ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹೊಸ ಆವೃತ್ತಿಗೆ ಸಿದ್ಧತೆ, ಚೆನ್ನೈಗೆ ಬಂದಿಳಿದ ಧೋನಿ, ರಾಯುಡು

IPL 2021: MS Dhoni, Ambati Rayudu arrive in Chennai for training camp

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬುಧವಾರ ಚೆನ್ನೈಗೆ ತಲುಪಿದ್ದಾರೆ. ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತೊಂದು ಆವೃತ್ತಿಗೆ ಮುನ್ನಡೆಸಲು ಸಜ್ಜಾಗಿರುವ ಧೋನಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಬಂದಿಳಿದಿದ್ದಾರೆ.

ಚೆನ್ನೈನ ವಿಮಾನ ನಿಲ್ದಾಣದಲ್ಲಿ ಧೋನಿ ಬಿಳಿ ಟಿ ಶರ್ಟ್‌ನಲ್ಲಿ ಕಾಣಿಸಿಕೊಂಡರು. ಮುಖಕ್ಕೆ ಮಾಸ್ಕ್ ಧರಿಸಿದ್ದ ಧೋನಿ ನಗು ಮುಖದಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ಪೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಹೊಸ ಆವೃತ್ತಿ ನಾಯಕನ್ನು ಸ್ವಾಗತಿಸಿದೆ.

ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

ಇದಕ್ಕೂ ಮುನ್ನ ಅನುಭವಿ ಆಟಗಾರ ಅಂಬಾಟಿ ರಾಯುಡು ಚೆನ್ನೈ ನಗರವನ್ನು ತಲುಪಿದ್ದರು. ಬಳಿಕ ಅವರನ್ನು ನಾಯಕ ಧೋನಿ ಹಾಗೂ ಕೆಲ ದೇಶೀಯ ಕ್ರಿಕೆಟ್‌ನ ತಾರೆಗಳು ಕೂಡಿಕೊಂಡಿದ್ದಾರೆ. ಈ ಎಲ್ಲಾ ಆಟಗಾರರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಶಿಬಿರ ಆರಂಭವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಶಿಬಿರವನ್ನು ಎಂಎಸ್ ಧೋನಿ ಮಾರ್ಚ್ ಎರಡನೇ ವಾರದಿಂದ ಮುನ್ನಡೆಸುವ ನಿರೀಕ್ಷೆಯಿದೆ. ಆದರೆ ಐಪಿಎಲ್ ಮುಂದಿನ ಆವೃತ್ತಿಯ ಆರಂಭದ ದಿನಾಂಕ ಹಾಗೂ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೂ ಕೂಡ ಖಚಿತಪಡಿಸಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅದಕ್ಕೂ ಮುನ್ನವೇ ಸಿದ್ದತೆಗಳನ್ನು ಆರಂಭಿಸಲು ಸಜ್ಜಾಗಿದೆ. ಯುಎಇನಲ್ಲಿ ನಡೆದ 2020ರ ಐಪಿಎಲ್‌ನಿಂದ ಚೆನ್ನೈ ತಂಡ ಹೊರಬಿದ್ದ ನಂತರ ಮಹೇಂದ್ರ ಸಿಂಗ್ ಧೋನಿ ಸ್ಪರ್ಧಾಕಣದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವುಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವು

ಕಳೆದ ಬಾರಿಯೂ ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಆದರೆ ಕೊರೊನಾ ವೈರಸ್ ಭಾರತದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ ನಂತರ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಅದಾದ ಬಳಿಕ ಮರು ನಿಗದಿಯಾದಾಗಲೂ ಚೆನ್ನೈ ತಂಡದ ತರಬೇತಿ ನಡೆದಿತ್ತು. ಬಳಿಕ ಯುಎಇಗೆ ಹಾರಿದ್ದ ಸಿಎಸ್‌ಕೆ ತಂಡದ ಆಟಗಾರರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ಆತಂಕವನ್ನು ಮೂಡಿಸಿತ್ತು. ಅದಾದ ಬಳಿಕ ವೈಯಕ್ತಿಕ ಕಾರಣಗಳನ್ನು ನೀಡಿ ಸುರೇಶ್ ರೈನಾ ಹಠಾತ್ ಆಗಿ ತಂಡವನ್ನು ತೊರೆದು ಸುದ್ದಿಯಾಗಿದ್ದರು.

Story first published: Thursday, March 4, 2021, 10:57 [IST]
Other articles published on Mar 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X