ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ರನೌಟ್ ಪಂದ್ಯದ ಗತಿ ಬದಲಾಯಿಸಿತು: ಎಸ್‌ಆರ್‌ಹೆಚ್ ವಿರುದ್ಧ ಸೋತ ಬಳಿಕ ಕೊಹ್ಲಿ ಪ್ರತಿಕ್ರಿಯೆ

IPL 2021: Maxwell run out was the game-changing moment: Kohli reaction after match
Maxwell ಔಟ್ ಆದ ರೀತಿ ಅಭಿಮಾನಿಗಳಿಗೆ ಬೇಸರ ತಂದಿದೆ | Oneindia Kannada

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿದೆ. ಎಸ್‌ಆರ್‌ಹೆಚ್ ತಮಡ ನೀಡಿದ 142 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 137 ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೇನ್ ವಿಲಿಯಮ್ಸನ್ ಬಳಗ 4 ರನ್‌ಗಳ ಅಂತರದ ರೋಚಕ ಜಯ ಸಾಧಿಸಿದೆ. ಈ ಸೋಲಿನ ಬಳಿಕ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ಸೋಲಿಗೆ ಕಾರಣವಾದ ಸಂಗತಿಯನ್ನ ಕೂಡ ಹೇಳಿದ್ದಾರೆ. ರನ್‌ ಬೆನ್ನಟ್ಟುವ ಸಂದರ್ಭದಲ್ಲಿ ಆರ್‌ಸಿಬಿ ಆರಂಭಿಕ ಮೂರು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತು. ಹೀಗಾಗಿ ಉತ್ತಮವಾಗಿ ಇನ್ನಿಂಗ್ಸ್ ಬೆಳೆಸಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ರನೌಟ್ ಆಗಿದ್ದು ಪಂದ್ಯದ ಗತಿಯನ್ನು ಬದಲಾಯಿಸಿತು ಎಂದಿದ್ದಾರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ.

ಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟುಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟು

ಇನ್ನು ಇದೇ ಸಂದರ್ಭದಲ್ಲಿ ಎಬಿ ಡಿವಲಿಯರ್ಸ್ ಪ್ರದರ್ಶನದ ಬಗ್ಗೆಯೂ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. "ಎಬಿ ಡಿವಿಲಿಯರ್ಸ್ ಯಾವಾಗಲೂ ಆಟದಲ್ಲಿ ಹಿಂದುಳಿಯಲಿಲ್ಲ. ಆದರೆ ಸರಾಗವಾಗಿ ಆಡುತ್ತಿರುವ ಆಟಗಾರನಿಗೆ ಸ್ಟ್ರೈಕ್ ಬಿಟ್ಟುಕೊಡಲು ನಿರ್ಧರಿಸಿದರು. ಅದರಿಂದಾಗಿ ರನ್ ಬೆನ್ನಟ್ಟುವುದಕ್ಕೆ ಪರಿಣಾಮ ಬೀರುವುದಿಲ್ಲ. ಈ ಹಂತದಲಲ್ಇ ಶಹ್ಬಾಜ್ ನಿರ್ಣಾಯಕ ಆಟವನ್ನು ಪ್ರದರ್ಶಿಸಿದರು" ಎಂದಿದ್ದಾರೆ ನಾಯಕ ವಿರಾಟ್‌ ಕೊಹ್ಲಿ.

ಇನ್ನು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಸಂದರ್ಭದಲ್ಲಿ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಯ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಇದು ಸಣ್ಣ ಅಂತರದ ಪಂದ್ಯವಾಗಿತ್ತು. ಈ ಸಂದರ್ಭದಲ್ಲಿ ಸನ್‌ರೈಸರ್ಸ್ ಮೈಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಅಂತಿಮ ಹಂತದಲ್ಲಿ ಅವರು ಕೆಲ ಎಸೆತಗಳನ್ನು ಅದ್ಭುತವಾಗಿ ಎಸೆದರು. ಈ ಮೂಲಕ ನಮಗೆ ಅವಕಾಶವನ್ನೇ ನೀಡಲಿಲ್ಲ" ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಕೊಹ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್ ಪ್ರದರ್ಶನದ ಬಗ್ಗೆಯೂ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಆತ ಅದ್ಭುತವಾಗಿ ಬೌಲಿಂಗ್ ಮಾಡುವುದನ್ನು ನಾನು ಬಯಸುತ್ತೇನೆ ಎಂದಿದ್ದಾರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ.

ಐಪಿಎಲ್‌ನ ಈ ಪ್ರಮುಖ ನಿಯಮವನ್ನು ಬದಲಾಯಿಸಲು ಒತ್ತಾಯಿಸಿದ ಆಕಾಶ ಚೋಪ್ರಐಪಿಎಲ್‌ನ ಈ ಪ್ರಮುಖ ನಿಯಮವನ್ನು ಬದಲಾಯಿಸಲು ಒತ್ತಾಯಿಸಿದ ಆಕಾಶ ಚೋಪ್ರ

ಆರ್‌ಸಿಬಿ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ಬೆಂಚ್: ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ನವದೀಪ್ ಸೈನಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಾನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಟಿಮ್ ಡೇವಿಡ್, ಆಕಾಶ್ ದೀಪ್

ಜೇಸನ್ ರಾಯ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್
ಬೆಂಚ್ ಸಂದೀಪ್ ಶರ್ಮಾ, ಮನೀಶ್ ಪಾಂಡೆ, ಖಲೀಲ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಶೆರ್ಫೇನ್ ರುದರ್ಫೋರ್ಡ್, ಜಗದೀಶ ಸುಚಿತ್, ಮೊಹಮ್ಮದ್ ನಬಿ, ಬೆಸಿಲ್ ತಂಪಿ, ವಿರಾಟ್ ಸಿಂಗ್, ಶಹಬಾಜ್ ನದೀಮ್, ಡೇವಿಡ್ ವಾರ್ನರ್, ಶ್ರೀವತ್ ಗೋಸ್ವಾಮಿ, ಕೇದಾರ್ ಜಾಧವ್

Story first published: Wednesday, October 6, 2021, 23:56 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X