ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR vs RCB Preview : ಕೊಲ್ಕತ್ತಾ vs ಬೆಂಗಳೂರು : ಸಂಭಾವ್ಯ ತಂಡ, ಹವಾಮಾನ, ಪಿಚ್ ರಿಪೋರ್ಟ್

IPL 2021, Match 30, KKR vs RCB Preview, Ahmadabad Weather Forecast, Pitch Report, Playing XIs,

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು, 7 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಜಯಗಳಿಸಿ 5 ಪಂದ್ಯಗಳಲ್ಲಿ ಸೋಲುಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎದುರಿಸಲಿದೆ.

ಪಂದ್ಯದ ಆರಂಭ : ಪಂದ್ಯ ಸಂಜೆ 7.30ಕ್ಕೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಲಭ್ಯವಿರಲಿದ್ದು ಡಿಸ್ನಿ + ಹಾಟ್‌ಸ್ಟಾರ್ VIP ಚಂದಾದಾರರು ಸಹ ಪಂದ್ಯವನ್ನು ವೀಕ್ಷಿಸಬಹುದು.

ಹವಾಮಾನ ವರದಿ

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯಕ್ಕೆ ಯಾವುದೇ ಮಳೆ ಅಡ್ಡಿ ಆತಂಕ ಇರುವುದಿಲ್ಲ. ಸಂಜೆಯ ವೇಳೆ ಪಂದ್ಯ ಆರಂಭವಾಗುವುದರಿಂದ 36° ಸೆಲ್ಸಿಯಸ್ ಉಷ್ಣಾಂಶವಿರಲಿದೆ ಹಾಗೂ ಇಬ್ಬನಿಯ ಕಿರಿಕಿರಿ ಪಂದ್ಯಕ್ಕೆ ಅಡ್ಡಿ ಮಾಡಲಿದೆ.

ಪಿಚ್ ವರದಿ

ನರೇಂದ್ರ ಮೋದಿ ಸ್ಟೇಡಿಯಂನ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗಿದ್ದು, ಬೌಲರ್‌ಗಳಿಗೂ ಅಷ್ಟೇ ಸಹಕಾರಿಯಾಗಿದೆ. ಮೊದಲು ಬ್ಯಾಟಿಂಗ್ ಆಯ್ದುಕೊಂಡ ತಂಡ 170 ರನ್ ಗಳಿಸಿದರೆ ಎದುರಾಳಿ ತಂಡಕ್ಕೆ ಸ್ಪರ್ಧೆಯನ್ನೊಡ್ಡಬಹುದು.

ಕೊಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ

ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ / ಕರುಣ್ ನಾಯರ್, ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್(ವಿ.ಕೀ), ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್ /ಲಾಕಿ ಫರ್ಗ್ಯುಸನ್ /ಶಕಿಬ್ ಅಲ್ ಹಸನ್, ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ/ ಹರ್ಭಜನ್ ಸಿಂಗ್ ಹಾಗೂ ಪ್ರಸಿದ್ಧ್ ಕೃಷ್ಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ

ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾಯಕ), ಶಹಬಾಝ್ ಅಹ್ಮದ್/ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್(ವಿ.ಕೀ), ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗೂ ಯುಜ್ವೇಂದ್ರ ಚಹಾಲ್.

Story first published: Monday, May 3, 2021, 12:23 [IST]
Other articles published on May 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X