ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ದಶಕದ ಬಳಿಕ ಶತಕ ದಾಟಲು ವಿಫಲವಾದ ರಾಜಸ್ಥಾನ್ ರಾಯಲ್ಸ್

IPL 2021, MI vs RR, 1st time since 2011 Rajasthan Royals scored less than 100 runs

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ರಾಯಲ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಮುಂಬೈ ಇಂಡಿಯನ್ಸ್ ಬೌಲರ್‌ಗಳ ದಾಳಿಗೆ ನಲುಗಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 90 ರನ್‌ಗಳನ್ನು ಮಾತ್ರವೇ ಗಳಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುಲಭ ಗುರಿ ಮುಂದಿಟ್ಟಿದೆ.

ಇನ್ನು ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‌ನಲ್ಲಿ 10 ವರ್ಷಗಳ ಬಳಿಕ ಕಳಪೆ ಸಾಧನೆಯೊಂದನ್ನು ಮಾಡಿದೆ. 2011ರ ಐಪಿಎಲ್ ಆವೃತ್ತಿಯ ಬಳಿಕ ಇದೇ ಮೊದಲ ಬಾರಿಗೆ ಆರ್‌ಆರ್ ತಂಡ 100ಕ್ಕಿಂತ ಕಡಿಮೆ ರನ್‌ಗಳಿಸಿದೆ. ಭರ್ತಿ ಒಂದು ದಶಕದ ನಂತರ ನೂರಕ್ಕಿಂತ ಕಡಿಮೆ ರನ್‌ಗಳಿಸಿದ ಸಾಧನೆ ಮಾಡಿದೆ ರಾಜಸ್ಥಾನ್ ರಾಯಲ್ಸ್.

ಟಿ20 ವಿಶ್ವಕಪ್‌ 2021: ಟೂರ್ನಿ ಆರಂಭಕ್ಕೂ ಮುನ್ನವೇ ದಾಖಲೆ ಬರೆದ ಭಾರತ vs ಪಾಕಿಸ್ತಾನ ಪಂದ್ಯ!ಟಿ20 ವಿಶ್ವಕಪ್‌ 2021: ಟೂರ್ನಿ ಆರಂಭಕ್ಕೂ ಮುನ್ನವೇ ದಾಖಲೆ ಬರೆದ ಭಾರತ vs ಪಾಕಿಸ್ತಾನ ಪಂದ್ಯ!

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಒಟ್ಟು ಮೂರು ಬಾರಿ 100ಕ್ಕಿಂತ ಕಡಿಮೆ ರನ್‌ಗಳಿಸಿದೆ. 2009ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕೇವಲ 58 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿತ್ತು. ಅದಾದ ನಂತರ 2011ರ ಐಪಿಎಲ್ ಆವೃತ್ತಿಯಲ್ಲಿ ಕೊಲ್ಕತ್ತಾ ನಯಟ್ ರೈಡರ್ಸ್ ತಮಡದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿಯೂ ಮೂರಂಕಿ ತಲುಪಲು ರಾಜಸ್ಥಾನ್ ರಾಯಲ್ಸ್ ವಿಫಲವಾಗಿತ್ತು. ಅಂದು ಆರ್‌ಆರ್ 81 ರನ್‌ಗಳಿಗೆ ಆಲೌಟ್ ಆಗಿತ್ತು.

ಅದಾದ ಬಳಿಕ ಒಂದು ದಶಕದ ಬಳಿಕ ರಾಜಸ್ಥಾನ್ ರಾಯಲ್ಸ್ 100ರ ಗಡಿ ದಾಟಲು ವಿಫಲವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಲೌಟ್ ಆಗದಿದ್ದರೂ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 90 ರನ್‌ ಮಾತ್ರ ಗಳಿಸಿದೆ.

MI vs RR: ರಾಜಸ್ಥಾನ್ ವಿರುದ್ಧ ಗೆದ್ದು ಪ್ಲೇಆಫ್ ಆಸೆ ಉಳಿಸಿಕೊಳ್ಳುತ್ತಾ ಮುಂಬೈ? ಬಲಿಷ್ಠ ತಂಡ ಯಾವುದು?MI vs RR: ರಾಜಸ್ಥಾನ್ ವಿರುದ್ಧ ಗೆದ್ದು ಪ್ಲೇಆಫ್ ಆಸೆ ಉಳಿಸಿಕೊಳ್ಳುತ್ತಾ ಮುಂಬೈ? ಬಲಿಷ್ಠ ತಂಡ ಯಾವುದು?

ಇನ್ನು ಇಂದಿನ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನಥನ್ ಕೌಲ್ಟರ್‌ನೈಟ್ ಅದ್ಭುತ ದಾಲಿಯನ್ನು ಸಂಘಟಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಲ್ವರು ಆಟಗಾರರ ವಿಕೆಟ್ ಕಬಳಿಸಿದ್ದಾರೆ ಆಸಿಸ್ ಮೂಲದ ಈ ಆಟಗಾರ. ಇನ್ನು ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಜಿಮ್ಮಿ ನೀಶಮ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 3 ವಿಕೆಟ್ ಪಡೆದುಕೊಂಡಿದ್ದಾರೆ. ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಎರಡು ವಿಕೆಟ್ ಕಿತ್ತು ಮಿಂಚಿದರು.

ರಾಜಸ್ಥಾನ್ ರಾಲ್ಸ್ ತಮಡದ ಪರವಾಗಿ ಯಾವೊಬ್ಬ ಆಟಗಾರ ಕೂಡ 30ರ ಗಡಿ ದಾಟಲು ವಿಫಲವಾಗಿದ್ದಾರೆ. ಆರಂಭಿಕ ಆಟಗಾರ ಇವಿನ್ ಲೂಯಿಸ್ ಗಳಿಸಿದ 24 ರನ್ ತಂಡದ ಹೈಯೆಸ್ಟ್ ಸ್ಕೋರ್ ಆಗಿದೆ. ಭರವಸೆಯ ಆರಂಬಿಕ ಆಟಗಾರ ಜೈಸ್ವಾಲ್, ನಾಯಕ ಸಂಜು ಸ್ಯಾಮ್ಸನ್, ಕಳೆದ ಪಂದ್ಯದಲ್ಲಿ ಮಿಂಚಿದ್ದ ಶಿವಂ ದುಬೆ ಸೇರಿದಂತೆ ಎಲ್ಲಾ ಆಟಗಾರರು ಕೂಡ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಇವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಕುಲ್ದಿಪ್ ಯಾದವ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ
ಬೆಂಚ್: ಜೈದೇವ್ ಉನಾದ್ಕಟ್, ಕ್ರಿಸ್ ಮೋರಿಸ್, ಲಿಯಾಮ್ ಲಿವಿಂಗ್ಸ್ಟನ್, ಮನನ್ ವೊಹ್ರಾ, ತಬ್ರೇಜ್ ಶಮ್ಸಿ, ಕೆಸಿ ಕರಿಯಪ್ಪ, ಮಹಿಪಾಲ್ ಲೊಮರ್, ಓಶಾನೆ ಥಾಮಸ್, ರಿಯಾನ್ ಪರಾಗ್, ಅನುಜ್ ರಾವತ್, ಕಾರ್ತಿಕ್ ತ್ಯಾಗಿ, ಜೆರಾಲ್ಡ್ ಕೊಯಿಟ್ಜಿ, ಮಯಾಂಕ್ ಮಾರ್ಕಂಡೆ, ಆಕಾಶ್ ಸಿಂಗ್

Pant CSK ವಿರುದ್ಧ ಗೆಲ್ಲುವ ಸಾಧಿಸಿದ ನಂತರ ಹೇಳಿದ್ದೇನು | Oneindia Kannada

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕಿರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಟ್ರೆಂಟ್ ಬೌಲ್ಟ್
ಬೆಂಚ್: ಅನುಕುಲ್ ರಾಯ್, ಕ್ರಿಸ್ ಲಿನ್, ಆಡಮ್ ಮಿಲ್ನೆ, ಆದಿತ್ಯ ತಾರೆ, ಪಿಯೂಷ್ ಚಾವ್ಲಾ, ರೂಶ್ ಕಲರಿಯಾ, ಧವಳ್ ಕುಲಕರ್ಣಿ, ಅನ್ಮೋಲ್ಪ್ರೀತ್ ಸಿಂಗ್, ರಾಹುಲ್ ಚಾಹರ್, ಮಾರ್ಕೊ ಜಾನ್ಸೆನ್, ಯುಧ್ವೀರ್ ಸಿಂಗ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್

Story first published: Wednesday, October 6, 2021, 10:07 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X