ಬ್ರಾವೊಗೆ ಧೋನಿ ನೀಡಿದ ಆ ಮಾಸ್ಟರ್‌ಮೈಂಡ್ ಉಪಾಯದಿಂದ ಬಿತ್ತು ನೆಲಕಚ್ಚಿ ನಿಂತಿದ್ದ ಕೊಹ್ಲಿ ವಿಕೆಟ್!

ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 35ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 24ರ ಶುಕ್ರವಾರದಂದು ನಡೆಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು. ಹೀಗೆ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಆರಂಭವನ್ನು ಪಡೆದುಕೊಂಡಿತು. ಬೆಂಗಳೂರು ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅಕ್ಷರಶಃ ನೆಲಕಚ್ಚಿ ನಿಂತು ತಂಡಕ್ಕೆ ಅಗತ್ಯವಾದ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. 13 ಓವರ್‌ಗಳವರೆಗೂ ಇಬ್ಬರೂ ಸಹ ವಿಕೆಟ್ ಒಪ್ಪಿಸದೇ 108 ರನ್‌ಗಳ ಜತೆಯಾಟವನ್ನಾಡುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೊಡ್ಡ ಮೊತ್ತವನ್ನು ಕಲೆಹಾಕುವ ಭರವಸೆಯನ್ನು ಹುಟ್ಟಿಸಿದ್ದರು.

ಆ ಇಬ್ಬರು ಆಟಗಾರರಿಂದ ಸೂರ್ಯಕುಮಾರ್ ಯಾದವ್‌ಗೆ ಸರಿಯಾದ ಅವಕಾಶ ಸಿಗಲಿಲ್ಲ; ಗಂಭೀರ್ ಬೇಸರಆ ಇಬ್ಬರು ಆಟಗಾರರಿಂದ ಸೂರ್ಯಕುಮಾರ್ ಯಾದವ್‌ಗೆ ಸರಿಯಾದ ಅವಕಾಶ ಸಿಗಲಿಲ್ಲ; ಗಂಭೀರ್ ಬೇಸರ

ಆದರೆ 14ನೇ ಓವರ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ವೇಗವೇ ಕುಂಠಿತವಾಗಿ ಹೋಯಿತು. 14ನೇ ಓವರ್ ಬೌಲಿಂಗ್ ಮಾಡಲು ಚೆನ್ನೈ ನಾಯಕ ಎಂಎಸ್ ಧೋನಿ ಡ್ವೇನ್ ಬ್ರಾವೊಗೆ ಚೆಂಡನ್ನು ನೀಡಿದರು. ಹೀಗೆ 14ನೇ ಓವರ್‌ನ ಎರಡನೇ ಎಸೆತದಲ್ಲಿಯೇ ಡ್ವೇನ್ ಬ್ರಾವೊ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದರು. ಆಗತಾನೆ ಅರ್ಧಶತಕ ಸಿಡಿಸಿ ಒಂದೊಳ್ಳೆ ಇನಿಂಗ್ಸ್ ಕಟ್ಟಿದ್ದ ವಿರಾಟ್ ಕೊಹ್ಲಿ ಡ್ವೇನ್ ಬ್ರಾವೊ ಎಸೆತಕ್ಕೆ ಸಿಕ್ಸ್ ಬಾರಿಸಲು ಹೋಗಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ 53 ( 41 ) ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟ ಸಂಪೂರ್ಣವಾಗಿ ಬದಲಾಗಿ ಹೋಯಿತು. ನಂತರ ಬಂದ ಆಟಗಾರರು ನಿಧಾನಗತಿಯ ಬ್ಯಾಟಿಂಗ್ ಮಾಡಿ, ಸಾಲುಸಾಲಾಗಿ ವಿಕೆಟ್ ಒಪ್ಪಿಸಿದರು. ಹೀಗೆ 13 ಓವರ್‌ಗಳವರೆಗೂ ಯಾವುದೇ ವಿಕೆಟ್ ಕಳೆದುಕೊಳ್ಳದೆ 111 ರನ್ ಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಬೆಂಗಳೂರು ತಂಡ ನೀಡಿದ 157 ರನ್‌ಗಳ ಸಾಧಾರಣ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 18.1 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಮುಟ್ಟಿತು.

ಐಪಿಎಲ್ ರದ್ದು ಭೀತಿ; ಚೆನ್ನೈ ಆಟಗಾರರನ್ನು ಮುದುಕರಿಗೆ ಹೋಲಿಸಿದ ವಿರೇಂದ್ರ ಸೆಹ್ವಾಗ್!ಐಪಿಎಲ್ ರದ್ದು ಭೀತಿ; ಚೆನ್ನೈ ಆಟಗಾರರನ್ನು ಮುದುಕರಿಗೆ ಹೋಲಿಸಿದ ವಿರೇಂದ್ರ ಸೆಹ್ವಾಗ್!

ಹೀಗೆ ಪಂದ್ಯ ಮುಗಿದ ನಂತರ ಗೆಲುವಿನ ಕುರಿತು ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಡ್ವೇನ್ ಬ್ರಾವೊ ಕುರಿತು ಮಾತನಾಡಿದ್ದು ನೆಲಕಚ್ಚಿ ನಿಂತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ವಿಕೆಟ್ ಪಡೆಯಲು ತಾವು ಹೆಣೆದ ಯೋಜನೆಯ ಬಗ್ಗೆ ಈ ಕೆಳಕಂಡಂತೆ ಹೇಳಿಕೊಂಡಿದ್ದಾರೆ.

ವಿಕೆಟ್ ತೆಗೆಯಲು ಬ್ರಾವೊಗೆ ಉಪಾಯ ನೀಡಿದ ಧೋನಿ

ವಿಕೆಟ್ ತೆಗೆಯಲು ಬ್ರಾವೊಗೆ ಉಪಾಯ ನೀಡಿದ ಧೋನಿ

13 ಓವರ್‌ಗಳಾದರೂ ಯಾವುದೇ ವಿಕೆಟ್ ಕಳೆದುಕೊಳ್ಳದೆ ಉತ್ತಮ ಆಟವನ್ನು ಆಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ತೆಗೆಯಲು ಹದಿನಾಲ್ಕನೇ ಓವರ್‌ನ್ನು ಧೋನಿ ಡ್ವೇನ್ ಬ್ರಾವೊಗೆ ನೀಡಿದರು. ಹೀಗೆ ಡ್ವೇನ್ ಬ್ರಾವೋಗೆ ಬೌಲಿಂಗ್ ನೀಡಿದ ಧೋನಿ ಓವರ್‌ನ ಆರೂ ಎಸೆತಗಳನ್ನು ವಿಭಿನ್ನವಾಗಿ ಮತ್ತು ನಿಧಾನವಾಗಿ ಎಸೆಯುವಂತೆ ಸಲಹೆಯನ್ನು ನೀಡಿದರು. ಇನ್ನು ಧೋನಿ ಹೇಳಿದ ಹಾಗೆ ಡ್ವೇನ್ ಬ್ರಾವೊ ವಿರಾಟ್ ಕೊಹ್ಲಿಗೆ ಸ್ಲೋ ಡಿಲವರಿಗಳನ್ನು ಎಸೆದರು. ಈ ಪರಿಣಾಮವಾಗಿ ಬ್ರಾವೊ ಹಾಕಿದ ಎರಡನೇ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

3 ವಿಕೆಟ್ ಪಡೆದು ಮಿಂಚಿದ ಡ್ವೇನ್ ಬ್ರಾವೊ

3 ವಿಕೆಟ್ ಪಡೆದು ಮಿಂಚಿದ ಡ್ವೇನ್ ಬ್ರಾವೊ

ಇನ್ನು ಈ ಪಂದ್ಯದಲ್ಲಿ ಒಟ್ಟು 3 ವಿಕೆಟ್‍ಗಳನ್ನು ಪಡೆದ ಡ್ವೇನ್ ಬ್ರಾವೊ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲಿಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಮಿಂಚಿದ ಡ್ವೇನ್ ಬ್ರಾವೊ ಪಂದ್ಯದ ಕೊನೆಯ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಹರ್ಷಲ್ ಪಟೇಲ್ ಅವರ ವಿಕೆಟ್ ಪಡೆದು ಮಿಂಚಿದರು.

Kohli ಹಾಗು Dhoni ಅಭಿಮಾನಿಗಳಿಗೆ ಇದು ವಿಶೇಷ ಪಂದ್ಯ | Oneindia Kannada
ಮತ್ತೆ ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್

ಮತ್ತೆ ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯಗಳಿಸುವುದರ ಮೂಲಕ ಅಗ್ರಸ್ಥಾನಕ್ಕೇರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯಗಳಿಸಿದ ನಂತರ ದ್ವಿತೀಯ ಸ್ಥಾನಕ್ಕೆ ಕುಸಿದಿತ್ತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಜಯಗಳಿಸುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಅಗ್ರಸ್ಥಾನಕ್ಕೇರಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ. ಟೂರ್ನಿಯಲ್ಲಿ ಇದುವರೆಗೂ ಒಟ್ಟು 9 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಪಂದ್ಯಗಳಲ್ಲಿ ಜಯಗಳಿಸಿ, ಕೇವಲ 2 ಪಂದ್ಯಗಳಲ್ಲಿ ಸೋತು, 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಗ್ರಸ್ಥಾನದಲ್ಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Saturday, September 25, 2021, 9:42 [IST]
Other articles published on Sep 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X