ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ವಿಶಿಷ್ಠ ದಾಖಲೆ ಬರೆಯಲಿದ್ದಾರೆ ಎಂಎಸ್ ಧೋನಿ!

IPL 2021: MS Dhoni set to become first player to earn Rs 150 crores in IPL

ಚೆನ್ನೈ: ಟೀಮ್ ಇಂಡಿಯಾದ ಮಾಜಿ ನಾಯಕ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕರಾಗಿರುವ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ವಿಶೇಷ ದಾಖಲೆ ನಿರ್ಮಿಸಲಿದ್ದಾರೆ. 2021ರ ಸೀಸನ್‌ನಲ್ಲೂ ಧೋನಿ ಸಿಎಸ್‌ಕೆ ಪರ ಆಡುವ ನಿರೀಕ್ಷೆಯಿದೆ. ಹೀಗಾಗಿ ಐಪಿಎಲ್‌ನಲ್ಲಿ 150 ಕೋಟಿ ರೂ.ಗೂ ಹೆಚ್ಚು ಸಂಬಳ ಪಡೆದ ಚೊಚ್ಚಲ ಆಟಗಾರನಾಗಿ ಧೋನಿ ಗುರುತಿಸಿಕೊಳ್ಳಲಿದ್ದಾರೆ.

ಐಪಿಎಲ್ ಮಿನಿ ಹರಾಜು: ದಿನಾಂಕ, ಆಟಗಾರರ ವರ್ಗಾವಣೆ ನಿಯಮ ಮತ್ತು ಅರ್ಹತೆಐಪಿಎಲ್ ಮಿನಿ ಹರಾಜು: ದಿನಾಂಕ, ಆಟಗಾರರ ವರ್ಗಾವಣೆ ನಿಯಮ ಮತ್ತು ಅರ್ಹತೆ

2020ರ ಸೀಸನ್‌ನಲ್ಲಿ ಕಿಂಗ್ಸ್‌ XI ಪಂಜಾಬ್‌ ವಿರುದ್ಧ ಲೀಗ್‌ ಹಂತದ ಕೊನೇ ಪಂದ್ಯದ ಟಾಸ್ ವೇಳೆ 2021ರ ಸೀಸನ್‌ನಲ್ಲಿ ತಾನು ಆಡುವುದಾಗಿ ಧೋನಿ ಹೇಳಿಕೊಂಡಿದ್ದರು. ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಕೂಡ ಮುಂದಿನ ಸೀಸನ್‌ನಲ್ಲೂ ಧೋನಿ ತಂಡ ಮುನ್ನಡೆಸಲಿದ್ದಾರೆ ಎಂದಿದ್ದರು.

ಭಾರತದ ದೊಡ್ಡ ಶಕ್ತಿ ಏನೆಂದು ತಿಳಿಸಿದ ಆಸೀಸ್ ಕೋಚ್ ಲ್ಯಾಂಗರ್!ಭಾರತದ ದೊಡ್ಡ ಶಕ್ತಿ ಏನೆಂದು ತಿಳಿಸಿದ ಆಸೀಸ್ ಕೋಚ್ ಲ್ಯಾಂಗರ್!

ಇದರ ಅರ್ಧ ಏನೆಂದರೆ ಸಿಎಸ್‌ಕೆ ತಂಡ 2021ರ ಸೀಸನ್‌ನಲ್ಲೂ 15 ಕೋಟಿ ರೂ.ಗೆ ಧೋನಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.

ಐಪಿಎಲ್ ಇತಿಹಾಸದಲ್ಲೇ ಮೊದಲಿಗ

ಐಪಿಎಲ್ ಇತಿಹಾಸದಲ್ಲೇ ಮೊದಲಿಗ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂಎಸ್ ಧೋನಿ ಇದುವರೆಗೂ 137.8 ಕೋ.ರೂ. ಸಂಬಳ ಪಡೆದುಕೊಂಡಿದ್ದಾರೆ. 2021ರ ಸೀಸನ್‌ನಲ್ಲಿ ಧೋನಿಯನ್ನು ಸಿಎಸ್‌ಕೆ 15 ಕೋ.ರೂ.ಗೆ ಉಳಿಸಿಕೊಂಡರೆ ಧೋನಿಯ ಒಟ್ಟು ಸಂಬಳ 150 ಕೋ.ರೂ. ಮೀರಲಿದೆ. ಐಪಿಎಲ್‌ನಲ್ಲಿ ಇಷ್ಟು ಸಂಬಳ ಪಡೆದ ಆಟಗಾರ ಇತಿಹಾಸದಲ್ಲೇ ಇಲ್ಲ.

ಬೇರೆ ಬೇರೆ ವರ್ಷಗಳಲ್ಲಿ ಧೋನಿ ಸಂಬಳ

ಬೇರೆ ಬೇರೆ ವರ್ಷಗಳಲ್ಲಿ ಧೋನಿ ಸಂಬಳ

ಧೋನಿಗೆ ಐಪಿಎಲ್ ಫ್ರಾಂಚೈಸಿ ಬೇರೆ ಬೇರೆ ಸೀಸನ್‌ಗಳಲ್ಲಿ ನೀಡಿದ ಸಂಬಳದ ಮಾಹಿತಿ ಇಂತಿದೆ. 2020ರಲ್ಲಿ 15 ಕೋ.ರೂ., 2019ರಲ್ಲಿ 15 ಕೋ.ರೂ, 2018ರಲ್ಲಿ 15 ಕೋ.ರೂ., 2017ರಲ್ಲಿ 12.5 ಕೋ.ರೂ, 2016ರಲ್ಲಿ 12.5 ಕೋ.ರೂ., 2015ರಲ್ಲಿ 12.5 ಕೋ.ರೂ., 2014ರಲ್ಲಿ 12.5 ಕೋ.ರೂ., 2013ರಲ್ಲಿ 8.2 ಕೋ.ರೂ, 2012ರಲ್ಲಿ 8.2 ಕೋ.ರೂ., 2011ರಲ್ಲಿ 8.2 ಕೋ.ರೂ., 2010ರಲ್ಲಿ 6 ಕೋ.ರೂ., 20೦9ರಲ್ಲಿ 6 ಕೋ.ರೂ, 2008ರಲ್ಲಿ 6 ಕೋ.ರೂ. ಒಟ್ಟಿಗೆ 1,378,400,000 ರೂ.

ವಿರಾಟ್, ರೋಹಿತ್ ಒಟ್ಟು ಸಂಬಳ

ವಿರಾಟ್, ರೋಹಿತ್ ಒಟ್ಟು ಸಂಬಳ

ಐಪಿಎಲ್‌ನಲ್ಲಿ ಇನ್ನುಳಿದ ಪ್ರಮುಖ ಆಟಗಾರರಾದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಒಟ್ಟು 131.6 ಕೋ.ರೂ. ಸಂಬಳ ಪಡೆಯುತ್ತಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ 126.2 ಕೋ.ರೂ. ಸಂಬಳ ಗಳಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ರೋಹಿತ್ ಮತ್ತು ವಿರಾಟ್ ಇಬ್ಬರೂ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಅತ್ಯಧಿಕ ಸಂಬಳ ಪಡೆಯುವ ಆಟಗಾರರಾಗಿದ್ದಾರೆ.

Story first published: Thursday, January 7, 2021, 19:00 [IST]
Other articles published on Jan 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X