ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ದುಬೈಗೆ ಹಾರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು

IPL 2021: MS Dhoni, Other Chennai Super Kings Players Depart For Dubai

ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾ ವೈರಸ್ ಕಾರಣದಿಂದಾಗಿ ಅರ್ಧದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. 29 ಪಂದ್ಯಗಳು ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ಮುಗಿದ ನಂತರ ವಿವಿಧ ತಂಡಗಳ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣದಿಂದಾಗಿ ಎಚ್ಚೆತ್ತ ಬಿಸಿಸಿಐ ತಾತ್ಕಾಲಿಕವಾಗಿ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿತ್ತು.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿ

ನಂತರದ ದಿನಗಳಲ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೂ ಮುನ್ನವೇ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯುಎಇಯಲ್ಲಿ ಮುಂದುವರೆಸಲು ತೀರ್ಮಾನಿಸಿತು. ಹೀಗೆ ಬಿಸಿಸಿಐ ಅರ್ಧಕ್ಕೆ ಸ್ಥಗಿತಗೊಂಡಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯುಎಇಯಲ್ಲಿ ಸೆಪ್ಟೆಂಬರ್‌ 19ರಿಂದ ಅಕ್ಟೋಬರ್ 15ರವರೆಗೆ ನಡೆಸಲು ತೀರ್ಮಾನಿಸಿದೆ.

ಈ ಕಾರಣದಿಂದಲೇ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದ ಇನ್ಜಮಾಮ್ ಉಲ್ ಹಕ್!ಈ ಕಾರಣದಿಂದಲೇ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದ ಇನ್ಜಮಾಮ್ ಉಲ್ ಹಕ್!

ಸದ್ಯ ಟೀಮ್ ಇಂಡಿಯಾದ ಹಲವಾರು ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿದ್ದು, ಇನ್ನೂ ಕೆಲ ಆಟಗಾರರು ಮುಂಬರಲಿರುವ ಐಪಿಎಲ್ ಟೂರ್ನಿಗೆ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಉಳಿದ ಎಲ್ಲಾ ತಂಡಗಳ ಆಟಗಾರರಿಗಿಂತ ಮೊದಲು ದುಬೈ ಪ್ರವಾಸವನ್ನು ಕೈಗೊಂಡಿದ್ದಾರೆ. ಶುಕ್ರವಾರ ( ಆಗಸ್ಟ್ 13 ) ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈಗೆ ಪ್ರಯಾಣ ಬೆಳೆಸಿದೆ.

ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಬಾರಿಸಿದ ಒಂದು ಶತಕದಿಂದ ನಿರ್ಮಾಣವಾದ ದಾಖಲೆಗಳು ಅಷ್ಟಿಷ್ಟಲ್ಲ!ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಬಾರಿಸಿದ ಒಂದು ಶತಕದಿಂದ ನಿರ್ಮಾಣವಾದ ದಾಖಲೆಗಳು ಅಷ್ಟಿಷ್ಟಲ್ಲ!

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತದ ಕ್ರಿಕೆಟಿಗರ ಗುಂಪು ಶುಕ್ರವಾರದಂದು ದುಬೈಗೆ ಹಾರಿದೆ. ದುಬೈಗೆ ಹಾರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಎಂಎಸ್ ಧೋನಿ, ಸುರೇಶ್ ರೈನಾ, ದೀಪಕ್ ಚಹರ್, ರುತುರಾಜ್ ಗಾಯಕ್ವಾಡ್ ಮತ್ತು ಕರಣ್ ಶರ್ಮಾರ ಚಿತ್ರಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದೆ.

ಹೀಗೆ ದುಬೈಗೆ ಹಾರಿಸುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ದುಬೈ ತಲುಪಿದ ನಂತರ 7 ದಿನಗಳ ಕಾಲ ವ್ಯವಸ್ಥಿತ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕಾಗುತ್ತದೆ. ತದನಂತರ ತಂಡದ ಇತರೆ ಆಟಗಾರರ ಜೊತೆಗೂಡಿ ಈ ಆಟಗಾರರು ಅಭ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ. ಸದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಭಾರತ vs ಇಂಗ್ಲೆಂಡ್: ಅಶ್ವಿನ್‌ ಬದಲು ಇಶಾಂತ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಕೊಹ್ಲಿಭಾರತ vs ಇಂಗ್ಲೆಂಡ್: ಅಶ್ವಿನ್‌ ಬದಲು ಇಶಾಂತ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಕೊಹ್ಲಿ

ಇನ್ನು ಭಾರತದಲ್ಲಿ ಆರಂಭವಾಗಿದ್ದ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಲ್ಲಾ ತಂಡಗಳಿಗಿಂತ ಮುಂಚಿತವಾಗಿ ಅಭ್ಯಾಸವನ್ನು ಆರಂಭಿಸಿತ್ತು. ಇದೀಗ ದ್ವಿತೀಯಾರ್ಧದಲ್ಲಿಯೂ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇತರೆ ತಂಡಗಳಿಗಿಂತ ಮುಂಚಿತವಾಗಿ ದುಬೈ ಪ್ರವಾಸ ಕೈಗೊಳ್ಳುತ್ತಿದ್ದು ಮುಂದುವರಿಯಲಿರುವ ಐಪಿಎಲ್ ಟೂರ್ನಿಗೆ ಕಠಿಣ ಅಭ್ಯಾಸವನ್ನು ನಡೆಸಲಿದೆ.

Story first published: Friday, August 13, 2021, 20:47 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X