ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆರಂಭಿಕ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದು ಬೀಗುತ್ತಾ ಬೆಂಗಳೂರು?

IPL 2021, MI vs RCB: Can Virat Kohli break open Mumbai Indians aura of invincibility

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು (ಏಪ್ರಿಲ್ 9) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಎರಡೂ ಬಲಿಷ್ಠ ತಂಡಗಳ ಕದನ ಕುತೂಹಲ ಮೂಡಿಸಿದೆ. 7.30 PMಗೆ ಪಂದ್ಯ ಆರಂಭಗೊಳ್ಳಲಿದೆ. ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಇತ್ತಂಡಗಳು ಆಡಲಿವೆ.

1
50809

ಐಪಿಎಲ್ ಇತಿಹಾಸ ಗಮನಿಸಿದರೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹೆಚ್ಚು ಬಲಶಾಲಿ ತಂಡವಾಗಿ ಕಾಣಿಸಿದೆ. ಐದು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿರುವ ಎಂಐಯನ್ನು ಸೋಲಿಸೋದು ಸವಾಲಿನ ಸಂಗತಿ. ಆದರೆ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಮುಂಬೈ ಗೆದ್ದಿದ್ದು ಕಡಿಮೆಯೆ. ಹೀಗಾಗಿ ಆರ್‌ಸಿಬಿಗೆ ಇಂದಿನ ಪಂದ್ಯದಲ್ಲಿ ಗೆದ್ದು ಶುಭಾರಂಭ ಕಾಣುವ ಅವಕಾಶವೂ ಇದೆ.

ಮುಂಬೈ ಬಲಿಷ್ಠರು

ಮುಂಬೈ ಬಲಿಷ್ಠರು

ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜಸ್‌ಪ್ರೀತ್‌ ಬೂಮ್ರಾ ಮೊದಲಾದ ಭಾರತದ ಪ್ರತಿಭಾನ್ವಿತ ಆಟಗಾರರಿದ್ದರೆ, ಕೀರನ್ ಪೊಲಾರ್ಡ್, ಕ್ವಿಂಟನ್ ಡಿ ಕಾಕ್, ಟ್ರೆಂಟ್ ಬೌಲ್ಟ್ ಮೊದಲಾದ ವಿದೇಶಿ ಬಲಿಷ್ಠರೂ ಇದ್ದಾರೆ.

ಮ್ಯಾಕ್ಸ್‌ವೆಲ್‌ನತ್ತ ಚಿತ್ತ

ಮ್ಯಾಕ್ಸ್‌ವೆಲ್‌ನತ್ತ ಚಿತ್ತ

ಆರ್‌ಸಿಬಿ ಕೂಡ ಪ್ರತಿಭಾನ್ವಿತರಿರುವ ತಂಡವೆ. ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಡೇನಿಯಲ್ ಸ್ಯಾಮ್ಸ್, ಫಿನ್ ಅಲೆನ್, ಕೈಲ್ ಜೇಮಿಸನ್, ಡಾನ್ ಕ್ರಿಸ್ಚಿಯನ್, ವಾಷಿಂಗ್ಟನ್ ಸುಂದರ್ ತಂಡಕ್ಕೆ ಬಲ ತುಂಬಲಿದ್ದಾರೆ. ಈ ಬಾರಿ ಮ್ಯಾಕ್ಸ್‌ವೆಲ್‌ ಪ್ರದರ್ಶನ ಹೆಚ್ಚು ಕುತೂಹಲ ಮೂಡಿಸಿದೆ.

ಸಂಭಾವ್ಯ ಎಂಐ XI

ಸಂಭಾವ್ಯ ಎಂಐ XI

ಕ್ವಿಂಟನ್ ಡಿ ಕಾಕ್ (ವಿಕೆ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಪಿಯೂಷ್ ಚಾವ್ಲಾ/ಜಯಂತ್ ಯಾದವ್, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.

ಸಂಭಾವ್ಯ ಆರ್‌ಸಿಬಿ XI

ಸಂಭಾವ್ಯ ಆರ್‌ಸಿಬಿ XI

ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ಸಿ), ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಅಜರುದ್ದೀನ್/ರಜತ್ ಪಾಟಿದಾರ್, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್.

Story first published: Friday, April 9, 2021, 14:09 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X