ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021 : ಹೊಸ ಮೈಲಿಗಲ್ಲು ನಿರ್ಮಿಸಿದ ಮೊಹಮ್ಮದ್ ಸಿರಾಜ್

IPL 2021 : Mohammed siraj becomes the 1st bowler to bowl 50 dot balls in IPL 2021

14ನೇ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗುರುವಾರ (ಏಪ್ರಿಲ್ 22) ನಡೆದ ಪಂದ್ಯದಲ್ಲಿ 10 ವಿಕೆಟ್‍ಗಳ ಅಮೋಘ ಗೆಲುವು ಸಾಧಿಸುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವನ್ನು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. 178 ರನ್‌ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿಯವರ ಭರ್ಜರಿ ಆರಂಭಿಕ ಆಟದ ನೆರವಿನಿಂದ ಯಾವುದೇ ವಿಕೆಟ್ ಕಳೆದುಕೊಳ್ಳದೇ 16.3 ಓವರ್‌ಗಳಲ್ಲಿಯೇ ಗುರಿಯನ್ನು ತಲುಪಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಮುಂಬೈನ ವಾಂಖೆಡೆ ಸ್ಟೇಡಿಯಂನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸಹಕಾರಿಯಾಗಿದ್ದ ಕಾರಣ ಮೊದಲು ಬೌಲಿಂಗ್ ಮಾಡಿ ತದನಂತರ ಚೇಸ್ ಮಾಡುವುದು ವಿರಾಟ್ ಯೋಜನೆಯಾಗಿತ್ತು. ವಿರಾಟ್ ಕೊಹ್ಲಿ ಅವರ ಈ ಆಲೋಚನೆ ಯಶಸ್ವಿಯಾಯಿತು, ಬೆಂಗಳೂರು ತಂಡದ ಬೌಲರ್‌ಗಳು ಯಶಸ್ವಿ ಪ್ರದರ್ಶನ ನೀಡುವುದರ ಮೂಲಕ 180ಕ್ಕಿಂತ ಕಡಿಮೆ ರನ್‌ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕಿದರು. ಅದರಲ್ಲಿಯೂ ಮೊಹಮ್ಮದ್ ಸಿರಾಜ್ ರಾಜಸ್ಥಾನ್ ರಾಯಲ್ಸ್ ತಂಡದ 3 ಪ್ರಮುಖ ವಿಕೆಟ್‍ಗಳನ್ನು ಪಡೆದು ಮತ್ತೊಮ್ಮೆ ಟೂರ್ನಿಯಲ್ಲಿ ಮಿಂಚಿದರು. ಈ ಪಂದ್ಯದ ಮೂಲಕ ಮೊಹಮ್ಮದ್ ಸಿರಾಜ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 50 ಡಾಟ್ ಬಾಲ್ ಹಾಕಿದ ಮೊದಲ ಬೌಲರ್ ಎಂಬ ಹೊಸ ಮೈಲಿಗಲ್ಲನ್ನು ನೆಟ್ಟರು. ಟೂರ್ನಿಯಲ್ಲಿ ಇದುವರೆಗೂ 90 ಎಸೆತಗಳನ್ನು ಎಸೆದಿರುವ ಸಿರಾಜ್ 53 ಡಾಟ್ ಬಾಲ್ ಹಾಕುವ ಮೂಲಕ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ.

2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬಾಲ್ ಎಸೆದ ಟಾಪ್ 5 ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ.

1. ಮೊಹಮ್ಮದ್ ಸಿರಾಜ್

1. ಮೊಹಮ್ಮದ್ ಸಿರಾಜ್

ಟೂರ್ನಿಯಲ್ಲಿ ಇದುವರೆಗೂ 15 ಓವರ್‌ಗಳನ್ನು ಮಾಡಿರುವ ಮೊಹಮ್ಮದ್ ಸಿರಾಜ್ 53 ಡಾಟ್ ಬಾಲ್ ಎಸೆಯುವುದರ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

2. ಟ್ರೆಂಟ್ ಬೌಲ್ಟ್

2. ಟ್ರೆಂಟ್ ಬೌಲ್ಟ್

ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೌಲ್ಟ್ 15.4 ಓವರ್‌ಗಳನ್ನು ಮಾಡಿ 49 ಡಾಟ್ ಬಾಲ್ ಎಸೆದಿದ್ದಾರೆ.

3. ದೀಪಕ್ ಚಹರ್

3. ದೀಪಕ್ ಚಹರ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹರ್ ಟೂರ್ನಿಯಲ್ಲಿ 15 ಓವರ್‌ ಮಾಡಿ 47 ಡಾಟ್ ಬಾಲ್ ಎಸೆದಿದ್ದಾರೆ.

4. ರಶೀದ್ ಖಾನ್

4. ರಶೀದ್ ಖಾನ್

ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ರಶೀದ್ ಖಾನ್ ಟೂರ್ನಿಯಲ್ಲಿ 16 ಓವರ್‌ಗಳನ್ನು ಮಾಡಿ 42 ಡಾಟ್ ಬಾಲ್ ಎಸೆದಿದ್ದಾರೆ.

5. ಕೈಲ್ ಜಾಮಿಸನ್

5. ಕೈಲ್ ಜಾಮಿಸನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೈಲ್ ಜಾಮಿಸನ್ ಟೂರ್ನಿಯಲ್ಲಿ 14 ಓವರ್‌ಗಳನ್ನು ಮಾಡಿ 40 ಡಾಟ್ ಬಾಲ್ ಹಾಕಿದ್ದಾರೆ.

Story first published: Friday, April 23, 2021, 13:24 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X