ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದುವರಿಯಲಿರುವ ಐಪಿಎಲ್‌ನಲ್ಲಿ ಆರ್‌ಸಿಬಿಯ ಗ್ಲೆನ್ ಮ್ಯಾಕ್ಸ್‌ವೆಲ್ ಆಡ್ತಾರಾ, ಇಲ್ವಾ?

IPL 2021: Most Australia cricketers confirm availability for second leg including glenn maxwell

ಕಳೆದ ಬಾರಿಯ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಭಾರತದಲ್ಲಿ ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29 ಪಂದ್ಯಗಳು ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ನಡೆದಿದ್ದವು.

ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌; ಪಂದ್ಯಶ್ರೇಷ್ಠ ಪ್ರಶಸ್ತಿ ಕುರಿತು ಜಹೀರ್ ಖಾನ್ ಬೇಸರಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌; ಪಂದ್ಯಶ್ರೇಷ್ಠ ಪ್ರಶಸ್ತಿ ಕುರಿತು ಜಹೀರ್ ಖಾನ್ ಬೇಸರ

ಅ‌ದರೆ 29 ಪಂದ್ಯಗಳ ನಂತರ ವಿವಿಧ ತಂಡಗಳ ಕೆಲವು ಆಟಗಾರರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಎಚ್ಚೆತ್ತುಕೊಂಡ ಬಿಸಿಸಿಐ ತಕ್ಷಣವೇ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಹೀಗೆ ಅರ್ಧಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಸಾಕಷ್ಟು ಕಸರತ್ತುಗಳನ್ನು ನಡೆಸಿತ್ತು. ಸಾಕಷ್ಟು ಪ್ರಯತ್ನದ ನಂತರ ಯುಎಇಯಲ್ಲಿ ಉಳಿದ ಐಪಿಎಲ್ 31 ಪಂದ್ಯಗಳನ್ನು ನಡೆಸಲು ಅವಕಾಶ ಪಡೆದುಕೊಂಡ ಬಿಸಿಸಿಐಗೆ ವಿದೇಶಿ ಆಟಗಾರರ ಅಲಭ್ಯತೆ ತಲೆನೋವಾಗಿ ಪರಿಣಮಿಸಿತ್ತು.

ಮಾಜಿ ಕ್ರಿಕೆಟಿಗರಿಗೆ ಹಣದ ಕೊಡುಗೆ; ಮಾದರಿ ಕೆಲಸಕ್ಕೆ ಮುಂದಾದ ಸಿಎಸ್‌ಕೆಮಾಜಿ ಕ್ರಿಕೆಟಿಗರಿಗೆ ಹಣದ ಕೊಡುಗೆ; ಮಾದರಿ ಕೆಲಸಕ್ಕೆ ಮುಂದಾದ ಸಿಎಸ್‌ಕೆ

ಮೊದಲಿಗೆ ಮುಂದುವರಿಯಲಿರುವ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಗೆ ಇಂಗ್ಲೆಂಡ್ ತಂಡದ ಆಟಗಾರರು ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಇಂಗ್ಲೆಂಡ್ ತಂಡದ ಬಹುತೇಕ ಎಲ್ಲಾ ಆಟಗಾರರು ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಯನ್ನು ಬಿಸಿಸಿಐ ಖಚಿತಪಡಿಸಿತು. ಇದಾದ ನಂತರ ಆಸ್ಟ್ರೇಲಿಯಾ ತಂಡದ ವಿವಿಧ ಆಟಗಾರರು ಐಪಿಎಲ್ ಮುಂದುವರೆದ ಭಾಗದಲ್ಲಿ ಭಾಗವಹಿಸುವುದು ಅನುಮಾನ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ತೊಂದರೆಯೂ ನಿವಾರಣೆಯಾಗಿದ್ದು ಕ್ರಿಕೆಟ್ ಆಸ್ಟ್ರೇಲಿಯಾವು ಮುಂದುವರಿಯುವ ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸುವ ನಿರ್ಧಾರ ಆಟಗಾರರ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು ಎಂದು ಹೇಳಿಕೆ ನೀಡಿದೆ. ಹೀಗಾಗಿ ಆಸ್ಟ್ರೇಲಿಯಾದ ಬಹುತೇಕ ಎಲ್ಲಾ ಆಟಗಾರರೂ ಸಹ ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತವಾಗಿದೆ.

ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌; ಪಂದ್ಯಶ್ರೇಷ್ಠ ಪ್ರಶಸ್ತಿ ಕುರಿತು ಜಹೀರ್ ಖಾನ್ ಬೇಸರಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌; ಪಂದ್ಯಶ್ರೇಷ್ಠ ಪ್ರಶಸ್ತಿ ಕುರಿತು ಜಹೀರ್ ಖಾನ್ ಬೇಸರ

ಮ್ಯಾಕ್ಸ್‌ವೆಲ್ ಕಥೆಯೇನು?

ಮ್ಯಾಕ್ಸ್‌ವೆಲ್ ಕಥೆಯೇನು?

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಮೊದಲನೇ ಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರವಸೆಯ ಆಟಗಾರರಲ್ಲೊಬ್ಬರಾಗಿದ್ದಾರೆ. ಹೀಗಾಗಿ ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಭಾಗವಹಿಸಲಿದ್ದಾರಾ ಅಥವಾ ಇಲ್ಲವಾ ಎಂಬ ಗೊಂದಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಸದ್ಯ ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದುವರೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತವಾಗಿದೆ.

ಐಪಿಎಲ್ ಮುಂದುವರೆಯಲಿರುವ ಭಾಗದಲ್ಲಿ ಪಾಲ್ಗೊಳ್ಳಲಿರುವ ಆಸಿಸ್ ಆಟಗಾರರು

ಐಪಿಎಲ್ ಮುಂದುವರೆಯಲಿರುವ ಭಾಗದಲ್ಲಿ ಪಾಲ್ಗೊಳ್ಳಲಿರುವ ಆಸಿಸ್ ಆಟಗಾರರು

ಈಗಾಗಲೇ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಸ್ಟೀವನ್ ಸ್ಮಿತ್ ಮತ್ತು ಮಾರ್ಕಸ್ ಸ್ಟಾಯಿನಿಸ್ ಮುಂದುವರಿಯಲಿರುವ ಐಪಿಎಲ್ ಪಂದ್ಯಗಳಿಗೆ ಅಧಿಕೃತವಾಗಿ ಲಭ್ಯರಾಗಿದ್ದಾರೆ. ಈ ಇಬ್ಬರೂ ಸಹ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಾಗಿದ್ದು ಮುಂಬರುವ ಐಪಿಎಲ್ ಮುಂದುವರಿದ ಪಂದ್ಯಗಳಲ್ಲಿ ಭಾಗವಹಿಸುವುದಾಗಿ ಸ್ವತಃ ಹೇಳಿಕೆ ನೀಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಂಡದ ನಾಥನ್ ಕೌಲ್ಟರ್‌ನೈಲ್, ಕ್ರಿಸ್ ಲಿನ್ ಕೂಡ ಮುಂದುವರೆಯಲಿರುವ ಐಪಿಎಲ್ ಟೂರ್ನಿಗೆ ಲಭ್ಯರಾಗಿದ್ದಾರೆ.

 ಐಪಿಎಲ್ ಪುನಾರಂಭ ಯಾವಾಗ?

ಐಪಿಎಲ್ ಪುನಾರಂಭ ಯಾವಾಗ?

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯು ಸೆಪ್ಟೆಂಬರ್ 19ರಂದು ಯುಎಇಯಲ್ಲಿ ಪುನಾರಂಭವಾಗಲಿದ್ದು ಅಕ್ಟೋಬರ್ 15ಕ್ಕೆ ಕೊನೆಗೊಳ್ಳಲಿದೆ. ಈ ಬಾರಿಯೂ ಆಟಗಾರರಿಗೆ ಬಯೋಬಬಲ್ ಇರಲಿದ್ದು ಆಟಗಾರರು ಕಳೆದ ಬಾರಿಯ ಹಾಗೆ ಈ ಬಾರಿಯೂ ಬಯೋಬಬಲ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

Story first published: Wednesday, August 11, 2021, 10:07 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X