ಐಪಿಎಲ್ 2021: ಮುಂಬೈಗೆ 166 ರನ್‌ಗಳ ಗುರಿ ನೀಡಿದ ವಿರಾಟ್ ಕೊಹ್ಲಿ ಪಡೆ

ದುಬೈ, ಸೆಪ್ಟೆಂಬರ್ 26: ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ತೀವ್ರ ಪೈಪೋಟಿಯ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಆಟದ ಪರಿಣಾಮವಾಗಿ ಆರ್‌ಸಿಬಿ 165 ರನ್‌ಗಳನ್ನು ಗಳಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್‌ಗೆ ಸವಾಲಿನ ಗುರಿ ನೀಡಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಅರ್ಧ ಶತಕ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 42 ಎಸೆತಗಳನ್ನು ಎದುರಿಸಿ 51 ರನ್‌ಗಳಿಸಿದ್ದರು. 3 ಬೌಂಡರಿ ಹಾಗೂ 3 ಸಿಕ್ಸರ್ ಇದರಲ್ಲಿ ಸೇರಿತ್ತು.

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಶ್ರೀಕರ್ ಭರತ್ ಅರ್ಧ ಶತಕದ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಆರಂಭದಲ್ಲಿ ಆಸರೆಯಾದರು. ಇದಕ್ಕೂ ಮುನ್ನ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ನಾಲ್ಕು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಹೀಗಾಗಿ ಕೊಹ್ಲಿ-ಭರತ್ ಜೋಡಿಯ ಅರ್ಧ ಶತಕ ತಂಡದ ರನ್‌ ಹೆಚ್ಚಿಸಿದ್ದು ಮಾತ್ರವಲ್ಲದೆ ಕುಸಿತದಿಂದಲೂ ತಂಡವನ್ನು ಪಾರುಮಾಡಿತ್ತು.

ಶ್ರೀಕರ್ ಭರತ್ ವಿಕೆಟ್ ಕಳೆದುಕೊಂಡ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಿದರು. ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ಜೋಡಿ ಕೂಡ ಆರ್‌ಸಿಬಿ ಪರವಾಗಿ 51 ರನ್‌ಗಳ ಜೊತೆಯಾಟವನ್ನು ನೀಡಿತ್ತು. ಈ ಸಂದರ್ಭದಲ್ಲಿ ಅರ್ಧ ಶತಕವನ್ನು ಗಳಿಸಿದ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ನಂತರ ಮ್ಯಾಕ್ಸ್‌ವೆಲ್‌ಗೆ ಎಬಿ ಡಿವಲಿಯರ್ಸ್ ಜೊತೆಯಾದರು. ಆದರೆ ಡಿವಿಲಿಯರ್ಸ್ ಈ ಪಂದ್ಯದಲ್ಲಿಯೂ ನಿರಾಸೆ ಮೂಡಿಸಿದ್ದಾರೆ. ಒಂದು ಬೌಂಡಿ ಒಂದು ಸಿಕ್ಸರ್ ಸಿಡಿಸಿ ಆರಂಭದಲ್ಲಿಯೇ ಅಬ್ಬರಿಸುವ ಸೂಚನೆ ನೀಡಿದರಾದರೂ ಇವರ ಆಟ ಕೇವಲ 11 ರನ್‌ಗಳಿಗೆ ಅಂತ್ಯವಾಗಿತ್ತು. ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಇಬ್ಬರನ್ನೂ ಸತತ ಎರಡು ಎಸೆತಗಳಲ್ಲಿ ವಿಕೆಟ್ ಫೆವಿಲಿಯನ್‌ಗೆ ಅಟ್ಟಿದ್ದರು ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ.

ಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿ

ಅಂತಿಮ ಎರಡು ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅದ್ಭುತ ಯಶಸ್ಸು ಸಾಧಿಸಿತು. ಬೂಮ್ರಾ ಎಸೆದ 19ನೇ ಓವರ್‌ನಲ್ಲಿ ಕೇವಲ 6 ರನ್‌ಗಳನ್ನು ನೀಡಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಲಿಯರ್ಸ್ ವಿಕೆಟ್‌ಅನ್ನು ಸತತ ಎರಡು ಎಸೆತಗಳಲ್ಲಿ ಪಡೆದುಕೊಂಡಿದ್ದರು. ಇದು ಆರ್‌ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್ ನೀಡಿದ ದೊಡ್ಡ ಆಘಾತವಾಗಿತ್ತು. ಕೊನೆಯ ಓವರ್‌ ಓವರ್ ಎಸೆದ ಬೋಲ್ಟ್ ಕೂಡ ಆರ್‌ಸಿಬಿ ತಂಡ ರನ್‌ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ಅಂತಿಮ ಓವರ್‌ನಲ್ಲಿ ಆರ್‌ಸಿಬಿ ಗಳಿಸಿದ್ದು ಕೇವಲ 3 ರನ್‌ ಮಾತ್ರ. ಇದರಲ್ಲಿ ಒಂದು ವಿಕೆಟ್ ಕೂಡ ಪಡೆಯುವಲ್ಲಿ ಮುಂಬೈ ಯಶಸ್ವಿಯಾಗಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್

Harshal Patel RCB ತಂಡಕ್ಕೆ ಸಿಕ್ಕಿರುವ ಅಪರೂಪದ ಬೌಲರ್ | Oneindia Kannada

ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಆಡಮ್ ಮಿಲ್ನೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Sunday, September 26, 2021, 21:52 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X