೈನ ವಾಂಖೆಡೆ ಸ್ಟೇಡಿಯಂ ಬೆಚ್ಚಗಿನ ವಾತಾವರಣದಿಂದ ಕೂಡಿರಲಿದೆ. ತಾಪಮಾನ ಸುಮಾರು 30° ಸೆಲ್ಸಿಯಸ್ ಇರಲಿದ್ದು ನಂತರದ ಹಂತಗಳಲ್ಲಿ ಇಬ್ಬನಿ ಬೀಳುವ ಸಾಧ್ಯತೆಯಿದೆ.

ಪಿಚ್ ವರದಿ

ಮುಂಬೈನ ವಾಂಖೆಡೆ ಸ್ಟೇಡಿಯಂ ಬ್ಯಾಟ್ಸ್‌ಮನ್‌ ಸ್ನೇಹಿ ಪಿಚ್ ಆಗಿದ್ದು 180ಕ್ಕಿಂತ ಹೆಚ್ಚು ರನ್ ಗಳಿಸಿದರೆ ಸ್ಪರ್ಧಾತ್ಮಕ ಮೊತ್ತವಾಗಲಿದೆ. ಈ ಪಿಚ್‌ನಲ್ಲಿ ಸ್ಪಿನ್ನರ್ ಗಳಿಗಿಂತ ವೇಗಿಗಳು ಉತ್ತಮವಾಗಿರಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ

ರುತುರಾಜ್ ಗಾಯಕ್ವಾಡ್ , ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ ( ನಾಯಕ/ವಿ.ಕೀ), ರವೀಂದ್ರ ಜಡೇಜಾ, ಮೊಯಿನ್ ಅಲಿ, ಸ್ಯಾಮ್ ಕರನ್, ಇಮ್ರಾನ್ ತಾಹಿರ್ / ಡಿಜೆ ಬ್ರಾವೊ, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಾಹರ್.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ

ಪೃಥ್ವಿ ಶಾ, ಶಿಖರ್ ಧವನ್, ಸ್ಟೀವ್ ಸ್ಮಿತ್, ರಿಷಭ್ ಪಂತ್ (ನಾಯಕ/ವಿ.ಕೀ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್ / ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್ /ಟಾಮ್ ಕರನ್, ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್.

Story first published: Saturday, April 10, 2021, 13:49 [IST]
Other articles published on Apr 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X